ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿದ್ದ ನಟ ದರ್ಶನ್ಗೆ ಕೊನೆಗೂ ಸಿಕ್ಕೇ ಬಿಡ್ತು ಜಾಮೀನು, ದರ್ಶನ್ ಗೆ ಮಧ್ಯಂತರ ಜಾಮೀನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಅನಾರೋಗ್ಯ ಹಿನ್ನೆಲೆಯಲ್ಲಿ ಬೇಲ್ ಮಂಜೂರು ಮಾಡಿದೆ. 5 ತಿಂಗಳ ಬಳಿಕ ದರ್ಶನ್ ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಈ ಬೆನ್ನಲ್ಲೇ ಹೊಸ ಸುದ್ದಿಯೊಂದು ಹರಿದಾಡ್ತಿದೆ. ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿ ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಇದನ್ನು ಓದಿ: ಮಗನನ್ನ ತಬ್ಬಿಕೊಂಡ ಅತ್ತ ದರ್ಶನ್..ಭಾವುಕ ಕ್ಷಣ…!
ಜೈಲಿನಲ್ಲಿರುವಾಗ ದರ್ಶನ್ ಗೆ ಸುದೀಪ್ ತಾಯಿ ನಿಧನ ಬಗ್ಗೆ ವಿಜಯಲಕ್ಷ್ಮೀ ತಿಳಿಸಿದ್ದಾರೆ . ಹೀಗಾಗಿ ಕಹಿ ನೆನಪುಗಳನ್ನು ಮರೆತು ಮತ್ತೆ ಒಂದಾಗ್ತಾರಾ ದರ್ಶನ್ ಮತ್ತು ಸುದೀಪ್ ಎಂಬುದು ನೋಡಬೇಕಿದೆ. ನಿನ್ನೆಯಷ್ಟೇ ಜೈಲಿನಿಂದ ಬಿಡುಗಡೆ ಆಗಿರೋ ನಟ ದರ್ಶನ್ , ಅಮ್ಮನನ್ನ ಕಳೆದುಕೊಂಡು ದುಃಖದಲ್ಲಿರುವ ಕಿಚ್ಚ ಸುದೀಪ್ಅನ್ನು ಭೇಟಿ ಮಾಡಿ ಸಾಂತ್ವಾನ ಹೇಳಿ ಮಾಜಿ ದೋಸ್ತ್ ನ ಕಷ್ಟ ಕಾಲದಲ್ಲಿ ನಿಂತುಕೊಳ್ತಾರಾ ಎಂದು ಕಾದು ನೋಡಬೇಕಿದೆ. ಒಂದಾಗ್ತಾರೆ ಅನ್ನೋದಾದರೆ ಎಲ್ಲಿ ಭೇಟಿ ಆಗ್ತಾರೆ ಯಾವಾಗ ಭೇಟಿ ಆಗ್ತಾರೆ ಎನ್ನುವ ಕುತೂಹಲ ಮೂಡಿದೆ. ಒಂದು ವೇಳೆ ಉಭಯ ನಟರು ಭೇಟಿ ಆದ್ರೆ ಸ್ಯಾಂಡಲ್ ವುಡ್ನಲ್ಲಿ ಹಬ್ಬದ ವಾತಾವರಣ ಸೃಷ್ಟಿ ಆಗಲಿದೆ. ದರ್ಶನ್ ಮತ್ತು ಸುದೀಪ್ ಒಂದಾಗುವಿಕೆಗೆ ಕಾಯ್ತಿದ್ದಾರೆ ಫ್ಯಾನ್ಸ್.