ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ 25 ರನ್ಗಳಿಂದ ಸೋತಿದೆ. ನ್ಯೂಜಿಲೆಂಡ್ ನೀಡಿದ 147 ರನ್ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 29.1 ಓವರ್ಗಳಲ್ಲಿ ಕೇವಲ 121 ರನ್ಗಳಿಗೆ ಆಲೌಟ್ ಆಗಿ ಸೋತಿರುವುದು ಭಾರೀ ಮುಖಭಂಗವಾಗಿದೆ.
ಇನ್ನು, ಟೀಮ್ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ಸ್ಟಾರ್ ವಿಕೆಟ್ ಬ್ಯಾಟರ್ ರಿಷಬ್ ಪಂತ್. ಬರೋಬ್ಬರಿ 64 ರನ್ ಸಿಡಿಸಿ ಟೀಮ್ ಇಂಡಿಯಾ ಪಡೆಯಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದ್ರು. ಆದರೆ, ಇವರು ಔಟ್ ಆದ ಕಾರಣ ಭಾರತ ಸೋಲಬೇಕಾಯ್ತು. ಭಾರತ ತಂಡದ ಬ್ಯಾಟರ್ಗಳು ನ್ಯೂಜಿಲೆಂಡ್ ಬೌಲರ್ಗಳ ವಿರುದ್ಧ ಹೀನಾಯ ಪ್ರದರ್ಶನ ನೀಡಿದ್ರು.
ಇದನ್ನು ಓದಿ:ವಿರಾಟ್ ಬರ್ತ್ ಡೇ ಗಿಫ್ಟ್ ಕೊಟ್ಟ ಅನುಷ್ಕಾ ಶರ್ಮಾ!
ಬರೋಬ್ಬರಿ 24 ವರ್ಷಗಳ ಬಳಿಕ ಟೆಸ್ಟ್ ಸರಣಿಯಲ್ಲಿ ತವರಿನಲ್ಲೇ ಭಾರತ ತಂಡವನ್ನು ನ್ಯೂಜಿಲೆಂಡ್ 3-0 ಅಂತರದಿಂದ ಸೋಲಿಸಿ ದಾಖಲೆ ನಿರ್ಮಿಸಿದೆ. 3 ಪಂದ್ಯಗಳಲ್ಲೂ ಹೀನಾಯವಾಗಿ ಸೋತ ಭಾರತ ಮೊದಲ ಬಾರಿಗೆ ವೈಟ್ವಾಶ್ ಆಗಿದೆ. 1969ರ ನಂತರ ಟೀಮ್ ಇಂಡಿಯಾ ತವರಿನಲ್ಲಿ ಒಂದೇ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳು ಸೋತಿರುವುದು ಇದೇ ಮೊದಲು.
ಬೆಂಗಳೂರಲ್ಲಿ ನಡೆದ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ 150 ರನ್ ಸಿಡಿಸಿ ಭಾರೀ ಸದ್ದು ಮಾಡಿದ್ದ ಸರ್ಫರಾಜ್ ಖಾನ್ ಟೀಮ್ ಇಂಡಿಯಾಗೆ ಕೈ ಕೊಟ್ಟರು. ಕೊನೆ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಕಳೆದ ಮೂರು ಇನ್ನಿಂಗ್ಸ್ನಲ್ಲಿ ಸರ್ಫರಾಜ್ ಖಾನ್ 11(24), 9(15), 0(4) ಗಳಿಸೋ ಮೂಲಕ ಕಳಪೆ ಪ್ರದರ್ಶನ ನೀಡಿದ್ರು.
