ಬುಧವಾರ ಅಮೆರಿಕಾದ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಜೆಡಿ ವಾನ್ಸ್ ಅವರ ಪತ್ನಿ ಉಷಾ ವಾನ್ಸ್ ಅವರನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಭಿನಂದಿಸಿದ್ದಾರೆ. ಇದು ‘ತೆಲುಗು ಜನರಿಗೆ ಹೆಮ್ಮೆಯ ಕ್ಷಣ’ ಎಂದು ಶ್ಲಾಘಿಸಿದ್ದಾರೆ.
ಉಷಾ ವಾನ್ಸ್ ಮೂಲತಃ ಆಂಧ್ರ ಪ್ರದೇಶದ ಮೂಲದವರಾಗಿದ್ದು, ಅವರ ಕುಟುಂಬದ ಪೂರ್ವಜರು ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರಸಿದ್ಧ ಗೋದಾವರಿ ಪಟ್ಟಣ ತಣುಕು ಬಳಿ ಇರುವ ವಡ್ಲೂರು ಗ್ರಾಮವಾಗಿದೆ. ಇದು ಜಿಲ್ಲಾ ಕೇಂದ್ರ ಭೀಮಾವರಂನಿಂದ ಸುಮಾರು 35 ಕಿಮೀ ದೂರದಲ್ಲಿದೆ. ಭಾರತೀಯ ವಲಸಿಗರ ಮಗಳಾಗಿರುವ ಉಷಾ ವ್ಯಾನ್ಸ್ ಅವರ ಮೂಲ ಹೆಸರು ಉಷಾ ಚಿಲ್ಕುರಿ. ಇವರು ತಮ್ಮ ಬಾಲ್ಯವನ್ನು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕಳೆದಿದ್ದಾರೆ. ಯಾಲೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಕೇಂಬ್ರಿಡ್ಜ್ ವಿವಿಯಲ್ಲಿ ಮಾಸ್ಟರ್ ಆಫ್ ಫಿಲಾಸಫಿಯನ್ನು ಪಡೆದಿದ್ದಾರೆ.
ಇದನ್ನು ಓದಿ: ಆಸ್ಟ್ರೇಲಿಯಾ ವಿರುದ್ಧವೂ ಕೆ.ಎಲ್.ರಾಹುಲ್ ಫ್ಲಾಪ್ ಶೋ!
ಪತಿ ಜೆ.ಡಿ.ವ್ಯಾನ್ಸ್ ಅವರನ್ನು ಉಷಾ ಮೊದಲು ಭೇಟಿಯಾಗಿದ್ದದ್ದು ಯಾಲೆಯ ಕಾನೂನು ಘಟಕದಲ್ಲಿ. ಹತ್ತು ವರ್ಷದ ಹಿಂದೆ ಮದುವೆಯಾದ ಇವರಿಗೆ ಇವನ್, ವಿವೇಕ್ ಹಾಗೂ ಮೀರಾಬೆಲ್ ಎನ್ನುವ ಮಕ್ಕಳಿದ್ದಾರೆ. ಗಮನಿಸಬೇಕಾದ ವಿಚಾರವೇನಂದರೆ, ಉಷಾ ಅವರ ದೊಡ್ಡಪ್ಪ ಮೂಲತಃ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಮತ್ತು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು ಎಂದು ಕೆಲವೊಂದು ಪತ್ರಿಕೆಗಳು ವರದಿ ಮಾಡಿವೆ.
ಇನ್ನು ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಚಂದ್ರಬಾಬು ನಾಯ್ಡು, “ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾದ ಜೆಡಿ ವ್ಯಾನ್ಸ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ನಾನು ಬಯಸುತ್ತೇನೆ. ಅವರ ಗೆಲುವು ಐತಿಹಾಸಿಕ ಕ್ಷಣವಾಗಿದೆ, ಅಮೆರಿಕದ ಎರಡನೇ ಕಮಾಂಡ್ ಆಗಿ ಸೇವೆ ಸಲ್ಲಿಸಿದ ಮೊದಲ ತೆಲುಗು ಮಹಿಳೆಯಾಗಿದ್ದಾರೆ” ಎಂದು ನಾಯ್ಡು ಹೆಮ್ಮೆ ಪಟ್ಟಿದ್ದಾರೆ. ವಿಶ್ವಾದ್ಯಂತ ತೆಲುಗು ಸಮುದಾಯಕ್ಕೆ ಇದು ಹೆಮ್ಮೆಯ ವಿಷಯ ಎಂದು ಬಣ್ಣಿಸಿದ ಚಂದ್ರಬಾಬು, ಆಂಧ್ರಪ್ರದೇಶಕ್ಕೆ ಭೇಟಿ ನೀಡಲು ಅವರನ್ನು (ಜೆಡಿ ವಾನ್ಸ್ ಮತ್ತು ಉಷಾ) ಆಹ್ವಾನಿಸುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದೇನೆ.
ಇದನ್ನು ಓದಿ: ಮೋದಿಯ ಫ್ರೆಂಡ್ ಟ್ರಂಪ್ ಗೆಲುವು ಭಾರತಕ್ಕೆ ವರವಾಗುತ್ತಾ..?
ಇದಕ್ಕೂ ಮೊದಲು, 2024ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಕಂಡ ಡೊನಾಲ್ಡ್ ಟ್ರಂಪ್ ಅವರನ್ನು ಮುಖ್ಯಮಂತ್ರಿ ನಾಯ್ಡು ಅವರು ಅಭಿನಂದಿಸಿದರು ಮತ್ತು ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಟ್ರಂಪ್ ಅವರು ಅಧ್ಯಕ್ಷರಾಗಿ ಆಯ್ಕೆಯದ ಬಳಿಕ ಭಾರತ ಮತ್ತು ಯುಎಸ್ ನಡುವಿನ ಬಾಂಧವ್ಯ ಇನ್ನಷ್ಟು ಬಲಪಡುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
“ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗಾಗಿ ನಾನು ಅಭಿನಂದಿಸುತ್ತೇನೆ ಮತ್ತು ಅವರು ತಮ್ಮ ದೇಶವನ್ನು ಮುನ್ನಡೆಸಲು ಇದೀಗ ತಯಾರಿ ನಡೆಸುತ್ತಿದ್ದಾರೆ… ಅವರಿಗೆ ಯಶಸ್ಸು ಸಿಗಲಿ ಎಂದು ಬಯಸುತ್ತೇನೆ. ಅವರ ಮೊದಲ ಅಧಿಕಾರಾವಧಿಯು ಭಾರತ-ಯುಎಸ್ ಪಾಲುದಾರಿಕೆಯನ್ನು ಗಣನೀಯವಾಗಿ ಬಲಪಡಿಸಿದೆ” ಎಂದು ‘X’ ಪೋಸ್ಟ್ನಲ್ಲಿ ನಾಯ್ಡು ಹೇಳಿದ್ದಾರೆ.