ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ. ಸಿ ಪಿ ಯೋಗೇಶ್ವರ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರಿಂದ ಬಿಜೆಪಿ ಜೆಡಿಎಸ್ಗೆ ದೊಡ್ಡ ಆಘಾತ ಉಂಟಾಗಿದೆ. ಹಾಗಂತ ಸುಮ್ಮನೆ ಕೂರುವ ಸಮಯ ಇದಲ್ಲಾ.
ಚುನಾವಣೆಯ ಕಾವು ಈಗ ರಂಗೇರಿದೆ. ಜೆಡಿಎಸ್ ನಿಂದ ನಿಖಿಲ್ಗೂ ಇಲ್ಲ..ಅನಿತಕ್ಕಂಗೂ ಇಲ್ಲ..ಜಯಮುತ್ತುಗೂ ಇಲ್ಲ ಟಿಕೆಟ್. ಚನ್ನಪಟ್ಟಣ ಅಖಾಡದಿಂದ ದೇವೇಗೌಡರ ಪುತ್ರಿ ಅನಸೂಯ ಕಣಕ್ಕೆ ಇಳಿಸುವ ಪ್ರಯತ್ನದಲ್ಲಿದ್ದಾರೆ ಮೈತ್ರಿ ನಾಯಕರು.
ಹೌದು.. ಬೆಂಗಳೂರು ಗ್ರಾಮಾಂತರ ಟ್ರಿಕ್ ಬಳಸಲು ಕೇಂದ್ರ ಸಚಿವ ಕುಮಾರಸ್ವಾಮಿ ಮುಂದಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕ್ಲೀನ್ ಹ್ಯಾಂಡ್ ಡಾಕ್ಟರ್ ಮಂಜುನಾಥ್ ಕಾಂಗ್ರೆಸ್ನ ಡಿಕೆ ಸುರೇಶ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಈಗ ಅದೇ ತಂತ್ರದ ಮೊರೆ ಹೋಗಿದ್ದಾರೆ ಕುಮಾರಸ್ವಾಮಿ.
ಇದನ್ನೂ ಓದಿ: ಮಿಡ್ ನೈಟ್ ಆಪರೇಷನ್ ಸಕ್ಸಸ್; ಮೈತ್ರಿಗೆ ಡಿಕೆ ಡಿಚ್ಚಿ..!
ಅನಸೂಯ ಮಂಜುನಾಥ್ಗೆ ಟಿಕೆಟ್ ಬಹುತೇಕ ಫೈನಲ್ ಎನ್ನಲಾಗುತ್ತಿದೆ. ಸಹೋದರಿ ಸ್ಪರ್ಧೆ ಬಗ್ಗೆ ಹೆಚ್ಡಿಕೆಯಿಂದಲೇ ಘೋಷಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಇಂದೇ ಚನ್ನಪಟ್ಟಣ ಬೈ ಎಲೆಕ್ಷನ್ಗೆ ಜೆಡಿಎಸ್ನಿಂದ ಅಭ್ಯರ್ಥಿ ಘೋಷಣೆಯಾಗಬಹುದು.