2025ರ ಇಂಡಿಯನ್ ಪ್ರೀಮಿಯರ್ ಲೀಗ್ ರಿಟೇನ್ ಮಾಡಿಕೊಳ್ಳುವ ಪಟ್ಟಿ ಸಲ್ಲಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ. ಫ್ರಾಂಚೈಸಿಗಳು ಕೂಡ ಯಾರನ್ನ ಉಳಿಸಿಕೊಳ್ಳಬೇಕು, ಯಾರನ್ನ ಬಿಡಬೇಕೆಂಬ ಒತ್ತಡದಲ್ಲಿವೆ. ಐಪಿಎಲ್ ಲೀಗ್ನ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತೊಮ್ಮೆ ತಮ್ಮ ಮೊದಲ ಪ್ರಶಸ್ತಿಯನ್ನು ಗೆಲ್ಲುವ ಭರವಸೆಯಲ್ಲಿ ತಮ್ಮ ತಂಡದಲ್ಲಿ ಬದಲಾವಣೆಗಳನ್ನು ಮಾಡಲು ನೋಡುತ್ತಿದೆ. ಆದರೆ ಈ ಬಾರಿ ಹೆಚ್ಚು ಸ್ಥಳೀಯ ಪ್ರತಿಭೆಗಳಿಗೆ ಮಣೆಯಾಕಬಹುದು ಎನ್ನಲಾಗುತ್ತಿದೆ. ಏಕೆಂದರೆ ಫ್ರಾಂಚೈಸ್ ಹೆಚ್ಚು ಸ್ಥಳೀಯ ಪ್ರತಿಭೆಗಳನ್ನು ತಂಡಕ್ಕೆ ಸೇರಿಸಿಕೊಳ್ಳಲು ಸರ್ಕಾರದಿಂದಲೇ ಒತ್ತಡ ಇದೆ ಎನ್ನಲಾಗುತ್ತಿದೆ
ಆರ್ಸಿಬಿಗೆ ಹೊಸ ಸಮಸ್ಯೆ
ಐಪಿಎಲ್ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಈ ಹೊಸ ಸಮಸ್ಯೆ ಎದುರಾಗಿದೆ ಎನ್ನಲಾಗುತ್ತಿದೆ. ಸ್ಥಳೀಯ ಆಟಗಾರರಿಗೆ ಆದ್ಯತೆ ನೀಡುವಂತೆ ಕರ್ನಾಟಕ ಸರ್ಕಾರ ಆರ್ಸಿಬಿ ಮೇಲೆ ಒತ್ತಡ ಹೇರಿದೆ. ಹಾಗಾಗಿ ಸ್ಥಳೀಯ ಪ್ರತಿಭೆಗಳಿಗೆ ಮನ್ನಣೆ ನೀಡಲು ಆರ್ಸಿಬಿ ಈ ಬಾರಿ ಹರಾಜಿನಲ್ಲಿ ಹೆಚ್ಚು ಕರ್ನಾಟಕ ಆಟಗಾರರನ್ನ ಖರೀದಿಸಿದರೆ ಅಚ್ಚರಿಯಿಲ್ಲ ಎಂದು ವರದಿಯಲ್ಲಿ ತಿಳಿದುಬಂದಿದೆ
ಇದನ್ನು ಓದಿ: ಟೀಮ್ ಇಂಡಿಯಾದಿಂದ ಕೆ.ಎಲ್ ರಾಹುಲ್ಗೆ ಕೊಕ್..!
ಯುವಪ್ರತಿಭೆಗಳಿಗೆ ಮಣೆ
ಐಪಿಎಲ್ ನಿಯಮಗಳ ಪ್ರಕಾರ ಅನ್ಕ್ಯಾಪ್ಡ್ ಆಟಗಾರರನ್ನ ರೂ. 4 ಕೋಟಿ ದರದಲ್ಲಿ ರಿಟೇನ್ ಮಾಡಿಕೊಳ್ಳಲೇ ಬೇಕೆಂಬ ನಿಯಮ ರೂಪಿಸಲಾಗಿದೆ. ಹಾಗಾಗಿ ಕರ್ನಾಟಕ ಪರ ಮಿಂಚಿದ ಆಟಗಾರರನ್ನ ಆರ್ಸಿಬಿ ಉಳಿಸಿಕೊಳ್ಳಬಹುದು. ಆದರೆ ಹೆಚ್ಚು ಆಟಗಾರರಿಗೆ ಚಾನ್ಸ್ ನೀಡಬೇಕಂಬ ಬೇಡಿಕೆಯಿಂದಾಗಿ ತಂಡದ ಯೋಜನೆಗಳಿಗೆ ಧಕ್ಕೆಯಾಗಲಿದೆ ಎಂದು ಆರ್ಸಿಬಿ ಆಡಳಿತ ಮಂಡಳಿ ಅಭಿಪ್ರಾಯಪಟ್ಟಿದೆ ಎನ್ನಲಾಗುತ್ತಿದೆ.
