ಅವರು ಒಂದೇ ರೂಮಿನಲ್ಲಿ ಉಂಡು ತಿಂದು ವಾಸವಾಗಿದ್ದವರು. ಕೆಲಸ ಮಾಡುತ್ತಿದ್ದದ್ದು ನೆಲಮಂಗಲದ ಅರಿಶಿನಕುಂಟೆಯ ಸಮೋಸ ಫ್ಯಾಕ್ಟರಿಯಲ್ಲಿ. ಇಲ್ಲಿ ವಾಸ ಮಾಡ್ತಿದ್ದವರು ಬಿಹಾರ ಹಾಗೂ ನೇಪಾಳ ಮೂಲದವರು. ಅಲ್ಲಿ ಮಾಲೀಕರ ಹೋಂಡಾ ಆಕ್ಟಿವಾ ದ್ವಿಚಕ್ರವಾಹನ ಅಲ್ಲಿತ್ತು. ಮಾಲೀಕರು ಇಲ್ಲದೇ ಇದ್ದಾಗ ಅವರೇ ಓಡಾಡಿಕೊಂಡಿರುತ್ತಿದ್ದರು. ಆದ್ರೆ ಇದೇ ವಾಹನದ ವಿಷಯಕ್ಕೆ ಪರಸ್ಪರ ಜಗಳ ನಡೆಯಿತು.
ನೇಪಾಳ ಮೂಲದ ಹೇಮರಾಜನ ಜೊತೆ ಬಿಹಾರ ಮೂಲದ ಲಕ್ಕಿ ಹಾಗೂ ಮಹೇಶ ಇಬ್ಬರೊಡನೆ ಜಗಳ ನಡೆದಿತ್ತು. ರಾತ್ರಿ ಒಂದಷ್ಟು ತಣ್ಣಗೆ ಆಗಿತ್ತು ಅಂತ ಹೇಮರಾಜ ಅಂದುಕೊಂಡಿದ್ದ. ಆದ್ರೆ ನಿನ್ನೆ ರಾತ್ರಿ ಎಲ್ಲರೂ ಮಲಗಿದ್ದಾಗ ಲಕ್ಕಿ ಮತ್ತು ಮಹೇಶ ಇಬ್ಬರೂ ಹೇಮರಾಜನ ಕತ್ತು ಕೊಯ್ದು ಕೊಲೆ ಮಾಡಿ, ಪಲಾಯನಗೊಂಡಿದ್ದರು.
ವಿಷ್ಯ ತಿಳಿದ ನೆಲಮಂಗಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಶಿಧರ್ ಮತ್ತವರ ತಂಡ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಿದೆ. ಒಂದು ದ್ವಿಚಕ್ರವಾಹನದ ವಿಷ್ಯ ಒಂದು ಕೊಲೆಯಲ್ಲಿ ಅಂತ್ಯಗೊಂಡಿರುವುದು ದುರ್ದೈವವೇ ಸರಿ..