ತಂದಿಕ್ಕಿ ತಮಾಷೆ ನೋಡೊ ಜನ ಸಮಾಜದಲ್ಲಿ ಬಹಳಷ್ಟು ಮಂದಿ ಇದ್ದಾರೆ. ಇದು ಸಮಾಜದಲ್ಲಿ ಅಲ್ಲ ಈಗ ಬಿಗ್ ಬಾಸ್ ಮನೆಯಲ್ಲೂ ಇದೇ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಾ ಇರುತ್ತವೆ. ಒಬ್ಬರು ಆಡಿದ ಮಾತನ್ನು ಮತ್ತೊಬ್ಬರಿಗೆ ತೋರಿಸೋದಿಲ್ಲ. ಹೀಗೆ ತೋರಿಸಿದರೆ ಇಡೀ ಮನೆ ರಣರಂಗ ಆಗುತ್ತದೆ. ಈ ಕಾರಣಕ್ಕೆ ಒಬ್ಬರ ಬಗ್ಗೆ ಮತ್ತೊಬ್ಬರು ಏನು ಮಾತನಾಡಿಕೊಳ್ಳುತ್ತಾರೆ ಎಂಬ ವಿಡಿಯೋನ ತೋರಿಸಲ್ಲ. ಆದರೆ, ಈ ಬಾರಿ ಮನೆಯವರ ಮಧ್ಯೆ ಪಿಟ್ಟಿಂಗ್ ಇಡುವ ಕೆಲಸ ಆಗಿದೆ. ಇದರಿಂದ ಇಡೀ ಮನೆ ಹೊತ್ತು ಉರಿದಿದೆ.
ಬಿಗ್ ಬಾಸ್ನಲ್ಲಿ ಸ್ಪರ್ಧಿಗಳಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗಲ್ಲ. ಆದರೆ, ಎದುರಿನಿಂದ ಎಲ್ಲರೂ ಒಳ್ಳೆಯವರ ರೀತಿ ತೋರಿಸಿಕೊಳ್ಳುತ್ತಾರೆ. ಹಿಂದಿನಿಂದ ಆಡಿದ ಮಾತುಗಳು ಯಾರಿಗೂ ತಿಳಿಯಲ್ಲ ಎನ್ನುವ ಧೈರ್ಯದ ಮೇಲೆ ಒಬ್ಬರಿಗೊಬ್ಬರು ಚೆನ್ನಾಗಿ ಇರುತ್ತಾರೆ. ಈಗ ಹಿಂದಿನಿಂದ ಆಡಿದ ಮಾತುಗಳೇ ಅವರಿಗೆ ಮುಳುವಾಗಿದೆ.
ಬಿಗ್ ಬಾಸ್ ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಈ ಚಟುವಟಿಕೆಯ ಪ್ರಕಾರ ಪ್ರತಿ ಸ್ಪರ್ಧಿಯ ಫೋಟೋ ಬರುತ್ತದೆ ಮತ್ತು ಅವರು ಆಡಿದ ಮಾತನ್ನು ಪ್ರಸಾರ ಮಾಡಲಾಗುತ್ತದೆ. ಅದನ್ನು ಯಾವ ಜಾಗದಲ್ಲಿ ಹೇಳಲಾಗಿದೆ ಎಂಬುದನ್ನು ಊಹಿಸಬೇಕು. ಸರಿಯಾಗಿ ಊಹಿಸಿದರೆ ಮನೆಗೆ ದಿನಸಿ ಸಿಗುತ್ತದೆ. ಆ ಬಳಿಕ ವಿಡಿಯೋ ಕೂಡ ಪ್ರಸಾರ ಮಾಡಲಾಗುತ್ತದೆ.
ಸದ್ಯ ಪ್ರಸಾರ ಮಾಡಿರುವ ವಿಡಿಯೋಗಳು ಇಡೀ ಮನೆಯನ್ನು ಹೊತ್ತು ಉರಿಯುವಂತೆ ಮಾಡಿದೆ. ಗುಟ್ಟಾಗಿ ನಡೆದ ಮಾತುಗಳು ರಿವೀಲ್ ಆಗಿವೆ. ಇದು ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಗುಟ್ಟಾಗಿ ನಡೆದ ಮಾತುಕತೆಗಳು ರಿವೀಲ್ ಆಗುವುದು ತುಂಬಾನೇಕಡಿಮೆ. ಈ ರೀತಿ ಮಾತುಕತೆ ರಿವೀಲ್ ಆಗುತ್ತಾ ಹೋದರೆ ಪ್ರತಿ ಸ್ಪರ್ಧಿ ಬಗ್ಗೆ ಸಹ ಸ್ಪರ್ಧಿಗೆ ಇರುವ ಅಭಿಪ್ರಾಯ ಬದಲಾಗುತ್ತಾ ಹೋಗುತ್ತದೆ. ಈಗ ಬಿಗ್ ಬಾಸ್ ಮನೆಯಲ್ಲಿ ಇದೇ ಆಗಿದೆ.. ಐಶ್ವರ್ಯಾ ಅವರು ಅಸಮರ್ಥರು ಎಂದು ಸುರೇಶ್ ಮಾತನಾಡಿದ್ದರು. ಅದೇ ರೀತಿ ಭವ್ಯಾ ಬಗ್ಗೆ ಮೋಕ್ಷಿತಾ ಹಾಗೂ ಕೆಲವರು ಕಮೆಂಟ್ ಪಾಸ್ ಮಾಡಿದ್ದರು. ಇದು ಕೂಡ ಸಖತ್ ಚರ್ಚೆ ಆಗುತ್ತಿದೆ. ತ್ರಿವಿಕ್ರಂ ಹೇಳಿದ ಮಾತಿನಿಂದ ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ.