ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಹಾಗೂ ಮಾಜಿ ಉಪಪ್ರಧಾನಿ ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತೆ ಎಡವಟ್ಟು ಮಾಡಿಕೊಂಡಿದ್ದಾರೆ.
ಭಾರತದ ಇಬ್ಬರು ಮಹಾನ್ ಚೇತನಗಳಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದ ಖರ್ಗೆ ಅವರು ಮಾತಿನ ಭರದಲ್ಲಿ ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಎನ್ನುವ ಬದಲು ಬಾಯ್ತಪ್ಪಿನಿಂದ ಸೋನಿಯಾ ಗಾಂಧಿ ಎಂದು ಹೇಳಿದರು. ತಪ್ಪಿನ ಅರಿವಾಗಿ ಕೂಡಲೇ ಸಾರಿ ಕೇಳಿ, ಇಂದಿರಾಗಾಂಧಿ ಅವರಿಗೆ ಶ್ರದ್ಧಾಂಜಲಿ ಎಂದರು.
ಇದನ್ನು ಓದಿ: “ಸಾರಥಿ” ಯನ್ನು ನೋಡಲು ಬಂದ ಮೀನಾ ತೂಗುದೀಪ್!
ಶ್ರೀಮತಿ ಇಂದಿರಾಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಈ ಇಬ್ಬರು ಮಹಾಪುರುಷರು ನಮಗೆ ಪ್ರೇರಣೆ. ಮಹಾಚೇತನಗಳಿಂದ ಪ್ರೇರಣೆ ಪಡೆಯಲು ನಾವಿಲ್ಲಿ ಸೇರಿದ್ದೇವೆ ಎಂದರು. ಇದೇ ವೇಳೆ ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಜವಾಹರಲಾಲ್ ಅವರ ಜೊತೆ ಗಟ್ಟಿಯಾಗಿ ನಿಂತ ನಾಯಕ. ಹೈದ್ರಾಬಾದ್ ಕರ್ನಾಟಕಕ್ಕೆ ಲೇಟ್ ಆಗಿ ನಮಗೆ ಸ್ವಾತಂತ್ರ್ಯ ಸಿಕ್ತು. ವಲ್ಲಭಭಾಯಿ ಪಟೇಲ್ ಅವರು ಒಗ್ಗೂಡಿಸುವುದಕ್ಕೆ ಪ್ರಯತ್ನ ಪಟ್ಟರು. ಆ ಒಗ್ಗಟ್ಟನ್ನ ಕಾಪಾಡುವುದಕ್ಕೆ ಇಂದಿರಾಗಾಂಧಿ, ಸೋನಿಯಾಗಾಂಧಿ , ರಾಹುಲ್ ಗಾಂಧಿ ಪ್ರಾಣ ಕೊಟ್ಟರು ಎನ್ನುವ ಮೂಲಕ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡರು. ಬಳಿಕ ಸಾವರಿಸಿಕೊಂಡು ದಿನ ಹೇಳಿ ಹೇಳಿ ಈ ರೀತಿ ಆಗ್ತಾ ಇದೆ, ಮೀಡಿಯಾದವ್ರು ಇದನ್ನ ನೀವು ಹೈಲೈಟ್ ಮಾಡಬೇಡಿ ಎಂದು ಮನವಿ ಮಾಡಿದರು.
ಇದನ್ನು ಓದಿ: ದರ್ಶನ್ಗೆ ಜಾಮೀನು ಸಿಕ್ಕಿರೋದು ಖುಷಿ ಆಗಿದೆ; ಸಚಿವ ಜಮೀರ್ ಸಂತಸ!
ನಾನು ಮಾತನಾಡಿದ ಮೇಲೆ ಯಾರೂ ಮಾತನಾಡುವಂತಿಲ್ಲ ಎಂದು ಸಭೆ ಆಯೋಜಕರಿಗೆ ಖರ್ಗೆ ಸೂಚಿಸಿದರು. ಇದಕ್ಕೂ ಮೊದಲು ವೀರಪ್ಪ ಮೊಯ್ಲಿ ಮಾತನಾಡಿದ್ರು, ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದ್ರು. ನಂತರ ಡಿಸಿಎಂ ಡಿಕೆ ಶಿವಕುಮಾರ ಮಾತನಾಡ್ತಾರೆ ಎಂದು ಸಂಸದ ಜಿಸಿ ಚಂದ್ರಶೇಖರ್ ಹೇಳಿದರು. ಈ ವೇಳೆ ಎಐಸಿಸಿ ಅಧ್ಯಕ್ಷರು ಮಾತನಾಡಲಿ ಬಳಿಕ ಮಾತನಾಡ್ತೇನೆ ಎಂದ ಡಿಕೆ ಶಿವಕುಮಾರ. ಆದರೆ ಭಾಷಣ ಆರಂಭಿಸುವ ಮುನ್ನ ನಾನು ಮಾತನಾಡಿದ ಮೇಲೆ ಯಾರೂ ಮಾತನಾಡುವಂತಿಲ್ಲ ಎಂದು ಖರ್ಗೆ ಸೂಚಿಸಿದ್ದರು. ಅಷ್ಟಾದರೂ ಖರ್ಗೆ ಭಾಷಣ ಬಳಿಕ ಡಿಕೆ ಶಿವಕುಮಾರ ಮಾತು ಶುರು ಮಾಡಿದರು.
ಇದನ್ನು ಓದಿ: ಕುಮಾರಸ್ವಾಮಿ ನೋಟು, ಯೋಗೇಶ್ವರ್ಗೆ ವೋಟು; ಸಿಪಿವೈ..!
ಹರಿಯಾಣ ಚುನಾವಣಾ ಫಲಿತಾಂಶ ವಿಚಾರ ಪ್ರಸ್ತಾಪಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು ಖರ್ಗೆ ಅವರು, ಹರಿಯಾಣದಲ್ಲಿ ನಾವು ಹೇಗೆ ಸೋತಿದ್ದೇವೆ? ಇವರು ರಾತ್ರೋರಾತ್ರಿ ಏನು ಬೇಕೋ ಮಾಡಿಕೊಂಡ್ರು. 66 ಸ್ಥಾನದಲ್ಲಿದ್ದ ನಾವು ಒಂದೇ ಗಂಟೆಯಲ್ಲಿ ಏಕಾಏಕಿ 33 ಸ್ಥಾನಕ್ಕೆ ಕುಸಿದೆವು. ಇದು ಹೇಗೆ ಸಾಧ್ಯ ಆಯ್ತು? ಎಂದು ಪ್ರಶ್ನಿಸಿದರು ಮುಂದುವರಿದು, ಇವ್ರಿಗೆ ಹೇಗೆ ಬೇಕೋ ಹಾಗೇ ಇವಿಎಂ ಪ್ರೋಗ್ರಾಂ ಬಳಸ್ತಾರೆ. ಆಮೇಲೆ ಹೇಳ್ತಾರೆ ನೀವು ಗೆದ್ದಾಗ ಇವಿಎಂ ಬಗ್ಗೆ ಹೇಳಲ್ಲ. ಸೋತಾಗ ಇವಿಎಂ ಬಗ್ಗೆ ಹೇಳ್ತಿರಾ ಅಂತ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಾಗ, ತೆಲಂಗಾಣದಲ್ಲಿ ಗೆದ್ದಾಗ ಇವಿಎಂ ಮಾತನಾಡಲ್ಲ ಅಂತಾರೆ ಅರೇ ಇವಿಎಂ ಪ್ರೋಗ್ರಾಂ ಮಾಡೋರೇ ನೀವೇ ಅಲ್ವೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.