ಚನ್ನಪಟ್ಟಣದಲ್ಲಿ ದಿನೇ ದಿನೇ ಚುನಾವಣಾ ಅಖಾಡ ರಂಗೇರುತ್ತಿದೆ. ಆರೋಪ ಪ್ರತ್ಯಾರೋಪಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದೀಗ ನಿಖಿಲ್ ಕುಮಾರಸ್ವಾಮಿಯನ್ನ ಸೋಲಿಸಲು ಕೂಪನ್ ಕಾರ್ಡ್ ಸದ್ದು ಜೋರಾಗಿ ಮಾಡುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ದ ಆರೋಪ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ಗಿಫ್ಟ್ ಕೂಪನ್ ಕಾರ್ಡ್ಅನ್ನು ಹಂಚಲು ಕಾಂಗ್ರೆಸ್ ಹುನ್ನಾರ ನಡೆಸಿದೆ. ಬೆಂಗಳೂರಿನ ಮಾಲ್ ಒಂದರಲ್ಲಿ ಕೂಪನ್ ನೀಡಿದ್ರೆ ಗಿಫ್ಟ್ ಆಮೀಷವನ್ನ ಒಡ್ಡಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ವಾರದ ಕಥೆ ಕಿಚ್ಚನ ಜೊತೆ ಗೆ ಕಿಚ್ಚ ಬರ್ತಾರಾ?
ವಾಮಮಾರ್ಗದಲ್ಲಿ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್ ಸಂಚು ನಡೆಸಿದೆ. ರಾಮನಗರ ಚುನಾವಣೆ ವೇಳೆ ಕಾಂಗ್ರೆಸ್ ಕೂಪನ್ ಹಂಚಿ ಅಕ್ರಮ ನಡೆಸಿತ್ತು. ಅದೇ ರೀತಿ ಈಗಲೂ ಅಕ್ರಮ ನಡೆಸಲು ಹೊರಟಿದೆ, ಬೆಂಗಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಖರೀದಿಗೆ ಕೂಪನ್ ಕಾರ್ಡ್ ಹಂಚುತ್ತಿದ್ದಾರೆ. ₹3,000,₹5000 ಮೌಲ್ಯದ ಗಿಫ್ಟ್ ಕೂಪನ್ ಹಂಚಲಾಗಿತ್ತು. ಕಾಂಗ್ರೆಸ್ ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲುವ ಚಾಳಿ ಮಾಡಿಕೊಂಡಿದೆ, ಇಂಥ ವಂಚನೆಯ ಕುತಂತ್ರಕ್ಕೆ ಯಾರೂ ಮರುಳಾಗಾಬಾರದು ಎಂದು ಚನ್ನಪಟ್ಟಣ ಜನರಿಗೆ ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.