ದೀಪಾವಳಿ ಬಂತು ಅಂದ್ರೆ ಸಾಕು ಕಾಫೀನಾಡಲ್ಲಿ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ವರ್ಷಕ್ಕೆ ಒಮ್ಮೆ ದರ್ಶನ ನೀಡುವ ಬೆಟ್ಟದ ತಾಯಿ ದೇವಿರಮ್ಮನ ನೋಡಲು ದೇಶದ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ಆದ್ರೆ ಈಗಿನ ಸೋಷಿಯಲ್ ಮೀಡಿಯಾದ ಜನರು ಕಂಡ ಕಂಡಲ್ಲೆಲ್ಲಾ ರೀಲ್ಸ್ ಮಾಡೋ ಗೋಜಿಗೆ ಇಳಿದಿದ್ದಾರೆ. ಹೀಗಾಗಿ ಕಾಫಿನಾಡಲ್ಲಿ ಖಾಕಿ ಖಡಕ್ ಸೂಚನೆ ಕೊಟ್ಟಿದೆ.
ಇದನ್ನು ಓದಿ : ದರ್ಶನ್ ಜೈಲಿಂದ ಕಾಲಿಟ್ಟ ತಕ್ಷಣ ಆಗಿದ್ದೇನು ನೋಡಿ..!
ಸಮುದ್ರ ಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತರದ ಪಿರಮಿಡ್ ಆಕಾರದ ಬೆಟ್ಟದ ತುದಿಯಲ್ಲಿ ನೆಲೆ ನಿಂತು, ವರ್ಷಕ್ಕೊಮ್ಮೆ ದರ್ಶನ ನೀಡೋ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ದೇವೀರಮ್ಮನ ಭಕ್ತರಿಗೆ ಖಾಕಿ ಪಡೆ ಕಠಿಣ ಸಂದೇಶ ರವಾನಿಸಿದೆ. ಮಳೆ ಬಂದು ಬೆಟ್ಟ ಜಾರುತ್ತಿದೆ. ಬೆಟ್ಟ ಹತ್ತುವಾಗ ಮಾರ್ಗ ಮಧ್ಯೆ ಸೆಲ್ಪಿ ತೆಗೆದುಕೊಳ್ಳುವುದು, ರೀಲ್ಸ್ ಮಾಡುವುದು, ಫೋಟೋ ಸೆಷನ್ ಮಾಡುವುದು ಕಂಡುಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ: ಶಿಗ್ಗಾಂವಿ ಅಭಿವೃದ್ಧಿ: ಸಚಿವ ಜಮೀರ್ಗೆ ಬೊಮ್ಮಾಯಿ ತಿರುಗೇಟು!
ಬುಧವಾರ ಸಂಜೆ 4 ಗಂಟೆಯಿಂದ ಗುರುವಾರ ಸಂಜೆವರೆಗೂ ಬೆಟ್ಟ ಹತ್ತಿ ದೇವೀರಮ್ಮನ ದರ್ಶನಕ್ಕೆ ದೇವಾಲಯ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ. ಹಾಗಾಗಿ, ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುವ ಸಾಧ್ಯತೆ ಇದ್ದು ಜಿಲ್ಲಾಡಳಿತ ಸರ್ವ ಸಕಲ ಸಿದ್ಧತೆ ಮಾಡಿಕೊಂಡಿದೆ. ಸುಮಾರು 3 ಕಿ.ಮೀ. ಎತ್ತದ ಬೆಟ್ಟದಲ್ಲಿ ಪ್ರತಿ 1 ಕಿ.ಮೀ.ಗೆ ಒಂದು ಪೊಲೀಸರ ತಂಡವನ್ನ ನಿಯೋಜನೆ ಮಾಡಲಾಗಿದೆ. ಬೆಟ್ಟದ ಮಾರ್ಗದ 5 ಕಡೆ ಮೆಗಾಫೋನ್ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಮಾರ್ಗದುದ್ದಕ್ಕೂ ಅಲ್ಲಲ್ಲೇ, ಪೊಲೀಸ್, ಆರೋಗ್ಯ ಸಿಬ್ಬಂದಿ, ಅಗ್ನಿಶಾಮಕ, ಸ್ವಯಂಸೇವಕರು ಭಕ್ತರ ಅನುಕೂಲಕ್ಕೆ ಸಿದ್ಧರಿರ್ತಾರೆ. ಬೆಟ್ಟ ಹತ್ತಲು ಸುಸ್ತಾದರೆ ರೋಪ್ (ಹಗ್ಗ) ಹಿಡಿದು ಹತ್ತೋದಕ್ಕೂ ಸ್ವಯಂ ಸೇವಕರು, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗಳು ನೆರವಿಗೆ ಬರಲಿದ್ದಾರೆ.