ಸಾಮಾನ್ಯವಾಗಿ ಎಲ್ಲಾ ಕಡೆ ಇಲಿ ಕಾಟ ಇದ್ದೇ ಇರುತ್ತದೆ. ಮನೆಯಲ್ಲಿ ಬಟ್ಟೆಯಿಂದ ಹಿಡಿದು ಕಾರಿನ ವೈರಿಂಗ್ವರೆಗೂ ಎಲ್ಲವನ್ನೂ ಇಲಿಗಳು ಕಡಿಯುತ್ತವೆ. ವಾಹನದ ವೈರಿಂಗ್ ಕಚ್ಚುವುದರಿಂದ ಕೆಲವೊಮ್ಮೆ ಸೆನ್ಸರ್ಗಳೂ ಹಾಳಾಗಿ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.
ವೈರಿಂಗ್ ಕಟ್ ಆದರೆ ಮನಸ್ಸಲ್ಲಿ ಮೂಡುವ ಪ್ರಶ್ನೆ ಇಲಿಗಳಿಂದ ಆಗುವ ಹಾನಿಗೆ ಇನ್ಸೂರೆನ್ಸ್ ಕ್ಲೈಮ್ ಮಾಡಬಹುದೇ ಎಂಬುದು. ಕಾರು ರಿಪೇರಿ ಮಾಡಲು ಇನ್ಶೂರೆನ್ಸ್ ಕಂಪನಿಯು ಹಣ ಕೊಡುತ್ತಾ ಅಥವಾ ನೀವೇ ನಿಮ್ಮ ಕೈಯಿಂದ ಹಣ ಹಾಕಬೇಕೆ ಎಂಬುದೇ ಮುಖ್ಯ ಪ್ರಶ್ನೆಯಾಗಿರುತ್ತದೆ. ನಿಮ್ಮಲ್ಲಿರುವ ಹಲವು ಗೊಂದಲಗಳಿಗೆ ಉತ್ತರ ಇಲ್ಲಿದೆ.
ಇಲಿ ಕಡಿತದಿಂದ ಒಂದೊಮ್ಮೆ ಕಾರಿಗೆ ಸಮಸ್ಯೆಯುಂಟಾದಲ್ಲಿ ಇನ್ಶೂರೆನ್ಸ್ ಕಂಪನಿಗಳು ಹಣವನ್ನು ಭರಿಸುತ್ತದೆ. ಕಂಪನಿಯು ನಿಮ್ಮ ನಷ್ಟವನ್ನು ಸರಿದೂಗಿಸುತ್ತದೆ ಆದರೆ ಕೆಲವು ಕಂಡೀಷನ್ಸ್ಗಳಿರಲಿವೆ. ನೀವು ವಾಹನಕ್ಕೆ ವ್ಯಕ್ತಿ ಕೇವಲ ಸಮಗ್ರ ಕಾರು ವಿಮಾ ಪಾಲಿಸಿ ಹೊಂದಿದ್ದರೆ ಈ ನಷ್ಟವನ್ನು ಈ ಪಾಲಿಸಿಯಡಿಯಲ್ಲಿ ಭರಿಸಲಾಗುವುದಿಲ್ಲ.
ಅವರು ಝೀರೋ ಡಿಪ್ರಿಸಿಯೇಷನ್ ಪಾಲಿಸಿಯನ್ನು ಕೂಡ ಹೊಂದಿರಬೇಕು. ಈ ಎರಡು ವಿಮೆಗಳನ್ನು ನೀವು ಹೊಂದಿದ್ದರೆ ಮಾತ್ರ ಇಂತಹ ಸಂದರ್ಭದಲ್ಲಿ ವಿಮೆ ಕಂಪನಿಗಳು ಹಣವನ್ನು ಭರಿಸಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕಾರಿನ ಚಾಲಕ ಕೈಯಿಂದಲೇ ಹಣವನ್ನು ಭರಿಸಬೇಕಾಗುತ್ತದೆ. ಈ ಹಣವನ್ನು ವಿಮಾ ಕಂಪನಿಯು ನೀಡುವುದಿಲ್ಲ.