ಬಳ್ಳಾರಿ ಜೈಲಲ್ಲಿರೋ ದರ್ಶನ್ಗೆ ಒಂದೊಂದು ಕ್ಷಣವೂ ನರಕ ದರ್ಶನವಾಗ್ತಿದೆ. ಚಾಪೆ ಮೇಲೆ ಮಲಗೋದಕ್ಕಾಗದೆ ಕಣ್ಣೀರು ಸುರಿಸ್ತಿದ್ದಾರೆ. ತಪಾಸಣೆ ನಡೆಸಿದ್ದ ವೈದ್ಯರು, ಸ್ಕ್ಯಾನಿಂಗ್ ಮಾಡಲೇ ಬೇಕು ಅಂತಾ ವರದಿ ನೀಡಿದ್ದಾರಂತೆ. ಕಾಲಚಕ್ರ ಹೇಗೆ ತಿರುಗುತ್ತೆ ನೋಡಿ, ಹಿಂದೆಲ್ಲಾ, ಮಾಡಿದ ಕರ್ಮಕ್ಕೆ ಪಾಪದ ಫಲ ಅನುಭವಿಸೋದಕ್ಕೆ ಹತ್ತಾರು ವರ್ಷ ಬೇಕಿತ್ತು. ಆದರೆ ಈಗ ಹಾಗಿಲ್ಲ. ಅಲ್ಲೇ ಡ್ರಾ ಅಲ್ಲೇ ಬಹುಮಾನ. ಸ್ವಾಮಿಯ ಕೇಸ್ನಲ್ಲಿ ಜೈಲು ಸೇರಿದ ಜಸ್ಟ್ ಮೂರೇ ಮೂರು ತಿಂಗಳಿಗೆ, ಕರ್ಮ ರಿಟರ್ನ್ ಆಗ್ತಿದೆಯಂತೆ.
ಪರಪ್ಪನ ಅಗ್ರಹಾರ ಜೈಲಲ್ಲಿದ್ದಾಗ ಚಕ್ರವರ್ತಿಯಂತಿದ್ದ ದರ್ಶನ್ಗೆ, ಜೈಲು ಶಿಕ್ಷೆಯ ಅನುಭವವೇ ಆಗಿರ್ಲಿಲ್ಲ. ಯಾವಾಗ ರಾಜಾತಿಥ್ಯ ಎಫೆಕ್ಟ್ನಿಂದ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದ್ರೋ ಆಗಲೇ ನೋಡಿ, ಅಸಲಿ ಸೆರೆವಾಸ ಶುರುವಾಗಿದ್ದು. ದರ್ಶನ್ ಈಗ ಇರೋ ಪರಿಸ್ಥಿತಿಯಲ್ಲಿ ಕೂರೋದಕ್ಕೆ ಆಗ್ತಿಲ್ಲ, ನಿಲ್ಲೋದಕ್ಕೂ ಆಗ್ತಿಲ್ಲ. ಚಾಪೆ ಮೇಲೆ ಮಲಗಿದ್ರಂತೂ ಮುಳ್ಳಿನ ಹಾಸಿಗೆ ಮೇಲೆ ಮಲಗಿದಂತಾಗ್ತಿದ್ಯಂತೆ. ಹೀಗಾಗಿಯೇ ಬಳ್ಳಾರಿ ಜೈಲಿಗೆ ಬಂದಿದ್ದ ನರರೋಗ ತಜ್ಞ ಡಾ.ವಿಶ್ವನಾಥ್, ದರ್ಶನ್ ಆರೋಗ್ಯ ತಪಾಸಣೆ ಮಾಡಿದ್ದರು. ಈ ವೇಳೆ ದರ್ಶನ್ಗೆ ಚಿಕಿತ್ಸೆಯ ಅವಶ್ಯಕತೆ ಇದೆ ಅನ್ನೋದನ್ನ ಜೈಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದಾರೆ. ಹೀಗಾಗಿ ನಿನ್ನೆ ಚಕಪ್ ಮಾಡಿ ಹೋಗಿದ್ದ ನರರೋಗ ತಜ್ಞರು, ಜೈಲಾಧಿಕಾರಿಗಳಿಗೆ ರಿಪೋರ್ಟ್ ಸಲ್ಲಿಸಿದ್ದಾರೆ. MRI-ಸಿಟಿ ಸ್ಕ್ಯಾನ್ ಮಾಡಲೇ ಬೇಕು ಅಂತಾ ಸೂಚನೆ ನೀಡಿದ್ದಾರಂತೆ.