ಇದನ್ನು ಓದಿ:ಭರತ್ ಬೊಮ್ಮಾಯಿ ಗೆಲುವು ಸಾಧಿಸುವುದು ಶತಸಿದ್ಧ: ಗೋವಿಂದ ಕಾರಜೋಳ
ಕೇವಲ ಒಂದು ಪಂದ್ಯದಲ್ಲಿ ಸರಿಯಾಗಿ ಆಡದಿದ್ದಕ್ಕೆ ಕೆ.ಎಲ್ ರಾಹುಲ್ ಅವರನ್ನು 2 ಪಂದ್ಯಗಳಿಂದ ಬೆಂಚ್ ಕಾಯಿಸಲಾಗಿದೆ. ಇವರ ಬದಲಿಗೆ ಸರ್ಫರಾಜ್ ಖಾನ್ ಅವರಿಗೆ ಅವಕಾಶ ನೀಡಲಾಗಿದೆ. ಈಗ ಸರ್ಫರಾಜ್ ಖಾನ್ ಸಂಪೂರ್ಣ ಬ್ಯಾಟಿಂಗ್ನಲ್ಲಿ ವೈಫಲ್ಯರಾಗಿದ್ದು, ಕೆ.ಎಲ್ ರಾಹುಲ್ ಅವರನ್ನು ಕೈ ಬಿಟ್ಟು ಭಾರತ ಕ್ರಿಕೆಟ್ ತಂಡ ತಪ್ಪು ಮಾಡಿದ್ಯಾ? ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.
ನವೆಂಬರ್ 22ನೇ ತಾರೀಕಿನಿಂದ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಕಳೆದ ಎರಡು ಆಸ್ಟ್ರೇಲಿಯಾ ಪ್ರವಾಸಗಳಲ್ಲಿ ಭಾರತ ಟ್ರೋಪಿ ಗೆದ್ದಿತ್ತು. 2016 ರಿಂದಲೂ ಟೀಮ್ ಇಂಡಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆಲ್ಲುತ್ತಲೇ ಬಂದಿದೆ. ಟೀಮ್ ಇಂಡಿಯಾ ಈಗಿರೋ ಪರಿಸ್ಥಿತಿ ನೋಡಿದ್ರೆ ಗೆಲ್ಲೋದು ಕಷ್ಟವಾಗಿದೆ. ಆಸೀಸ್ ಸರಣಿಗೆ ಆಟಗಾರರನ್ನು ಸಜ್ಜುಗೊಳಿಸಲು ಸಿದ್ಧತೆ ಆರಂಭಿಸಿರೋ ಬಿಸಿಸಿಐ ಸರ್ಫರಾಜ್ ಖಾನ್ ಅವರನ್ನು ಕೈ ಬಿಡಲು ಮುಂದಾಗಿದೆ.
ಇದನ್ನು ಓದಿ:ಶಿಗ್ಗಾಂವಿಯ ತಾಯಮ್ಮ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಆಸೀಸ್ ಪ್ರವಾಸದಲ್ಲಿ ಸರ್ಫರಾಜ್ ಖಾನ್ ಬದಲಿಗೆ ಅನುಭವಿ ರಾಹುಲ್ ಅತ್ಯುತ್ತಮ ಆಯ್ಕೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಬಿಸಿಸಿಐ ಕನ್ನಡಿಗ ಕೆ.ಎಲ್ ರಾಹುಲ್ಗೆ ಮಹತ್ವದ ಸೂಚನೆ ಕೊಟ್ಟಿದೆ. ನಾಡಿದ್ದು ಎಂದರೆ ನವೆಂಬರ್ 7ನೇ ತಾರೀಕಿನಿಂದ ಆಸ್ಟ್ರೇಲಿಯಾ-ಎ ಹಾಗೂ ಭಾರತ-ಎ ನಡುವೆ 2ನೇ ಅನಧಿಕೃತ ಟೆಸ್ಟ್ ಆಡಲಿದೆ. ಈ ನಾಲ್ಕು ದಿನಗಳ ಪಂದ್ಯದಲ್ಲಿ ಕೆಎಲ್ ರಾಹುಲ್ ಆಡಬೇಕು ಎಂದು ಬಿಸಿಸಿಐ ಸೂಚನೆ ನೀಡಿದೆ. ಅದಕ್ಕಾಗಿ ಭಾರತ ತಂಡಕ್ಕೂ ಮುನ್ನ ರಾಹುಲ್ ಅವರನ್ನು ಕಳಿಹಿಸಲಾಗುತ್ತಿದೆ.