ಟೀಮ್ ಇಂಡಿಯಾದ ರಾಕ್ ಸ್ಟಾರ್ ಹಾರ್ದಿಕ್ ಪಾಂಡ್ಯರಲ್ಲಿ ಮೊದಲಿನ ಚಾರ್ಮ್ ಇಲ್ಲ. ಸದಾ ಜಾಲಿ ಮಾಡ್ತಾ ಜೀವನವನ್ನ ಏಂಜಾಯ್ ಮಾಡಿದ್ದ ಕುಂಗ್ ಫು ಪಾಂಡ್ಯ ಡಿವೋರ್ಸ್ ಬಳಿಕ ಬೇಸರದಲ್ಲಿ ದಿನವನ್ನ ದೂಡ್ತಿದ್ದಾರೆ. ಮಾಜಿ ಪತ್ನಿ ನತಾಶಾ ಫುಲ್ ಮಸ್ತಿಯಲ್ಲಿದ್ದಾರೆ. ನತಾಶಾರ ಕಲರ್ಫುಲ್ ಜೀವನಕ್ಕೆ ಇದೀಗ ಮತ್ತೊಬ್ಬ ವ್ಯಕ್ತಿಯ ಎಂಟ್ರಿಯಾಗಿದೆ.
ಹಾರ್ದಿಕ್ ಪಾಂಡ್ಯ- ನಟಾಶಾ ಸ್ಟಾಂಕೋವಿಕ್. ಈ ಸೆಲಿಬ್ರಿಟಿ ಜೋಡಿ ಬೇರಾಗಿ ಸರಿ ಸುಮಾರು 4 ತಿಂಗಳುಗಳಾಯ್ತು. ಆದ್ರೂ, ಇಬ್ಬರ ಸುದ್ದಿ ಮಾತ್ರ ಪದೇ ಪದೆ ಟ್ರೆಂಡಿಂಗ್ನಲ್ಲಿದೆ. ಮನೆಯಿಂದ ನತಾಶಾ ದೂರಾದ್ರೂ ಹಾರ್ದಿಕ್ ಮನಸ್ಸಿಂದ ಹೋಗೆ ಇಲ್ಲ. ಪ್ರತಿ ಹೆಜ್ಜೆಯಲ್ಲೂ ಹಾರ್ದಿಕ್, ಮಾನಸಿಕವಾಗಿ ಕುಗ್ಗಿರೋದು ಗೊತ್ತಾಗ್ತಿದೆ. ಜಾಲಿ ಜಾಲಿ ಅಂತಾ ಫುಲ್ ಜೋಷ್ನಲ್ಲಿ ಇರುತ್ತಿದ್ದ ಹಾರ್ದಿಕ್, ಈಗ ಪೂರ್ತಿ ಮಂಕಾಗಿದ್ದಾರೆ.
ನೋವಲ್ಲಿ ನೊಂದು ಬೆಂದ ಹಾರ್ದಿಕ್ ಪಾಂಡ್ಯ
ಮನದಾಳದಲ್ಲಿ ಹೇಳಲಾಗದ ನೋವನ್ನ ಅನುಭವಿಸ್ತಿರೋ ಹಾರ್ದಿಕ್ ಪಾಂಡ್ಯ, ಜಿಮ್, ಕ್ರಿಕೆಟ್ ಅಂತಾ ಎಲ್ಲವನ್ನ ಮರೆಯೋ ವಿಫಲ ಯತ್ನ ಮಾಡ್ತಿದ್ದಾರೆ. ಹಾರ್ದಿಕ್ ಸೋಷಿಯಲ್ ಮೀಡಿಯಾ ಪೋಸ್ಟ್ಗಳು, ನಡೆ-ನುಡಿ ಎಲ್ಲವೂ ಈ ಕತೆಯನ್ನ ಹೇಳ್ತಿವೆ. ಅಕ್ಟೋಬರ್ 11. ಅಂದ್ರೆ ಕಳೆದ ಭಾನುವಾರ ಹಾರ್ದಿಕ್ 31ನೇ ವಸಂತಕ್ಕೆ ಕಾಲಿಟ್ರು. ಪ್ರತಿ ಪಾಂಡ್ಯ ಬರ್ತ್ಡೇ ಅದ್ಧೂರಿಯಾಗಿ ನಡೀತಿತ್ತು. ಬೇಸರದಲ್ಲಿದ್ದ ಕಾರಣಕ್ಕೋ ಏನೋ ಈ ಬಾರಿ ಸಿಂಪಲ್ ಕೇಕ್ ಕಟಿಂಗ್ನಲ್ಲಿ ಹುಟ್ಟು ಹಬ್ಬ ಅಂತ್ಯವಾಗಿದೆ.
