ಪ್ರತೀ ಪೈಸೆಗೂ ಬೆಲೆ ಇದೆ. 50 ಪೈಸೆ ಎಂದು ನಿರ್ಲಕ್ಷ ಮಾಡಿ ಗ್ರಾಹಕನಿಗೆ ಕೊಡದಿದ್ದರ ಫಲವಾಗಿ ಈಗ ಅಂಚೆ ಕಚೇರಿಗೆ ಬರೋಬ್ಬರಿ 15,000 ರೂ. ದಂಡ ವಿಧಿಸಲಾಗಿದೆ. ಚೆನ್ನೈಯ ಮಾನ್ಯ ಎಂಬವರು 2023 ರ ಡಿಸೆಂಬರ್ನಲ್ಲಿ ಅಂಚೆ ಕಚೇರಿಯಲ್ಲಿ ರಿಜಿಸ್ಟರ್ಡ್ ಪೋಸ್ಟ್ ಮಾಡಲು 30 ರೂ. ನೀಡಿದ್ದರು. ಅದಕ್ಕೆ ನಿಗದಿತ ಶುಲ್ಕ 29.50 ರೂ. ಆಗಿತ್ತು. ಬಾಕಿ 50 ಪೈಸೆ ಕೊಡಲು ಸಿಬಂದಿ ಒಪ್ಪಿಲ್ಲ. ನಮ್ಮ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಮೊತ್ತ ರೌಂಡಾಫ್ ಆಗಿದ್ದು, 30 ರೂ. ವನ್ನೇ ತೋರಿಸುತ್ತಿದ್ದು ಅಷ್ಟನ್ನೇ ಪಾವತಿ ಮಾಡಿ ಎಂದರು. ಅದಕ್ಕೆ ಒಪ್ಪದ ಮಾನ್ಯ ಯುಪಿಐ ಮೂಲಕ ನಿಗದಿತ ಶುಲ್ಕ ಪಾವತಿ ಮಾಡುತ್ತೇನೆ ಎಂದರೂ ಸಿಬಂದಿ ಒಪ್ಪಿರಲಿಲ್ಲ. ಅಂಚೆ ಕಚೇರಿ ವಿರುದ್ಧ ಚೆನ್ನೈ ಜಿಲ್ಲಾ ಗ್ರಾಹಕ ವೇದಿಕೆಗೆ ದೂರು ನೀಡಿ “ಪ್ರತೀದಿನ ರೌಂಡಾಫ್ ಮಾಡುವುದರಿಂದ ಬೃಹತ್ ಮೊತ್ತ ಸಂಗ್ರಹಿಸಿದಂತಾಗುತ್ತದೆ. ಇದು ಕಪ್ಪುಹಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಮತ್ತು ಸರಕಾರಕ್ಕೆ ಬರುವ ಜಿ.ಎಸ್.ಟಿ. ನಷ್ಟವಾಗುತ್ತದೆ ಎಂದು ವಾದಿಸಿದ್ದರು. ಅದರ ವಿಚಾರಣೆ ನಡೆಸಿದ ವೇದಿಕೆ ಅಂಚೆ ಇಲಾಖೆಗೆ 15,000 ರೂ. ದಂಡವನ್ನು ಆದೇಶಿಸಿದೆ.
ಇದನ್ನು ಓದಿ; ರಾಧಾ ಹಿರೇಗೌಡರ್ ಅವರ ಮಾತು ಕೇಳಿ ಕಣ್ಣೀರು ಹಾಕಿದ ಐಶ್ವರ್ಯಾ!