ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲೇ ಎಸ್ಡಿಎ ನೌಕರನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಎಸ್ಡಿಎ ನೌಕರ ರುದ್ರಣ್ಣ ಯಡವನ್ನವರ ಎಂದು ತಿಳಿದುಬಂದಿದೆ. ಕಳೆದ 12 ವರ್ಷಗಳಿಂದ ಬೆಳಗಾವಿ ತಹಶೀಲ್ದಾರ್ ಕಚೇರಿಯಲ್ಲಿ ಎಸ್ಡಿಎ ನೌಕರರಾಗಿ ರುದ್ರಣ್ಣ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆಯಷ್ಟೇ ಅವರಿಗೆ ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕು ತಹಶೀಲ್ದಾರ್ ಕಚೇರಿಗೆ ವರ್ಗಾವಣೆಯಾಗಿತ್ತು.
ಇದನ್ನೂ ಓದಿ: ಖಾಸಗಿ ಆಸ್ತಿಗಳಿಗೆ ಸುಪ್ರೀಂ ಮಹತ್ವದ ಆದೇಶ!
ಈ ಹಿನ್ನೆಲೆಯಲ್ಲಿ ಬೆಳಗಾವಿಯ ತಹಶೀಲ್ದಾರ್ ಕೊಠಡಿಯಲ್ಲೇ ರುದ್ರಣ್ಣ ಯಡವನ್ನವರ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ್ ಹಾಗೂ ಸೋಮು ಕಾರಣ, ನಮ್ಮ ಕಚೇರಿಯಲ್ಲಿ ಬಹಳ ಅನ್ಯಾಯ ನಡೆಯುತ್ತಿದೆ, ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ರುದ್ರಣ್ಣ ಮೆಸೇಜ್ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ರುದ್ರೇಶ್ ತಾಯಿ ಮಲ್ಲವ್ವ, ನಿನ್ನೆ ರಾತ್ರಿ ಇಬ್ಬರು ಊಟ ಮಾಡುತ್ತಿದ್ದೆವು, ಆ ವೇಳೆಯಲ್ಲಿ ಯಾರದ್ದೋ ಪೋನ್ ಬಂತು. ಪೋನ್ ಬರ್ತಿದ್ದಂತೆ ಅರ್ಧಕ್ಕೆ ಊಟ ಬಿಟ್ಟ. ನಾನ್ ಕೇಳಿದ್ರು ಏನೂ ಹೇಳಲಿಲ್ಲ. 2 ತಿಂಗಳ ಹಿಂದೆ ಇಲ್ಲಿಗೆ ವಾಪಸ್ ಟ್ರಾನ್ಸ್ಫರ್ ಮಾಡಿಸಿಕೊಳ್ತೇನಿ ಅಂತ 2 ಲಕ್ಷ ರೂಪಾಯಿ ಪಡೆದಿದ್ದ, ಯಾರಿಗೆ ಹಣ ಕೊಟ್ಟ ಎಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.