ನೆನಪಿರಲಿ ಪ್ರೇಮ್ ಅವರು ಸದಾ ಚಾಕೋಲೇಟ್ ಬಾಯ್ ರೀತಿ ಕಾಣಿಸಿಕೊಂಡಿದ್ದು ಹೆಚ್ಚು. ಅವರು ಫಿಟ್ ಆಗಿರೋಕೆ ಜಿಮ್ನಲ್ಲಿ ವರ್ಕೌಟ್ ಮಾಡಿದ್ದು ಇದೆ. ಈಗ ಅವರ ಹೊಸ ಫೋಟೋಗಳನ್ನು ನೋಡಿ ಎಲ್ಲರೂ ಕಣ್ಣರಳಿಸಿದ್ದಾರೆ.
ನೆನಪಿರಲಿ ಪ್ರೇಮ್ ತುಂಬಾನೇ ಪರ್ಫೆಕ್ಟ್ ಆಗಿದ್ದಾರೆ. ಕಥೆ ಆಯ್ಕೆ ವಿಚಾರದಲ್ಲೂ ತುಂಬಾ ಸೂಕ್ಷ್ಮ ಇದ್ದಾರೆ. ಸುಮ್ನೆ ಏನೇನೋ ಒಪ್ಪಿಕೊಳ್ಳೋದಿಲ್ಲ. ಅದೇ ರೀತಿ ದೇಹ ದಂಡಿಸೋ ವಿಚಾರದಲ್ಲೂ ಪರ್ಫೆಕ್ಟ್ ಆಗಿದ್ದಾರೆ. ಈ ಕಾರಣಕ್ಕೆ ಪ್ರೇಮ್ ದೇಹ ಇದೀಗ ಅದ್ಭುತವಾಗಿಯೇ ಹೊಳೆಯುತ್ತಿದೆ. ನೆನಪಿರಲಿ ಪ್ರೇಮ್ ಮುಂದಿನ ಚಿತ್ರಕ್ಕೆ ಈ ಒಂದು ತಯಾರಿ ಮಾಡಿಕೊಂಡಿದ್ದಾರೆ ಅಂದಾಜಿತ್ತು. ಆದರೆ, ಆ ಮಾತನ್ನ ಪ್ರೇಮ್ ತಳ್ಳಿಹಾಕಿದ್ದಾರೆ. ನಾನು ಸದಾ ಫಿಟ್ ಆಗಿಯೇ ಇದ್ದೇನೆ. ಅದಕ್ಕಾಗಿ ವರ್ಕೌಟ್ ಮಾಡ್ತಾನೇ ಇರುತ್ತೇನೆ.
ಇದನ್ನು ನೋಡಿ:ಬಾಲಿವುಡ್ನಲ್ಲಿ ಸಲ್ಮಾನ್ ಖಾನ್ ಜೊತೆ ನಟ ಕಿಶೋರ್ !
ಆದರೆ, ಇದೇ ಫಿಟ್ನೆಸ್ನಲ್ಲಿಯೇ ಮುಂದಿನ ಹಂತಕ್ಕೆ ಹೋಗಬೇಕಿತ್ತು. ಹಾಗಾಗಿಯೇ ಈಗ ಈ ಒಂದು ಫಿಜಿಕ್ ಮಾಡಿಕೊಂಡಿದ್ದೇನೆ. ಆದರೆ, ಇದು ಯಾವುದೇ ಒಂದು ರೋಲ್ಗಾಗಿ ಮಾಡಿರೋ ವರ್ಕೌಟ್ ಅಲ್ವೇ ಅಲ್ಲ. ಜೀವನವಿಡಿ ಹೀಗೆ ಫಿಟ್ ಆಗಿರಬೇಕು ಅನ್ನೋದೇ ಆಗಿದೆ. ಅಂದ್ರೆ, ಈ ಒಂದು ವರ್ಕೌಟ್ ಅನ್ನ ನನಗಾಗಿಯೇ ಮಾಡಿಕೊಂಡಿದ್ದೇನೆ. ಯಾವುದೇ ಪ್ರತ್ಯೇಕ ಚಿತ್ರಕ್ಕಾಗಿ ಅಲ್ವೇ ಅಲ್ಲ ಅಂತಲೇ ಪ್ರೇಮ್ ಹೇಳಿಕೊಂಡಿದ್ದಾರೆ. ಇನ್ನು ಪ್ರೇಮ್ ಅವರಿಗೆ ಈಗ 48 ವರ್ಷ. ಈ ವಯಸ್ಸಿನಲ್ಲಿ ಅವರು ಜಿಮ್ನಲ್ಲಿ ಇಷ್ಟು ಕಸರತ್ತು ಮಾಡಿರೋದು ಅಭಿಮಾನಿಗಳಿಗೆ ಖುಷಿ ನೀಡಿದೆ. ಎಲ್ಲರೂ ಅವರನ್ನು ಹೊಗಳುತ್ತಿದ್ದಾರೆ.