ಈ ವಾರ ‘ಬಿಗ್ ಬಾಸ್’ ಮನೆ ‘ಬಿಗ್ ಬಾಸ್ ಸೌಧ’ ಆಗಿ ಪರಿವರ್ತನೆ ಆಗಿದೆ. ಒಂದು ಪಕ್ಷಕ್ಕೆ ತ್ರಿವಿಕ್ರಮ್ ನಾಯಕನಾದರೆ, ಇನ್ನೊಂದು ಪಕ್ಷಕ್ಕೆ ಐಶ್ವರ್ಯಾ ಸಿಂಧೋಗಿ ನಾಯಕಿಯಾಗಿದ್ದಾರೆ. ಪಕ್ಷಗಳ ಚರ್ಚಾಕೂಟ ನಡೆಸಲು ‘ಮುಖಾಮುಖಿ’ ಎಂಬ ವಿಶೇಷ ಚಟುವಟಿಕೆಯನ್ನ ‘ಬಿಗ್ ಬಾಸ್’ ನೀಡಿದರು. ಇದರ ಅನುಸಾರ.. ‘ಬಿಗ್ ಬಾಸ್’ ನೀಡುವ ವಿಷಯದ ಮೇಲೆ ಎದುರಾಳಿ ಪಕ್ಷದ ಮೇಲೆ ಆರೋಪ ಮತ್ತು ತಮ್ಮ ಪಕ್ಷದ ಸಮರ್ಥನೆ ಮಾಡಿಕೊಳ್ಳಬೇಕಿತ್ತು. ವಾದ, ವಾಗ್ವಾದ ಕೇಳಿ ನ್ಯೂಸ್ ಆಂಕರ್ ರಾಧಾ ಹಿರೇಗೌಡರ್ ನಡೆಸಿಕೊಟ್ಟಿದ್ದರು.
ಈ ಸಂದರ್ಭದಲ್ಲಿ ‘ಬಿಗ್ ಬಾಸ್’ ಕೊಟ್ಟ ಮೊದಲ ವಿಷಯ – ನಿಷ್ಪ್ರಯೋಜಕ ವ್ಯಕ್ತಿ ಯಾರು? ಇದನ್ನ ವಾದಿಸಲು ತ್ರಿವಿಕ್ರಮ್ ಪಕ್ಷದಿಂದ ಬಂದವರು ಮಾನಸಾ. ಐಶ್ವರ್ಯಾ ಸಿಂಧೋಗಿ ಪಕ್ಷದಿಂದ ಬಂದವರು ಉಗ್ರಂ ಮಂಜು. ‘’ನಿಷ್ಪ್ರಯೋಜಕ ವ್ಯಕ್ತಿ ಮಾನಸಾ’’ ಅಂತ ಉಗ್ರಂ ಮಂಜು ನೇರವಾಗಿಯೇ ಹೇಳಿದರು. ಅಂದು ಕಣ್ಣೀರು ಸುರಿಸಿದ ಮಾನಸಾ ಮೇಲೆ ಇದೀಗ ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ಗಂಭೀರ ಆರೋಪ ಮಾಡಿದ್ದಾರೆ. ರಂಜಿತ್ ಔಟ್ ಆದ್ಮೇಲೆ ಮಾನಸಾ ಅಷ್ಟೊಂದು ಅತ್ತಿದ್ದು ‘ಕಾಣಿಸಿಕೊಳ್ಳುವ ಸಲುವಾಗಿ’ ಅಂತೆ! ಹಾಗಂತ ಸ್ವತಃ ಮಾನಸಾ.. ಉಗ್ರಂ ಮಂಜು ಹಾಗೂ ಗೌತಮಿ ಜಾಧವ್ ಮುಂದೆ ಹೇಳಿದ್ರಂತೆ!
ಇದಕ್ಕೆ ಮಾನಸಾ ಉತ್ತರಿಸಿದ್ದು ಹೀಗೆ, ರಂಜಿತ್ ಔಟ್ ಆದ್ಮೇಲೆ ‘’ನನ್ನಿಂದಲೇ ಜಗಳ ಸ್ಟಾರ್ಟ್ ಆಗಿದ್ದು. ಯಾರನ್ನ ಫಿನಾಲೆಯಲ್ಲಿ ನೋಡ್ತೀನಿ ಅಂದುಕೊಂಡಿದ್ನೋ.. ಅರ್ಧದಲ್ಲೇ ಹೋದರೆ ಬೇಜಾರು ಆಗುತ್ತೆ. ತಂಗಿ ಅಂತ ನಿಂತುಕೊಂಡಿದ್ದು ಅವನಿಗೆ ತಪ್ಪಾಯಿತು. ಒಂದು ನಿರ್ಧಾರ ಸರಿ ಇರುತ್ತೆ, ಇನ್ನೊಂದು ನಿರ್ಧಾರ ನಿಮ್ಮದು ಸರಿ ಇರಲ್ಲ ಬಿಗ್ ಬಾಸ್. ನಿಜವಾಗಿಯೂ ಇದು ಸರಿ ಇಲ್ಲ. ನಿನ್ನೆ ನಾನು ಮಾತಾಡಬಾರದಾಗಿತ್ತು’’ ಅಂತ್ಹೇಳಿ ನಾನೇ ಬಿಕ್ಕಿ ಬಿಕ್ಕಿ ಅತ್ತಿದ್ದಿನಿ ಅಂತಾ ಹೇಳಿದ್ರು.
