ಕನ್ನಡದ ಪ್ರಖ್ಯಾತ ಯೂಟ್ಯೂಬರ್ ಡಾ. ಬ್ರೋ ಇದೀಗ ನೈಜೀರಿಯಾ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದಲ್ಲಿ ಡಾ. ಬ್ರೋ ನೈಜಿರಿಯಾದ ಮಕ್ಕಳಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಕನ್ನಡಿಗರ ಮನಸ್ಸನ್ನೂ ಗೆದ್ದಿದೆ.
ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿರುವ ಕನ್ನಡಿಗರಿಗೆ ಡಾ. ಬ್ರೋ ಅವರ ಈ ವಿಡಿಯೋ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಿದೆ. ‘ಅ, ಆ, ಇ, ಈ’ ಎಂದು ಕನ್ನಡದ ಅಕ್ಷರಮಾಲೆಯನ್ನು ಅಂ, ಅಃ ವರೆಗೆ ಹೇಳಿಕೊಟ್ಟಿದ್ದಾರೆ. ಡಾ. ಬ್ರೋ ಅವರ ಈ ನಡೆ ಕನ್ನಡಿಗರ ಮನಸ್ಸನ್ನು ಗೆದ್ದಿದೆ. “ನೈಜೀರಿಯಾಗೆ ಹೋಗಿ ಕನ್ನಡ ಬಾವುಟ ಹಾರಿಸಿದ್ದೀಯಲ್ಲ ಗುರು”, “ಕನ್ನಡವನ್ನು ಭಾರತದ ರಾಷ್ಟ್ರಭಾಷೆ ಅಂತ ಕರೆದಿದ್ದಕ್ಕೆ ಥ್ಯಾಂಕ್ಸ್ ಬ್ರೋ” ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.