ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಗ್ಯಾರಂಟಿ ನ್ಯೂಸ್ ಬಿಗ್ ಸರ್ವೆ ನಡೆಸಿದೆ. ದರ್ಶನ್ ಬಗ್ಗೆ ಸದ್ಯ ರಾಜ್ಯದ ಜನರ ಅಭಿಪ್ರಾಯ ಏನಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಗ್ಯಾರಂಟಿ ನ್ಯೂಸ್ ಸರ್ವೆ ನಡೆಸಿದೆ.
ಕಳೆದ 72 ಗಂಟೆಗಳಿಂದ ಗೂಗಲ್ ಫಾರ್ಮ್, ಫೇಸ್ ಬುಕ್, ಯುಟ್ಯೂಬ್, x ಹ್ಯಾಂಡಲ್ (ಟ್ವಿಟರ್), insta ಸಮೀಕ್ಷೆ ನಡೆಸಿದ್ದ ಗ್ಯಾರಂಟಿ ನ್ಯೂಸ್ ದರ್ಶನ್ ಜನಾಭಿಪ್ರಾಯ ಸಂಗ್ರಹಿಸಿದೆ. ಗ್ಯಾರಂಟಿ ನ್ಯೂಸ್ ಸರ್ವೇಗೆ ಜನರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ದರ್ಶನ್ ಬಗ್ಗೆ ಜನರ ಅಭಿಪ್ರಾಯ ಬದಲಾಗಿದ್ಯಾ.? ಜೈಲಿಗೆ ಹೋದ್ರೂ ದರ್ಶನ್ ಕ್ರೇಜ್ ಹಾಗೆ ಇದ್ಯಾ.? ನಟ ದರ್ಶನ್ ಪರವಾಗಿ ಅನುಕಂಪ ಮೂಡಿದ್ಯಾ.? ದರ್ಶನ್ ಪರ ಆಕ್ರೋಶ ಮುಗಿಲು ಮುಟ್ಟಿದ್ಯಾ.? ದರ್ಶನ್ ಬಗ್ಗೆ ಜನತಾ ಜನಾರ್ದನರ ಅಭಿಪ್ರಾಯ ಏನು ಎಂದು ಸೋಶಿಯಲ್ ಮೀಡಿಯಾ ವೇದಿಕೆ ಮೂಲಕ ನಿಮ್ಮ ಗ್ಯಾರಂಟಿ ನ್ಯೂಸ್ ಸರ್ವೆ ನಡೆಸಿದೆ.
ಗ್ಯಾರಂಟಿ ನ್ಯೂಸ್ ʻD- ಸರ್ವೇʼ ಯಲ್ಲಿ ಕೇಳಿದ ಪ್ರಶ್ನೆಗಳು ಹಾಗೂ ಜನರಿಂದ ಸಿಕ್ಕಿರುವ ಉತ್ತರಗಳು ಹೀಗಿದೆ
1.ನಟ ದರ್ಶನ್ ಗೆ ಬೇಲ್ ಸಿಗಬೇಕಾ.? ಬೇಡವಾ.?
ಸಿಗಬೇಕು-65%
ಬೇಡ-32.2%
ಗೊತ್ತಿಲ್ಲ-2.5%
2.ದರ್ಶನ್ ಗೆ ಬೇಲ್ ಸಿಕ್ಕರೆ ನೀವು ಸಂಭ್ರಮಿಸುತ್ತೀರಾ.?
ಹೌದು-62%
ಇಲ್ಲ-38%
3. ಸ್ಯಾಂಡಲ್ ವುಡ್ ನಂಬರ್ 1 ಸ್ಟಾರ್ ನಟ ಯಾರು.?
ದರ್ಶನ್-42%
ಇತರೆ-58%
4. ದರ್ಶನ್ ಸಿನಿಮಾವನ್ನ ನೀವು ಈಗಲೂ ನೋಡಲು ಬಯಸುತ್ತೀರಾ.?
ನೋಡುತ್ತೇವೆ-69%
ನೋಡಲ್ಲ-25.6%
ಗೊತ್ತಿಲ್ಲ-5.4%
5. ಕೊಲೆ ಪ್ರಕರಣದ ನಂತರ ದರ್ಶನ್ ಕ್ರೇಜ್, ಫ್ಯಾನ್ ಫಾಲೋಯಿಂಗ್ ಕಡಿಮೆ ಆಗಿದೆಯಾ.?
ಕಡಿಮೆ ಆಗಿದೆ-49%
ಕಡಿಮೆ ಆಗಿಲ್ಲ-49%
ಗೊತ್ತಿಲ್ಲ-2%
6. ತಮ್ಮ ವೈಯಕ್ತಿಕ ವಿವಾದದಿಂದ ದರ್ಶನ್ ಕೆರಿಯರ್ಗೆ ಧಕ್ಕೆ ಆಗುತ್ತಿದೆಯಾ.?
ಹೌದು-70%
ಇಲ್ಲ-27%
ಗೊತ್ತಿಲ್ಲ-3%
7. ವಕೀಲರ ವಾದದಂತೆ ದರ್ಶನ್ ವಿರುದ್ಧ ಪೊಲೀಸರು ಷಡ್ಯಂತ್ರ ರೂಪಿಸಿದ್ದಾರಾ.?
ಹೌದು-48%
ಇಲ್ಲ-35%
ಗೊತ್ತಿಲ್ಲ-17%
8. ದರ್ಶನ್ ರಾಜಕೀಯಕ್ಕೆ ಬರಬೇಕಾ.? ಬೇಡ್ವಾ.?
ಬರಬೇಕು-49%
ಬೇಡ-48%
ಗೊತ್ತಿಲ್ಲ-3%
9. ದರ್ಶನ್ ನ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದು ಸರಿನಾ.?
ಸರಿ-52%
ತಪ್ಪು-48%
10. ದರ್ಶನ್ ವಿಚಾರದಲ್ಲಿ ಅಭಿಮಾನಿಗಳ ವರ್ತನೆ ಸರಿನಾ.?
ಸರಿ-36%
ತಪ್ಪು-51.8%
ಗೊತ್ತಿಲ್ಲ-12.2%