ಇದನ್ನು ಓದಿ : ಖಾಸಗಿ ಬಸ್ ದರ ಹೆಚ್ಚಿಸಿದ್ರೆ ಲೈಸೆನ್ಸ್ ರದ್ದು: ಸಾರಿಗೆ ಇಲಾಖೆ ಎಚ್ಚರಿಕೆ!
ಇದಕ್ಕೆ ಸಾಕ್ಷಿ ಇದೆ. ಕ್ಯಾಮರಾಗಳು ಇದ್ದಾವೆ. ಅತ್ತುಕೊಂಡು ಇದ್ದರೇನೇ ಕಾಣಿಸಿಕೊಳ್ಳೋದು ಅಂತ ಹೇಳಿದ್ದಾರೆ’’ ಅಂತ ಮತ್ತೆ ಉಗ್ರಂ ಮಂಜು ಸ್ಪಷ್ಟಪಡಿಸಿದರು. ಆಗ, ‘’ಹೋಗಿರೋನು (ರಂಜಿತ್) ಚಿಕ್ಕ ವ್ಯಕ್ತಿ ಅಲ್ಲ. ಈ ಮನೆಯಲ್ಲಿ ತುಂಬಾ ದೂರ ಬರಬೇಕಿದ್ದ ವ್ಯಕ್ತಿ. ಅಣ್ಣನ ಸ್ಥಾನದಲ್ಲಿ ಇದ್ದ. ಅವನು ಔಟ್ ಆಗಿದ್ದಾಗ ಮಾನಸಾ ತುಂಬಾ ಫೀಲ್ ಮಾಡಿಕೊಂಡಿದ್ದರು’’ ಅಂತ ಮಾನಸಾ ಪರ ತ್ರಿವಿಕ್ರಮ್ ವಾದಿಸುತ್ತಾರೆ.
ಇನ್ನು ಗೌತಮಿ ಜಾಧವ್ ‘’ಮಾನಸಾ ಅತ್ತಿದ್ದು ನಿಜ. ಬೇಜಾರು ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಅವರ ಜೊತೆ ಕೂತು ಮಾತನಾಡುತ್ತಿದ್ವಿ. ಮಾತಾಡುವಾಗ, ‘’ಯಾಕೆ ಅತ್ತಿದ್ದು’’ ಅಂತ ಕೇಳಿದಾಗ ‘’ಹಂಗ್ ಮಾಡಿದ್ರೇನೇ ಕಾಣಿಸಿಕೊಳ್ಳೋದು’’ ಅಂತ ಮಾನಸಾ ಹೇಳಿದ್ದು ನಿಜ. ನಾನು ಆಗ ‘ಹಾ..’ ಅಂತ ಬಾಯಿಬಿಟ್ಟಿದ್ದು ನಿಜ. ಆಮೇಲೆ ‘’ಜೋಕ್ ಮಾಡಿದ್ದು’’ ಅಂತ್ಹೇಳಿ ಅವರು ಇನ್ನೊಂದು ಟಾಪಿಕ್ಗೆ ಹೋಗಿದ್ದು ನಿಜ. ಇದೆಲ್ಲಾ ಕ್ಯಾಮರಾದಲ್ಲಿ ಕ್ಯಾಪ್ಚರ್ ಆಗಿದೆ’’ ಅಂತ ಹೇಳಿ ಗೌತಮಿ ಜಾಧವ್ ಸತ್ಯವನ್ನ ತೆರೆದಿಟ್ಟರು.
ಇದನ್ನು ಓದಿ : ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ನಿವಾಸಕ್ಕೆ ಉಪ ರಾಷ್ಟ್ರಪತಿ ಭೇಟಿ..!
‘’ಈ ವಿಚಾರವನ್ನ ಮಾತಾಡಿದ್ದರೆ, ಈ ತರಹ ಮಾತಾಡಿದ್ದರೆ ಸುದೀಪ್ ಅಣ್ಣ ಮಾತಾಡ್ತಾರೋ, ಇಲ್ವೋ ಕೇಳಿ..’’ ಎಂದ ಮಾನಸಾ ನಂತರ, ‘’ನಾನು ಮಾತಾಡಿಲ್ಲ. ನಾನು ಸ್ವಂತ ಅಣ್ಣನ ತರಹ ಭಾವಿಸಿದ್ದೇನೆ. ನಾನು ಮಾತಾಡಿಲ್ಲ’’ ಎಂದು ಮತ್ತೊಮ್ಮೆ ವಾದಿಸಿದರು. ಆದರೆ, ಗೌತಮಿ ಜಾಧವ್ ಮಾತ್ರ ‘’ನಾನು 100% sure about it’’ ಎಂದರು.
