ಭಾರತದಲ್ಲಿ ಚಿನ್ನದ ಬೆಲೆ ಗುರುವಾರವೂ ಹೆಚ್ಚಳವಾಗಿದೆ. ನಿನ್ನೆ ಗ್ರಾಮ್ಗೆ 45 ರೂನಷ್ಟು ಏರಿಕೆಯಾಗಿದ್ದ ಹಳದಿ ಲೋಹದ ಬೆಲೆ ಇವತ್ತು 20 ರೂನಷ್ಟು ದುಬಾರಿಯಾಗಿದೆ. ಅಪರಂಜಿ ಚಿನ್ನದ ಬೆಲೆ 7,800 ರೂ ಗಡಿ ದಾಟಿ ಹೋಗಿದೆ. 22 ಕ್ಯಾರಟ್ ಚಿನ್ನದ ಬೆಲೆ 7,160 ರೂ ಆಗಿದೆ. 18 ಕ್ಯಾರಟ್ ಚಿನ್ನದ ಬೆಲೆ 6,000 ರೂ ಸಮೀಪಕ್ಕೆ ದೌಡಾಯಿಸುತ್ತಿದೆ. ಈ ಮಧ್ಯೆ ಬೆಳ್ಳಿ ಬೆಲೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. 92 ರೂ, 97 ರೂ ಮತ್ತು 103 ರೂನಲ್ಲಿ ವಿವಿಧೆಡೆ ಬೆಳ್ಳಿ ಬೆಲೆ ಇದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 71,600 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 78,110 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,700 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 71,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 9,200 ರುಪಾಯಿಯಲ್ಲಿ ಇದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,600 ರೂ
- 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 78,110 ರೂ
- ಬೆಳ್ಳಿ ಬೆಲೆ 10 ಗ್ರಾಂಗೆ: 920 ರೂ