ವೈದ್ಯರು ನೀಡಿರೋ ವರದಿ ಪ್ರಕಾರ ದರ್ಶನ್ಗೆ ತುರ್ತಾಗಿ MRI ಹಾಗೂ ಸಿಟಿ ಸ್ಕ್ಯಾನ್ ಮಾಡಿಸಬೇಕಿದೆ. ಈ ಎರಡು ಸ್ಕ್ಯಾನಿಂಗ್ ಆದ ನಂತರ ಸರ್ಜರಿ ಮಾಡಬೇಕಾ ಬೇಡ್ವಾ ಅನ್ನೋದನ್ನ ವೈದ್ಯರು ನಿರ್ಧಾರ ಮಾಡಲಿದ್ದಾರೆ. ಇದರ ಜೊತೆಗೆ ಫಿಜಿಯೋಥೆರಪಿಯ ಅವಶ್ಯಕತೆಯೂ ಇದೆಯಂತೆ. ಹಾಗೆಯೇ ನರಗಳ ಪರೀಕ್ಷೆಗೂ ವೈದ್ಯರು ಸೂಚನೆ ನೀಡಿದ್ದು, ನಿತ್ಯವೂ ಚಾಪೆ ಮೇಲೆ ಮಲಗೋದ್ರಿಂದಾಗಿ ಬೆನ್ನು ನೋವು ಜಾಸ್ತಿ ಆಗಿದ್ಯಂತೆ. ಹೀಗಾಗಿ ಮಲಗಲು ಕಾಟ್ ಅಥವಾ ಕೂರಲು ಚೇರ್ ನೀಡುವಂತೆ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಬೆಂಗಳೂರಿಗೆ ಬರ್ತಾರಾ ದರ್ಶನ್?: ದರ್ಶನ್ಗೆ ಎಮ್ಆರ್ಐ ಸ್ಕ್ಯಾನ್ ಮಾಡಿಸೋದಕ್ಕೆ ಕಳೆದೊಂದು ವಾರದಿಂದಲೂ ವೈದ್ಯರು ಸೂಚನೆ ನೀಡ್ತಿದ್ದಾರೆ. ಆದರೆ, ದರ್ಶನ್ ಮಾತ್ರ ಇದ್ಯಾವುದಕ್ಕೂ ಒಪ್ತಿಲ್ಲ. ನಾನು ಜಾಮೀನಿ ಸಿಕ್ಮೇಲೆ ಬೆಂಗಳೂರಲ್ಲೇ ಟ್ರೀಟ್ಮೆಂಟ್ ತಗೊಳ್ತೀನಿ ಅಂತಾ ಮಾತ್ರೆಗಳನ್ನ ಮಾತ್ರ ಸೇವಿಸ್ತಿದ್ದಾರಂತೆ. ಇದೀಗ ವೈದ್ಯರೇ ದರ್ಶನ್ ರ ಆರೋಗ್ಯದ ಕುರಿತು ಜೈಲಾಧಿಕಾರಿಗಳಿಗೆ ವರದಿ ನೀಡಿರೋದ್ರಿಂದ, ದರ್ಶನ್ ವಕೀಲರು ಇದನ್ನ ಕೋರ್ಟ್ ಗಮನಕ್ಕೆ ತರುವ ಸಾಧ್ಯತೆ ಇದೆ. ಬೆನ್ನು ನೋವಿನ ಹೆಸರಲ್ಲಿ ಬೆಂಗಳೂರಿಗೆ ಶಿಫ್ಟ್ ಆಗೋದಕ್ಕೆ ಪ್ಲ್ಯಾನ್ ಮಾಡ್ತಿದ್ದಾರಾ ಅನ್ನೋ ಅಂತೆಗಳು ಸಹ ಕೇಳಿಬರ್ತಿವೆ.
ತಿವರ್ಷ ದಸರಾ ಬಂತಂದ್ರೆ, ಮೈಸೂರಲ್ಲೇ ಇರ್ತಿದ್ದರು. ಸ್ನೇಹಿತರು ಹಾಗೂ ತಮ್ಮ ಆಪ್ತರ ಜೊತೆಗೆ ಸೇರ್ಕೊಂಡು ಅದ್ಧೂರಿ ಹಬ್ಬ ಮಾಡ್ತಿದ್ದರು. ಆದರೆ, ಈ ಬಾರಿ ಯಾವ ಹಬ್ಬವೂ ಇಲ್ಲ, ಯಾವ ಸೆಲೆಬ್ರೇಷನ್ನೂ ಇಲ್ಲ. ಹೀಗಾಗಿ ತಮ್ಮ ಹಿಂದಿನ ದಿನಗಳನ್ನ ನೆನೆಸಿಕೊಂಡು ದರ್ಶನ್ ಭಾವುಕರಾಗಿದ್ದಾರಂತೆ. ವಿಜಯದಶಮಿ ಆಗಿದ್ದರಿಂದ ಜೈಲಲ್ಲಿ ಪಾಯಿಸದ ಊಟ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಮಾಡಿದ್ದುಣ್ಣೋ ಮಹರಾಯ ಅನ್ನೋ ಹಾಗೆ, ತಮ್ಮ ತಪ್ಪಿಗೆ ಬೆಲೆ ತೆರ್ತಿದ್ದಾರೆ. ಸೋಮವಾರ ಜಾಮೀನು ಆದೇಶ ಹೊರ ಬೀಳಲಿದ್ದು, ಬಿಡುಗಡೆ ಆಗ್ತಾರಾ, ಮತ್ತೆ ಜೈಲಲ್ಲೇ ಫಿಕ್ಸ್ ಆಗ್ತಾರಾ ಅನ್ನೋದೇ ಕುತೂಹಲ.