ಟಾಸ್ಕ್ ಮುಗಿದ್ಮೇಲೆ ಸತ್ಯ ಒಪ್ಪಿಕೊಂಡ ಮಾನಸಾ!
ಟಾಸ್ಕ್ ಮುಗಿದ್ಮೇಲೆ ಬಾತ್ರೂಮ್ ಏರಿಯಾದಲ್ಲಿ ಗೌತಮಿ ಜಾಧವ್ ಬಳಿ ತಾವು ಹಾಗೆ ಹೇಳಿದ್ದು, ಹೌದು ಅಂತ ಸತ್ಯವನ್ನ ಮಾನಸಾ ಒಪ್ಪಿಕೊಂಡರು. ಮಾನಸಾ – ಗೌತಮಿ ಜಾಧವ್ ಮಧ್ಯೆ ನಡೆದ ಮಾತುಕತೆ ನಡೆದಿದೆ.
ಮಾನಸಾ – ನಾನು ಹೇಳೇ ಇಲ್ಲ ಅಂತ ಹೇಳಬೇಕಿತ್ತು. ಬಿಟ್ಟುಕೊಡೋಕೆ ಆಗಲಿಲ್ಲ ಅಷ್ಟೇ.
ಗೌತಮಿ ಜಾಧವ್ – ಅಂದ್ರೆ ಒಪ್ಪಿಕೊಳ್ತೀರಾ.. ಹೇಳಿದ್ದನ್ನ?
ಮಾನಸಾ – ಹಾ.. ಹೇಳಿದೆ. ಆದರೆ, ನನ್ನ ಫೀಲಿಂಗ್ಸ್ ಮಾತ್ರ ಸತ್ಯ.
ಗೌತಮಿ ಜಾಧವ್ – ಅದು ನಿಮಗೆ ಬಿಟ್ಟಿದ್ದು. ನಿಮ್ಮ ಫೀಲಿಂಗ್ಸ್ನ ನಾವು ಜಡ್ಜ್ ಮಾಡಿಲ್ಲ
ಮಾನಸಾ – ನಾನು ಸತ್ಯನೇ ಮಾತಾಡ್ತೀನಿ ಅಂತ ಯಾವ ರಾಜಕಾರಣಿನೂ ಕೂರಲ್ಲ.
ಗೌತಮಿ ಜಾಧವ್ – ಅದು ನನಗೆ ಗೊತ್ತಿಲ್ಲ.
ಮಾನಸಾ – ಈಗ ಅದನ್ನೇ ಸಾಧಿಸ್ತೀಯಾ?
ಗೌತಮಿ ಜಾಧವ್ – ಸಾಧಿಸಲ್ಲ ನಾನು ಎಂದರು.
ಮಾನಸಾ ಆಡಿದ ಮಾತಿನ ಬಗ್ಗೆ ಬೇಸರಗೊಂಡ ತ್ರಿವಿಕ್ರಮ್, ‘’ಆಟದಲ್ಲಿ ಪ್ಲಾನ್ ಮಾಡಿ ಗೊತ್ತು. ಬದುಕೋದ್ರಲ್ಲಿ ಪ್ಲಾನ್ ಮಾಡೋದು ಗೊತ್ತಿಲ್ಲ’’ ಎಂದರು. ಆಗ, ‘’ಸುಳ್ಳು ಸುಳ್ಳು ಎಮೋಷನ್ಸ್ ಬರುತ್ತಾ’’ ಅಂತ್ಹೇಳಿ ಹಂಸ ಬೇಸರ ವ್ಯಕ್ತಪಡಿಸಿದಾಗ, ‘’ಅಣ್ಣ ಅಂದು ಅತ್ತು ಆಮೇಲೆ ಈ ತರಹ ಸ್ಟೇಟ್ಮೆಂಟ್ ಕೊಟ್ಟಿರೋದು ನನಗೆ ಬೇಜಾರಾಗಿದೆ’’ ಅಂತ ತ್ರಿವಿಕ್ರಮ್ ಹೇಳಿದರು. ‘’ಅಣ್ಣ ಅನ್ನೋದು ಎಮೋಷನ್. ಕಣ್ಣೀರು ಹಾಕಿಬಿಟ್ಟು ಆಟಾಡಿದ್ಯಲ್ಲ’’ ಅಂತ ಮಾನಸಾ ಬಗ್ಗೆ ಉಗ್ರಂ ಮಂಜು ಬಳಿ ತ್ರಿವಿಕ್ರಮ್ ತಮ್ಮ ಅಸಮಾಧಾನವನ್ನ ಹೊರಹಾಕಿದರು.