ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್ ಪ್ರದೇಶದಲ್ಲಿ ಹುಚ್ಚು ನಾಯಿಯೊಂದು ಕಂಡ ಕಂಡವರನ್ನು ಕಚ್ಚಿ ಗಾಯಗೊಳಿಸಿದ್ದು ಒಟ್ಟು 16 ಜನರು ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗೋಕುಲ ರೋಡ್ನಲ್ಲಿ ಸೋಮವಾರ ಮಧ್ಯಾಹ್ನ 30ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿತ್ತು. ಈ ಪೈಕಿ 16ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಂತ್ರಸ್ತರಿಗೆ ತೀವ್ರ ಗಾಯಗಳಾಗಿದ್ದು ರಕ್ತಸ್ರಾವವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಕು ನಾಯಿಗೆ ಹುಚ್ಚು ಹಿಡಿದಿದ್ದರಿಂದ ಮಾಲೀಕರೇ ಅದನ್ನು ಹೊರಗೆ ಬಿಟ್ಟರೋ ಅಥವಾ ಅದೇ ತಪ್ಪಿಸಿಕೊಂಡು ಬಂತೋ. ಒಟ್ಟಿನಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಒಬ್ಬರ ನಂತರ ಒಬ್ಬರಂತೆ 30ಕ್ಕೂ ಹೆಚ್ಚು ಜನರಿಗೆ ನಾಯಿ ಕಚ್ಚಿದೆ. ಈ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಅಧಿಕಾರಿಗಳು ಸೋಮವಾರ ತಡರಾತ್ರಿ ನಾಯಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ: ತಮ್ಮನನ್ನ ನೆನೆದು ಕಣ್ಣೀರಿಟ್ಟ ಹಿರಿಯ ಅಕ್ಕ..
ನಾಯಿ ದಾಳಿಗೆ ಗುರಿಯಾದವರಲ್ಲಿ ಯುವಕರು, ಶಾಲಾ ಮಕ್ಕಳು, ಮಹಿಳೆಯರು, ಕಾರ್ಮಿಕರು ಮತ್ತು ವೃದ್ಧರು ಸೇರಿದ್ದಾರೆ. ರಕ್ತದಲ್ಲಿ ತೊಯ್ದ ಬಟ್ಟೆಯಲ್ಲಿ ಚಿಕಿತ್ಸೆಗಾಗಿ ಗಾಯಾಳುಗಳು ಚಿಕಿತ್ಸೆಗೆ ಆಗಮಿಸಿದ್ದು ಗಂಭೀರ ಗಾಯಗೊಂಡವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಪೌರಾಯುಕ್ತರ ವಿರುದ್ಧ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಗೋಕುಲ ರಸ್ತೆಯಿಂದ ಏರ್ ಪೋರ್ಟ್ ರಸ್ತೆವರೆಗೆ 80ಕ್ಕೂ ಹೆಚ್ಚು ಮಂದಿಗೆ ಕಚ್ಚಿದೆ. ಸ್ಥಳೀಯರು ಭಯಭೀತರಾಗಿದ್ದು ಅಧಿಕಾರಿಗಳು ಕೂಡಲೇ ಈ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸುತ್ತೇನೆ ಎಂದು ಸ್ಥಳೀಯ ನಾಗರಿಕ ರವಿಕುಮಾರ್ ಆಗ್ರಹಿಸಿದರು.