ಕನ್ನಡದ ಬಿಗ್ ಶೋನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ಬಿಗ್ಬಾಸ್ ಕೊಟ್ಟ ನಿಲ್ಲೆ ನಿಲ್ಲೆ ಕಾವೇರಿ ಟಾಸ್ಕ್ನಲ್ಲಿ ಸ್ಪರ್ಧಿಗಳ ಮಧ್ಯೆ ಗಲಾಟೆ ನಡೆದಿದೆ. ರಕ್ಷಕರು ತಮ್ಮ ತಂಡದ ಡ್ರಮ್ನಿಂದ ನೀರು ಹೊರಗಡೆ ಹರಿಯದಂತೆ ಕಾಪಾಡಿಕೊಳ್ಳಬೇಕಾಗಿತ್ತು. ಹೀಗಾಗಿ ಮಹಿಳಾ ಸ್ಪರ್ಧಿಗಳು ಬೇರೆ ತಂಡಕ್ಕೆ ಹೋಗಿ ತೊಂದರೆ ಕೊಟ್ಟು ನೀರು ಡ್ರಮ್ನಿಂದ ಹೋಗುವಂತೆ ಮಾಡುತ್ತಿದ್ದರು.
ಇದನ್ನು ಓದಿ: ‘ಇವರು ಆನೆಯಂತೆ.. ಬೊಗಳೋ ನಾಯಿ ಯಾರು..?!’ ಜಗ್ಗೇಶ್ ವಿವಾದಾತ್ಮಕ ಟ್ವೀಟ್..!
ಆಗ ಗೋಲ್ಡ್ ಸುರೇಶ್ ತಮ್ಮ ಡ್ರಮ್ ಬಳಿ ಬಂದ ಸ್ಪರ್ಧಿಗಳಿಗೆ ಗುದ್ದಿ ತಳ್ಳಿದ್ದಾರೆ. ಅದೇ ಜಾಗದಲ್ಲಿದ್ದ ಅನುಷಾ ಅವರಿಗೆ ಪೆಟ್ಟಾಗಿದೆ. ಆಗ ಕೋಪಗೊಂಡ ಅನುಷಾ, ಒಂದು ಕಾಮನ್ಸೆನ್ಸ್ ಇಲ್ಲೂ ಹೇಗೆ ವರ್ತನೆ ಮಾಡಬೇಕು ಅಂತ, ಹೀಗೆಂನಾ ನಿಮ್ಮ ಮನೆಯಲ್ಲಿ ಬೇಳ್ಸಿದ್ದು ಅಂತ ಹೇಳಿದ್ದಾರೆ. ಇದಾದ ಬಳಿಕ ಕೈಯಲ್ಲಿ ಎಳೆಯೋದಕ್ಕೆ ಬಂದರೆ ಕಾಲಲ್ಲಿ ಒದೆಯುತ್ತಾರೆ. ನನ್ನನ್ನೂ ಅವರ ಅಪ್ಪ ಸಾಕ್ತಾನಾ ಅಂತ ಕೂಗಾಡಿದ್ದಾರೆ. ಮತ್ತೆ ಇದೇ ವಿಚಾರಕ್ಕೆ ಟಾಸ್ಕ್ ಮುಗಿದ ಬಳಿಕ ಗಲಾಟೆಯಾಗಿದೆ.