ಮುಂದಿನ ಕೆಲವೇ ದಿನಗಳಲ್ಲಿ ಹೊಚ್ಚ ಹೊಸ ಕಾರೊಂದು ಮಾರುಕಟ್ಟೆಗೆ ಲಗ್ಗೆಯಿಡಲಿದೆ. ದೇಶಿಯ ಕಾರು ತಯಾರಕ ಕಂಪನಿ ಮಾರುತಿ ಸುಜುಕಿ ತನ್ನ ಅಪ್ಡೇಟ್ ಮಾರುತಿ ಸುಜುಕಿ ಡಿಜೈರ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಬಿಡುಗಡೆಯ ಮೊದಲು, ಕಂಪನಿಯು ಮಾರುಕಟ್ಟೆಯಲ್ಲಿ ಈ ಕಾಂಪ್ಯಾಕ್ಟ್ ಸೆಡಾನ್ಗಾಗಿ ಪ್ರಿ-ಬುಕಿಂಗ್ ಅನ್ನು ಪ್ರಾರಂಭಿಸಿದೆ. ಈ ಹೊಸ ಕಾರು ಖರೀದಿಸಲು ಬಯಸುವವರು ಕೇವಲ ರೂ. 11 ಸಾವಿರ ಆರಂಭಿಕ ಬುಕಿಂಗ್ ಮೊತ್ತವನ್ನು ಪಾವತಿಸಿ ಬುಕ್ ಮಾಡಬಹುದು.
ನಾಲ್ಕನೇ ತಲೆಮಾರಿನ ಮಾರುತಿ ಡಿಜೈರ್ ಅನ್ನು ನವೆಂಬರ್ 11, 2024 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು. ಈ ಕಾರನ್ನು ಅದರ ಹಳೆಯ ಮಾದರಿಯ ಮುಂಭಾಗ ಮತ್ತು ಹಿಂಭಾಗದ ಭಾಗಗಳನ್ನು ಅಪ್ಡೇಟ್ ಮಾಡುವ ಮೂಲಕ ವಿನ್ಯಾಸಗೊಳಿಸಲಾಗಿದೆ. ಕಾಂಪ್ಯಾಕ್ಟ್ ಸೆಡಾನ್ ಹೊಸ ಇಂಟೀರಿಯರ್ ಜೊತೆಗೆ ಸೆಗ್ಮೆಂಟ್-ಫಸ್ಟ್ ಸನ್ರೂಫ್ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳೊಂದಿಗೆ ರಸ್ತೆಗೆ ಕಾಲಿಡಲಿದೆ.
ಇದನ್ನು ಓದಿ:ಯುದ್ಧ ಮಾಡದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್..!
2024 ಮಾರುತಿ ಡಿಜೈರ್ ಪವರ್ಟ್ರೇನ್: ಹೊಸ ಮಾರುತಿ ಡಿಜೈರ್ ಸಹ ಮಾರುತಿ ಸ್ವಿಫ್ಟ್ 1.2-ಲೀಟರ್, 3-ಸಿಲಿಂಡರ್ Z-ಸರಣಿ ಪೆಟ್ರೋಲ್ ಎಂಜಿನ್ನೊಂದಿಗೆ ರನ್ ಆಗುತ್ತದೆ. ಈ ಎಂಜಿನ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳನ್ನು ಒಳಗೊಂಡಿದೆ. ಈ ಎಂಜಿನ್ 80 bhp ಪವರ್ ಮತ್ತು 112 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಈ ಕಾರಿನ ಸಿಎನ್ಜಿ ರೂಪಾಂತರವನ್ನು ನಂತರ ಪರಿಚಯಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಮಾರುತಿ ಸುಜುಕಿ ತನ್ನ ಡಿಜೈರ್ ಬ್ರಾಂಡ್ ಅನ್ನು 2008 ರಲ್ಲಿ ಮೊದಲು ಪ್ರಾರಂಭಿಸಿತು. ಅದರ ನಂತರ ಈ ಕಾರಿನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಬಿಡುಗಡೆಯಾದಾಗಿನಿಂದ ಹೆಚ್ಚು ಮಾರಾಟವಾಗುತ್ತಿರುವ ಕಾಂಪ್ಯಾಕ್ಟ್ ಸೆಡಾನ್ ಇದೀಗ ಹೊಸ ನೋಟ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ. ಇದರೊಂದಿಗೆ, ಮಾರುಕಟ್ಟೆಯಲ್ಲಿ ಅದರ ಮಾರಾಟವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಇದನ್ನು ಓದಿ:ಚಂದನಾ ಅನಂತಕೃಷ್ಣಗೆ ಕೂಡಿ ಬಂತು ಕಂಕಣ ಭಾಗ್ಯ!
ಈ ಹೊಸ ತಲೆಮಾರಿನ ಅಪ್ಡೇಟ್ ಕಾರಿನೊಂದಿಗೆ ತನ್ನ ಮಾರಾಟವನ್ನು ಮುಂದುವರಿಸಲು ಕಂಪನಿಯು ನಿರೀಕ್ಷಿಸುತ್ತಿದೆ. ಮಾರುತಿ ಸುಜುಕಿ 2024 ಮಾರುತಿ ಡಿಜೈರ್ಗಾಗಿ ಮುಂಗಡ ಬುಕಿಂಗ್ಗಳು ಈಗಾಗಲೇ ಅರೆನಾ ಚೈನ್ ಔಟ್ಲೆಟ್ಗಳ ಮೂಲಕ ನಡೆಯುತ್ತಿವೆ ಎಂದು ಹೇಳಿದೆ. ಖರೀದಿದಾರರು ಈ ಯಾವುದೇ ಶೋರೂಮ್ಗಳಲ್ಲಿ ಅಥವಾ ಕಂಪನಿಯ ಅಧಿಕೃತ ವೆಬ್ಸೈಟ್ ಮೂಲಕ ಬುಕ್ ಮಾಡಬಹುದು ಎಂದು ಹೇಳಿದ್ದಾರೆ.