ದೊಡ್ಮನೆಯ ಶಕ್ತಿಯಾಗಿದ್ದ ಪಾರ್ವತಮ್ಮ ರಾಜ್ಕುಮಾರ್ ಹಾದಿಯಲ್ಲಿ ಇದೀಗ ಸೊಸೆ ಗೀತಾ ಶಿವರಾಜ್ಕುಮಾರ್ ಸಾಗುತ್ತಿದ್ದಾರೆ. ಶಿವರಾಜ್ಕುಮಾರ್ ಯಶಸ್ಸಿನ ಹಿಂದೆ ಗೀತಾ ಶಿವರಾಜ್ ಕುಮಾರ್ ಅವರ ಶ್ರಮವೂ ಬಹಳಷ್ಟಿದೆ. ಗೀತಾ ಶಿವರಾಜ್ಕುಮಾರ್ ಅವರು ಸಿನಿಮಾ ನಿರ್ಮಾಪಕಿಯೂ ಹೌದು. ಪಾರ್ವತಮ್ಮ ರಾಜ್ಕುಮಾರ್ ನಿಧನದ ಬಳಿಕ ಗೀತಾ ಶಿವರಾಜ್ಕುಮಾರ್ ಅವರು, ಶಕ್ತಿಧಾಮ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡು ಅದರ ನಿರ್ವಹಣೆ ಮಾಡುತ್ತಿದ್ದಾರೆ. ಎರಡು ವರ್ಷದ ಹಿಂದೆ ಅವರು ಶಿಕ್ಷಕಿಯಾಗಿಯೂ ಬದಲಾಗಿದ್ದಾರೆ. ತಮ್ಮ ಶಕ್ತಿಧಾಮದ ಮಕ್ಕಳಿಗಾಗಿ ಅವರು ಈ ಮಹತ್ವದ ಕಾರ್ಯಕ್ಕೆ ಕೈಹಾಕಿದ್ದಾರೆ.
ಪಾರ್ವತಮ್ಮ ರಾಜ್ಕುಮಾರ್ ಅವರಿಗೆ ವ್ಯವಹಾರಿಕ ಜ್ಞಾನದ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನಸ್ಸಿದ್ದ ಕಾರಣ ಅವರು, ಬೀದಿಪಾಲಾದ ಮಕ್ಕಳು ಹಾಗೂ ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಕ್ಕಳ ಸುರಕ್ಷತೆಯ ಉದ್ದೇಶದಿಂದ ಶಕ್ತಿಧಾಮ ಸಂಸ್ಥೆಯನ್ನು ಶುರು ಮಾಡಿದರು.
ಇದನ್ನು ಓದಿ: ಮೋದಿಯ ಫ್ರೆಂಡ್ ಟ್ರಂಪ್ ಗೆಲುವು ಭಾರತಕ್ಕೆ ವರವಾಗುತ್ತಾ..?
ಗೀತಾ ಶಿವರಾಜ್ಕುಮಾರ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿರುವಂತೆ. ಗೀತಾ ಶಿವರಾಜ್ಕುಮಾರ್ ಅವರಿಗೆ ಮೊದಲಿನಿಂದಲೂ ಬೇಕಿಂಗ್ ಬಗ್ಗೆ ಆಸಕ್ತಿ ಇತ್ತಂತೆ. ಶಿವಣ್ಣನ ಮದುವೆಯಾಗಿ ಬೆಂಗಳೂರಿಗೆ ಬಂದಾಗ ಅವರಿದ್ದ ಮನೆಯ ಬಳಿ ಒಬ್ಬ ಮುಂಬೈ ಮಹಿಳೆ ಇದ್ದರಂತೆ, ಅವರು ಕಪ್ಕೇಕ್ ಮಾಡುತ್ತಿದ್ದರಂತೆ. ಅಲ್ಲದೆ ಆಗ ಕೋಶೀಸ್ ಅವರು ಸೈಕಲ್ನಲ್ಲಿ ಕಪ್ಕೇಕ್ ಮಾರಾಟ ಮಾಡುತ್ತಿದ್ದರಂತೆ. ಆಗೆಲ್ಲ ಇದನ್ನು ಹೇಗೆ ಮಾಡುತ್ತಾರೆ, ಇದನ್ನು ಕಲಿಯಬೇಕು ಎಂದು ಅನಿಸಿತಂತೆ. ಅದೇ ಸಮಯದಲ್ಲಿ ಗೀತಾ ಅವರ ಸಹೋದರಿ ಅವರಿಗೆ ಒಂದನ್ನು ತಂದುಕೊಟ್ಟರಂತೆ ಆಗಿನಿಂದ ಅವರು ಬೇಕಿಂಗ್ ಮಾಡುತ್ತಿದ್ದಾರೆ.