ಬರ್ತ್ ಡೇ ದಿನವೂ ಹಾರ್ದಿಕ್ಗೆ ಕಾಡಿತ್ತಾ ಬೇಸರ
ಹುಟ್ಟುಹಬ್ಬದ ದಿನ ರಾತ್ರಿ ಟ್ವೀಟ್ ಮೂಲಕ ಹಾರ್ದಿಕ್, ಶುಭಕೋರಿದ ಎಲ್ಲರಿಗೂ ಧನ್ಯವಾದ ಹೇಳಿದ್ರು. ಆ ಟ್ವೀಟ್ನಲ್ಲಿ ಸಂಭ್ರಮಕ್ಕಿಂತ ಬೇಸರವೇ ಎದ್ದು ಕಾಣ್ತಿತ್ತು. ಈ ವರ್ಷದಲ್ಲಿ ಸಕ್ಸಸ್ ಮತ್ತೂ ಫೇಲ್ಯೂರ್ ಎರಡನ್ನೂ ಕಂಡಿದ್ದೀನಿ. ಮಾಡಿದ ತಪ್ಪುಗಳಿಂದ ನಾನು ಕಲಿಯಬೇಕಿದೆ ಎಂದು ಬರೆದುಕೊಂಡಿದ್ರು.
ಹೊಸ ಹುಡುಗನೊಂದಿಗೆ ನತಾಶಾ ಡಿನ್ನರ್
ಒಂದೆಡೆ ಹಾರ್ದಿಕ್ ಪಾಂಡ್ಯ ಹುಟ್ಟುಹಬ್ಬದ ದಿನ ಪ್ರೀತಿಸಿದ ಗೆಳತಿ ಜೊತೆಯಲ್ಲಿಲ್ಲ ಅನ್ನೋ ಬೇಸರದಲ್ಲಿದ್ರೆ, ನತಾಶಾ ಜಾಲಿ ಮೂಡ್ನಲ್ಲಿದ್ರು. ಬೇರೊಬ್ಬ ಗೆಳೆಯನ ಜೊತೆ ಕಾಣಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿಬಿಟ್ರು.
ಎಲ್ವೀಶ್ ಯಾದವ್ ಜೊತೆಗೆ ನತಾಶಾ ಸುತ್ತಾಟ
ಪಾಂಡ್ಯ ಹುಟ್ಟುಹಬ್ಬ ದಿನ ಮಾಜಿ ಪತ್ನಿ ನತಾಶಾ ಸ್ಟಾಂಕೋವಿಕ್ ಸುತ್ತಾಡಿದ್ದು, ಈ ವ್ಯಕ್ತಿಯ ಜೊತೆಗೆ. ನತಾಶಾ ಜೊತೆಗೆ ಕಾಣಿಸಿಕೊಂಡಿರೋ ಈತನ ಹೆಸರು ಎಲ್ವೀಶ್ ಯಾದವ್. ಯೂಟ್ಯೂಬರ್ ಹಾಗೂ ಸಿಂಗರ್ ಕಮ್ ನಟ. ಅಂದು ಇಬ್ಬರೂ ಒಟ್ಟಾಗಿ ಸುತ್ತಾಡಿದ್ದ ವಿಡಿಯೋವನ್ನ ಎಲ್ವೀಶ್ ಯಾದವ್ ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಹಾರ್ಟ್ ಇಮೋಜಿಯನ್ನ ಹಾಕಿ Vibin’ On A Whole New Level ” ಎಂದು ಬರೆದುಕೊಂಡಿದ್ದಾರೆ.
