ದಿನಗಳು ಕಳೆಯುತ್ತಾ ಬಾಲಿವುಡ್ನಲ್ಲಿ ಜೀವ ಬೆದರಿಕೆ ಕರೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ .ನಟ ಸಲ್ಮಾನ್ ಗೆ ಜೀವ ಬೆದರಿಕೆ ಕರೆ ಬಂದಿದ್ದು ಎಲ್ಲರಿಗೂ ತಿಳಿದೇ ಇದೆ. ಸಲ್ಲು ಸೆಕ್ಯೂರಿಟಿಯೊಂದಿಗೆ ಒಡಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಶಾರುಖ್ ಖಾನ್ಗೆ ಕೊಲೆ ಬೆದರಿಕೆಯೊಡ್ಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶಾರುಖ್ ಖಾನ್ ಗೆ ಮೊಬೈಲ್ ನಿಂದ ಬೆದರಿಕೆ ಕರೆ ಬಂದಿದೆ. 50 ಲಕ್ಷ ರೂ. ಕೊಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಬೆದರಿಕೆ ಬಂದ ನಂತರ ಶಾರುಖ್ ಖಾನ್ ತಂಡ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಶಾರುಖ್ಗೆ ಬೆದರಿಕೆ ಬಂದ ಫೋನ್ ಫೈಜಾನ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ ಮತ್ತು ಆತನ ಕೊನೆಯ ಸ್ಥಳ ರಾಯ್ಪುರದಲ್ಲಿ ಪತ್ತೆಯಾಗಿದೆ.
ಇದನ್ನು ಓದಿ: ಬಘೀರನ ಬಿಗ್ ಯಶಸ್ಸು.. ಹೆಚ್ಚಾಯ್ತು ಡಾಕ್ಟರ್ ಸೂರಿ ನಿರ್ದೇಶನದ ಕನಸು. ಬರಲಿದೆ ಬಘೀರ-2
ನವೆಂಬರ್ 5 ರ ರಾತ್ರಿ ಬಾಂದ್ರಾ ಪೊಲೀಸ್ ಠಾಣೆಗೆ ಕರೆ ಬಂದಿತ್ತು. ಎದುರಿಗಿದ್ದವರ ಹೆಸರು ಕೇಳಿದಾಗ ಕಾನ್ಸ್ಟೇಬಲ್, ನಾನು ಯಾರು ಮತ್ತು ನಾನು ಎಲ್ಲಿಂದ ಮಾತನಾಡುತ್ತಿದ್ದೇನೆ ಎಂದು ಹೇಳುವುದರಿಂದ ಏನೂ ವ್ಯತ್ಯಾಸವಾಗುವುದಿಲ್ಲ, ನೀವು ಹೆಸರನ್ನು ಬರೆಯಲು ಬಯಸಿದರೆ ಹಿಂದೂಸ್ತಾನಿ ಎಂದು ಬರೆಯಿರಿ ಎಂದಿದ್ದ. ಇದಾದ ನಂತರ ಕಾನ್ಸ್ಟೆಬಲ್ ತನ್ನ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದರು. ಇದೀಗ ಶಾರುಖ್ ತಂಡ ನೀಡಿದ ದೂರಿನ ಬಳಿಕ ತನಿಖೆ ಚುರುಕುಗೊಂಡಿದೆ. ಶಾರುಖ್ ಖಾನ್ಗೆ ಬಂದಿರುವ ಬೆದರಿಕೆಯು ಇತ್ತೀಚಿನ ತಿಂಗಳುಗಳಲ್ಲಿ ನಟ ಸಲ್ಮಾನ್ ಖಾನ್ಗೆ ನಿರ್ದೇಶಿಸಿದ ಇದೇ ರೀತಿಯ ಬೆದರಿಕೆಗಳ ಸರಣಿಯನ್ನು ಅನುಸರಿಸುತ್ತದೆ. ಕರೆ ಮಾಡಿದವರನ್ನು ಪತ್ತೆಹಚ್ಚಲು ಮತ್ತು ನಟರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.