ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲುವಾಸ ಅನುಭವಿಸದ ದರ್ಶನಗಗ ಮಧ್ಯಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಆದರೆ ಜಾಮೀನು ಪಡೆದು ಹೊರಗೆ ಬಂದಿರೋ ದರ್ಶನ್ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ ಪೊಲೀಸ್ ಹಾಗೂ ನ್ಯಾಯಾಲಯ.
ದರ್ಶನ್ ಪ್ರತಿ ನಡೆಯ ಮೇಲೂ ಪೊಲೀಸರು, ನ್ಯಾಯಾಲಯದ ನಿಗಾ ಇಟ್ಟಿದ್ದಾರೆ. ದರ್ಶನ್ ಸ್ವಲ್ಪ ಎಚ್ಚರ ತಪ್ಪಿದ್ರೂ ಬೇಲ್ ಕ್ಯಾನ್ಸಲ್ ಆಗೋದು ನಿಶ್ಚಿತ. ಷರತ್ತು ವಿಧಿಸಿ 6 ವಾರಗಳ ಕಾಲ ಬೆನ್ನುನೋವಿನ ಶಸ್ತ್ರ ಚಿಕಿತ್ಸೆಗಾಗಿ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ: ವಾಸಿಯಾಗೋಕೆ 5-6 ತಿಂಗಳು ಬೇಕೇ ಬೇಕು!
ದರ್ಶನ್ಗೆ ಸಿಕ್ಕಿರೋದು ಕೇವಲ ಮಧ್ಯಂತರ ಜಾಮೀನು ಮಾತ್ರ. ಬೇಲ್ ವೇಳೆ ದರ್ಶನ್ ಗಮನ ಕೇವಲ ಅವರ ಆರೋಗ್ಯದ ಮೇಲಿರಬೇಕು, ಅದನ್ನು ಬಿಟ್ಟು ಬೇರೆ ಎಲ್ಲಿಯೂ ನಟ ದರ್ಶನ್ ಹೋಗುವಂತಿಲ್ಲ. ಕೋರ್ಟ್ ಹೇಳಿರೋದನ್ನು ಚಾಚೂ ತಪ್ಪದೇ ಪಾಲಿಸಬೇಕು. ಅಭಿಮಾನಿಗಳು ಅತಿರೇಕದ ವರ್ತನೆ ಕೂಡಾ ದರ್ಶನ್ ಬೇಲ್ ಮೇಲೆ ಪರಿಣಾಮ ಬೀರಬಹುದು.
ಅಭಿಮಾನಿಗಳು ಹುಚ್ಚುಚ್ಚಾಗಿ ವರ್ತಿಸಿದ್ರೂ ದರ್ಶನ್ಗೆ ಸಂಕಷ್ಟ ಕಟ್ಟಿಟ್ಟಬುತ್ತಿ. ರೂಲ್ಸ್ ಬ್ರೇಕ್ ಮಾಡಿದ್ರೆ ಸಾಮಾನ್ಯ ಜಾಮೀನು ಪಡೆಯಲು ಕಂಟಕ ಎದುರಾಗುವುದು ಕಂಡಿತವಾಗಿಯು ಸತ್ಯ. ಎಷ್ಟೇ ಕಷ್ಟವಾದ್ರೂ ಕೋರ್ಟ್ ಹೇಳಿರೋದನ್ನು ಪಾಲಿಸಲೇಬೇಕೆಂಬ ಅನಿವಾರ್ಯತೆಯಲ್ಲಿದ್ದಾರೆ ನಟ ದರ್ಶನ್.
ಇದನ್ನೂ ಓದಿ: ದರ್ಶನ್ ಬೆನ್ನು ನೋವಿಗೆ ಅಸಲಿ ಕಾರಣ ಇಲ್ಲಿದೆ ನೋಡಿ..!