ಇತ್ತೀಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್ ಗಳಿಂದ ಸೋಲು ಕಂಡಿತು. ಈ ಮೂಲಕ ಭಾರತ ಟೆಸ್ಟ್ ಸರಣಿಯನ್ನು ಕೈಚೆಲ್ಲಿದೆ.
ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 259 ರನ್ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ ತಂಡ ಕೇವಲ 156 ರನ್ಗಳಿಗೆ ಆಲೌಟ್ ಆಗುವ ಮೂಲಕ 103 ರನ್ ಗಳ ಹಿನ್ನಡೆ ಅನುಭವಿಸಿತ್ತು. 2ನೇ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲೆಂಡ್ 255 ರನ್ ಕಲೆ ಹಾಕಿ ಆಲೌಟ್ ಆಗಿತ್ತು. ಇದರೊಂದಿಗೆ ಭಾರತಕ್ಕೆ ಗೆಲ್ಲಲು 359 ರನ್ ಗುರಿ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ಭಾರತ 245 ರನ್ಗಳಿಗೆ ಆಲೌಟ್ ಆಗುವ ಮೂಲಕ 113 ರನ್ ಗಳಿಂದ ಪಂದ್ಯ ಸೋತಿದೆ.
ಇನ್ನು, 3ನೇ ಟೆಸ್ಟ್ ಪಂದ್ಯ ಮುಂಬೈನ ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಇದಕ್ಕೆ ಟೀಮ್ ಇಂಡಿಯಾ ಭರ್ಜರಿ ತಯಾರಿ ಮಾಡಿಕೊಂಡಿದೆ. ನವೆಂಬರ್ 1ನೇ ತಾರೀಕಿನಿಂದ ಶುರುವಾಗೋ ಈ ಟೆಸ್ಟ್ ಪಂದ್ಯ 5ರ ವರೆಗೆ ನಡೆಯಲಿದೆ. ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ತಲುಪಲು ಈ ಪಂದ್ಯ ಗೆಲ್ಲಲೇಬೇಕಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾಗೆ ಸ್ಟಾರ್ ಪ್ಲೇಯರ್ ಕೈ ಕೊಟ್ಟಿದ್ದಾರೆ.
ಇದನ್ನು ಓದಿ : Bigg Boss ಮನೆಯಿಂದ ನಟಿ ಹಂಸ ಔಟ್!
ನ್ಯೂಜಿಲೆಂಡ್ ವಿರುದ್ಧದ 3ನೇ ಟೆಸ್ಟ್ನಿಂದ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಔಟ್ ಆಗೋ ಸಾಧ್ಯತೆ ಇದೆ. ಮೊದಲ ಟೆಸ್ಟ್ನಲ್ಲಿ ಪಂತ್ ಕೀಪಿಂಗ್ ಮಾಡುವಾಗ ತೀವ್ರವಾಗಿ ಗಾಯಗೊಂಡಿದ್ದರು. ಮೊಣಕಾಲಿಗೆ ಎಲ್ಲಿ ಸರ್ಜರಿ ಆಗಿತ್ತೋ ಅದೇ ಜಾಗಕ್ಕೆ ಗಾಯ ಆಗಿತ್ತು. ಬಾಲ್ ಬಲವಾಗಿ ಬಿದ್ದ ಕಾರಣ ಪಂತ್ ನೋವಿನಿಂದ ಕುಸಿದು ಬಿದ್ದಿದ್ದರು. ಬಳಿಕ ಮೈದಾನದಿಂದ ಹೊರ ನಡೆದಿದ್ದು, ಇವರ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡಿದ್ದರು. ರೆಸ್ಟ್ ಮಾಡಿದ ನಂತರ 2ನೇ ಟೆಸ್ಟ್ನಲ್ಲಿ ಬ್ಯಾಟಿಂಗ್ ಮಾಡಿದ್ರು. ಆದರೆ, ರನ್ನಿಂಗ್ ವೇಳೆ ಮತ್ತೆ ಅದೇ ಕಾಲಿಗೆ ಪೆಟ್ಟು ಬಿದ್ದಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಹಾಸನಾಂಬೆಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಮೊದಲ ಟೆಸ್ಟ್ ಪಂದ್ಯ ಸೋಲಿನ ಕನ್ನಡಿಗ ಕೆ.ಎಲ್ ರಾಹುಲ್ ಅವರನ್ನು ಬೆಂಚ್ ಕಾಯಿಸಲಾಗಿತ್ತು. ಈಗ ಪಂತ್ಗೆ ಇಂಜೂರಿ ಆಗಿರೋ ಕಾರಣ ಇವರಿಗೆ ತಂಡದಲ್ಲಿ ಸ್ಥಾನ ನೀಡಲಾಗುವುದು ಎಂದು ತಿಳಿದು ಬಂದಿದೆ.