ಪಾರ್ವತಮ್ಮ ರಾಜ್ಕುಮಾರ್ ಅವರು ತೀರಿಕೊಂಡ ನಂತರ ಗೀತಾ ಶಿವರಾಜ್ಕುಮಾರ್ ಅವರು ಶಕ್ತಿಧಾಮದ ಜವಾಬ್ದಾರಿ ವಹಿಸಿಕೊಂಡರು. ಬಳಿಕ ಒಮ್ಮೆ ಅಲ್ಲಿ ವರ್ಷಗಳ ನಂತರ ಕೋಣೆ ಬಾಗಿಲು ತೆಗೆಸಿದಾಗ ಅಲ್ಲಿ ಕೆಲವು ಮಷೀನ್ಗಳು ಕಂಡಿವೆ. ಆ ವಸ್ತುಗಳು ಮೊದಲಿಗೆ ಏ ನು ಎಂಬುದು ಗೀತಾ ಅವರಿಗೆ ಗೊತ್ತಾಗಿರಲಿಲ್ಲ. ಬಳಿಕ ತಿಳಿದು ಬಂದಿದ್ದು ಅವು ಬೇಕಿಂಗ್ ಯಂತ್ರಗಳೆಂದು. ಅವೆಲ್ಲ ಬಹಳ ದೊಡ್ಡ ಯಂತ್ರಗಳಾಗಿದ್ದು, ಆದರೆ ಅವು ಕಮರ್ಶಿಯಲ್ ಬೇಕಿಂಗ್ ಯಂತ್ರಗಳು.
ಇದನ್ನು ಓದಿ: ಚಂದನಾ ಅನಂತಕೃಷ್ಣಗೆ ಕೂಡಿ ಬಂತು ಕಂಕಣ ಭಾಗ್ಯ!
ಅವು ಹಾಗೆಯೇ ಇರಬೇಕಾದರೆ, ಗೀತಾ ಅವರು ಶಕ್ತಿಧಾಮದ ಮಕ್ಕಳಲ್ಲಿ ಕಾಲ ಕಾಲಕ್ಕೆ ಕೆಲವು ಬದಲಾವಣೆಗಳನ್ನು ಗುರುತಿಸಿದರಂತೆ. ಮಕ್ಕಳು ರಜೆಗೆ ಊರಿಗೆ ಹೋಗಿ ಬಂದಾಗ ಅವರು ತೂಕ ಕಳೆದುಕೊಂಡಿರುತ್ತಾರೆ, ಸಣ್ಣ ಆಗಿರುತ್ತಾರೆ, ಮುಖ ಕಪ್ಪಾಗಿರುತ್ತದೆ, ಯಾಕೆ ಹೀಗೆ ಆಗುತ್ತಿದೆ ಎಂದು ಮಕ್ಕಳ ಬಳಿ ವಿಚಾರಿಸಿದಾಗ, ಊರಿಗೆ ಹೋದಾಗ ಅವರನ್ನು ಪೋಷಕರು ದಿನಗೂಲಿಗೆ ಕಳಿಸುತ್ತಿದ್ದರಂತೆ. ಇದು ಗೀತಾ ಅವರಿಗೆ ಬೇಸರ ತಂದಿತ್ತು. ಹೀಗಾಗಿ ಶಕ್ತಿಧಾಮದ ಮಕ್ಕಳಿಗೆ ಬೇಕಿಂಗ್ ಅನ್ನು ಕಲಿಸುವ ನಿರ್ಧಾರ ಮಾಡಿದರಂತೆ.
ಶಕ್ತಿಧಾಮದ ಮಕ್ಕಳಿಗೆ ಕೌಶಲ್ಯ ಕಲಿಸಿದರೆ ಅವರು ರಜೆಯ ಅವಧಿಯಲ್ಲಿ ದಿನಗೂಲಿಗೆ ಹೋಗುವುದು ತಪ್ಪುತ್ತದೆ ಎಂಬ ಕಾರಣಕ್ಕೆ ಮಕ್ಕಳಿಗೆ ಬೇಕಿಂಗ್ ಕಲಿಸಲು ಪ್ರಾರಂಭ ಮಾಡಿದ್ದಾರೆ. ಏಳರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬೇಕಿಂಗ್ ಅನ್ನು ಒಂದು ವಿಷಯವಾಗಿ ಕಲಿಸಲಾಗುತ್ತಿದೆ. ಗೀತಾ ಅವರು ಇದಕ್ಕಾಗಿ ಪ್ರತ್ಯೇಕ ಸ್ಥಳವನ್ನು ತೆಗೆದುಕೊಂಡು ಅಲ್ಲಿಂದಲೇ ಮಕ್ಕಳಿಗೆ ಕಲಿಸುತ್ತಾರೆ.
ಇದನ್ನು ಓದಿ: ಹೈಟೆಕ್ ಆಗಿ ಬರುತ್ತಿದೆ ಹೊಸ ಮಾರುತಿ ಡಿಜೈರ್!
ಹಲವು ಮಕ್ಕಳು ಈಗ ಚೆನ್ನಾಗಿ ಬೇಕಿಂಗ್ ಮಾಡುತ್ತಿದ್ದಾರಂತೆ. ಕೆಲವು ಹಿರಿಯ ವಿದ್ಯಾರ್ಥಿಗಳಿಗೆ ಈಗಾಗಲೇ 20-25 ಸಂಬಳದ ಆಫರ್ಗಳು ಸಹ ಬೇಕಿಂಗ್ ಫೀಲ್ಡ್ನಲ್ಲಿ ಬರುತ್ತಿವೆಯಂತೆ. ಮಕ್ಕಳು ಬೇಕ್ ಮಾಡಿದ ಪದಾರ್ಥಗಳನ್ನು ಮಾರಾಟ ಮಾಡಲು ಆನ್ಲೈನ್ ಪೋರ್ಟಲ್ ತೆರೆಯುವ ಆಲೋಚನೆಯೂ ಗೀತಾ ಅವರಿಗೆ ಇದೆ. ಅದರಿಂದ ಬಂದ ಹಣವನ್ನು ಶಕ್ತಿಧಾಮದ ಮಕ್ಕಳಿಗಾಗಿ ಬಳಸಲಾಗುತ್ತದೆಯಂತೆ.