ದೀರ್ಘ ಅವಕಾಶ ನೀಡದ ಆರ್ಸಿಬಿ
ರಾಹುಲ್ ದ್ರಾವಿಡ್ ರಿಂದ ಇಂದಿನ ಕೆಎಲ್ ರಾಹುಲ್ವರೆಗೂ ಆರ್ಸಿಬಿಯಲ್ಲಿ ಕೆಲವು ಆಟಗಾರರು ಆಡಿದ್ದಾರೆ. ಆದರೆ ಯಾರೊಬ್ಬರಿಗೂ ದೀರ್ಘ ಸಮಯದವರೆಗೆ ಅವಕಾಶ ನೀಡಲಿಲ್ಲ. ಪ್ರಸ್ತುತ ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಮನೋಜ್ ಬಾಂಡಗೆ, ಪ್ರಸಿದ್ ಕೃಷ್ಣ, ವೈಶಾಖ್ ವಿಜಯ್ ಕುಮಾರ್ ಅಂತಹ ಪ್ರತಿಭೆಗಳಿದ್ದು, ಯಾರಿಗಾದರೂ ಅವಕಾಶ ನೀಡಲಿ ಎಂಬುದು ಕನ್ನಡಿಗರ ಅಭಿಪ್ರಾಯವಾಗಿದೆ. ಪ್ರಸ್ತುತ ತಂಡದಲ್ಲಿ ವಿಜಯ್ ಕುಮಾರ್ ಹಾಗೂ ಮನೋಜ್ ಇದ್ದಾರೆ.
ರಿಟೇನ್ ನಿಯಮಗಳು
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಐಪಿಎಲ್ 2025 ಮೆಗಾ ಹರಾಜಿಗಾಗಿ ರಿಟೇನ್ ನಿಯಮಗಳನ್ನು ಪ್ರಕಟಿಸಿದೆ. ಗರಿಷ್ಠ ಆರು ಆಟಗಾರರನ್ನು ಉಳಿಸಿಕೊಳ್ಳಬಹುದು. ಇದರಲ್ಲಿ ಗರಿಷ್ಠ ಐವರು ಕ್ಯಾಪ್ಡ್ ಆಟಗಾರರು ಮತ್ತು ಗರಿಷ್ಠ ಇಬ್ಬರು ಅನ್ಕ್ಯಾಪ್ಡ್ ಆಟಗಾರರಿಗೆ ಅವಕಾಶ ನೀಡಲಾಗಿದೆ. ನಿಯಮಗಳ ಪ್ರಕಾರ ಇದನ್ನು ನೇರವಾಗಿ ನಿಗದಿತ ಬೆಲೆಯಲ್ಲಿ ಅಥವಾ RTM ಕಾರ್ಡ್ ಮೂಲಕ ಹರಾಜಿನಲ್ಲಿ ಮತ್ತೆ ಖರೀದಿಸಬಹುದಾಗಿದೆ.
ಇದನ್ನು ಓದಿ: ಸ್ಥಳೀಯ ಆಟಗಾರರಿಗೆ ಅವಕಾಶ ನೀಡುವಂತೆ RCB ಮೇಲೆ ಒತ್ತಡ!
ಮೊದಲ ಮೊದಲ ಮೂವರು ಆಟಗಾರರಿಗೆ ಕ್ರಮವಾಗಿ 18 ಕೋಟಿ, 14 ಕೋಟಿ ಮತ್ತು 11 ಕೋಟಿ ಪಾವತಿಸಬೇಕೆಂದು, ನಂತರ ನಾಲ್ಕು ಮತ್ತು ಐದನೇ ಆಟಗಾರರನ್ನು ತೆಗೆದುಕೊಳ್ಳಬೇಕಾದರೆ 18 ಕೋಟಿ ಹಾಗೂ 14 ಕೋಟಿ ನೀಡಬೇಕು ಎಂದು ನಿಗಧಿ ಮಾಡಿತ್ತು. ಫ್ರಾಂಚೈಸಿಗಗಳ ಒತ್ತಡದ ನಂತರ ರಿಟೇನ್ಗೆ ನಿಗದಿಪಡಿಸಿರುವ 75 ಕೋಟಿಯನ್ನ 5 ಆಟಗಾರರಿಗೆ ತಮಗೆ ಇಷ್ಟಬಂದಂತೆ ವಿತರಿಸಲು ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.
ಹತ್ತು ಫ್ರಾಂಚೈಸಿಗಳು ತಮ್ಮ ರಿಟೇನ್ ಪಟ್ಟಿಯನ್ನು ಅಕ್ಟೋಬರ್ 31ರೊಳಗೆ ಸಲ್ಲಿಸುವಂತೆ ಬಿಸಿಸಿಐ ಸೂಚಿಸಿದೆ. ಐಪಿಎಲ್ ನವೆಂಬರ್ 30 ರಂದು ಹರಾಜು ನಡೆಸಲು ಬಯಸಿದೆ. ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್, ಕ್ಯಾಮೆರಾನ್ ಗ್ರೀನ್, ರಜತ್ ಪಾಟಿದಾರ್, ಆಕಾಶ್ ದೀಪ್, ಯಶ್ ದಯಾಳ್ ಅವರಂತಹ ಆಟಗಾರರನ್ನು ಕೆಲವರನ್ನ ಉಳಿಸಿಕೊಳ್ಳಲು ಆರ್ಸಿಬಿ ಬಯಸಿದೆ. ಇದರಲ್ಲಿ ವಿರಾಟ್ ಕೊಹ್ಲಿ ನೇರ ರಿಟೇನ್ ಮಾಡಿಕೊಳ್ಳುವುದು ಪಕ್ಕಾ ಆಗಿದೆ. ಉಳಿದ ಯಾವ ಆಟಗಾರರ ಬಗ್ಗೆ ಆರ್ಸಿಬಿ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಮೂಲಗಳ ಪ್ರಕಾರ ಹೆಚ್ಚಿನ ಆಟಗಾರರನ್ನ ಆರ್ಟಿಎಂ ಮೂಲಕ ಖರೀದಿಸಲು ಆರ್ಸಿಬಿ ಬಯಸಿದೆ ಎನ್ನಲಾಗುತ್ತಿದೆ.