ಸ್ವಿಮ್ಮಿಂಗ್ಪೂಲ್ನಲ್ಲಿ ಅಲೆಕ್ಸಾಂಡರ್ ಜೊತೆ ಮಸ್ತಿ
ಹಾರ್ದಿಕ್ಗೆ ಡಿವೋರ್ಸ್ ಕೊಟ್ಟ ಬಳಿಕ ನತಾಶಾ ಹೆಸರು ಸರ್ಬಿಯಾದ ಅಲೆಕ್ಸಾಂಡೆರ್ ಲಿಕ್ ಜೊತೆ ತಳುಕು ಹಾಕಿಕೊಂಡಿತ್ತು. ಒಟ್ಟಾರೆ ಇಬ್ಬರೂ ಸತ್ತಾಟ ನಡೆಸಿದ್ರು. ಕೆಲ ದಿನಗಳ ಹಿಂದಷ್ಟೇ ಇಬ್ಬರೂ ಸ್ವಿಮ್ಮಿಂಗ್ಪೂಲ್ನಲ್ಲಿ ಮಸ್ತಿ ಮಾಡ್ತಿದ್ದ ವಿಡಿಯೋ ಕೂಡ ಸಖತ್ ವೈರಲ್ ಆಗಿತ್ತು.
ಅಲೆಕ್ಸಾಂಡರ್ ಜೊತೆಗೆ ಕಾಣಿಸಿಕೊಂಡ ನತಾಶಾ, ಇದೀಗ ಎಲ್ವಿಸ್ ಯಾದವ್ ಜೊತೆಗೆ ಡಿನ್ನರ್ ಡೇಟ್ ನಡೆಸಿದ್ದಾರೆ. ಮಾಜಿ ಪತ್ನಿಯ ಈ ನಡೆಗಳು ಹಾರ್ದಿಕ್ನ ಮತ್ತಷ್ಟು ನೋವಿಗೆ ದೂಡಿದೆ ಅನ್ನೋದು ಪಾಂಡ್ಯ ನಡೆಯಲ್ಲಿ ಗೊತ್ತಾಗ್ತಿದೆ. ಅಧಿಕೃತವಾಗಿ ಡಿವೋರ್ಸ್ ಕೊಟ್ಟ ಮೇಲೆ ಅವ್ರ ಲೈಫ್ ಅವರಿಷ್ಟ. ಪ್ರಶ್ನಿಸೋ ಹಕ್ಕು ಪಾಂಡ್ಯಗಿಲ್ಲ. ಮನಸ್ಸಿನ ಮೇಲೆ ಹಿಡಿತ ಸಾಧಿಸಬೇಕಷ್ಟೇ. ಮನದಾಳದಲ್ಲಿರೋ ನೋವು ಬೇಸರವನ್ನ ಮೆಟ್ಟಿನಿಂತು ಹಾರ್ದಿಕ್ ಮಾನಸಿಕವಾಗಿ ಬಲಿಷ್ಟರಾಗಲಿ. ಈ ವೈಯಕ್ತಿಕ ಜೀವನದ ಹಿನ್ನಡೆಯನ್ನ ಮೆಟ್ಟಿನಿಂತು ಹಳೆ ಚಾರ್ಮ್ಗೆ ಮರಳಲಿ ಅನ್ನೋದೇ ಎಲ್ಲರ ಆಶಯ.