ಮನೆ ಮಾಲೀಕನ ಪ್ರಜ್ಞೆ ತಪ್ಪಿಸಿ ಮನೆಯಲ್ಲಿದ್ದ ವಸ್ತುಗಳನ್ನು ದೋಚುತ್ತಿದ್ದ ನೇಪಾಳದ ದಂಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಗಳು ಭೀಮ್ ಬಹದ್ದೂರ್ ಥಾಪಾ (31), ಜಯರಾಜ್ ಬಹದ್ದೂರ್ ಪುರಿ (25), ಧರ್ಮರಾಜ್ ಬಹದ್ದೂರ್ ಬಹೋರಾ (40) ಮತ್ತು ಗಣೇಶ್ ಬಹದ್ದೂರ್ ಥಾಪಾ (34). ನಾಲ್ವರೂ ನೇಪಾಳದ ಬಜಾಂಗ್ ಜಿಲ್ಲೆಯವರು .
ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಅವರ ಜಯನಗರ 3ನೇ ಬ್ಲಾಕ್ನಲ್ಲಿರುವ ಮನೆಯಲ್ಲಿ ಅಕ್ಟೋಬರ್ 21ರಂದು ಕಳ್ಳತನ ನಡೆದಿತ್ತು. ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ವೇಳೆ, ಕಳ್ಳರು ಭದ್ರತಾ ಸಿಬ್ಬಂದಿ ಅಥವಾ ಗೂರ್ಖಾಗಳಾಗಿ ಕೆಲಸ ಮಾಡುವ ಮೂಲಕ ಮತ್ತು ಪ್ರತ್ಯೇಕವಾದ ಮನೆಗಳನ್ನು ಗುರುತಿಸಿಕೊಂಡು ಕರ್ನಾಟಕದಾದ್ಯಂತ ಕಳ್ಳತನ ನಡೆಸಿರುವುದಾಗಿ ಒಪ್ಪಿಕೊಂಡರು. ನಂತರ ಮನೆಗಳನ್ನು ಒಡೆದು ಎಲ್ಲಾ ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದಾರೆ.
ಇದನ್ನು ಓದಿ: ಎತ್ತಿನಹೊಳೆ ಕಾಮಗಾರಿ ಗುಂಡಿಯಲ್ಲಿ ಇಬ್ಬರು ಬಾಲಕರ ಶವ ಪತ್ತೆ!
ನಾಗೇಶ್ ಅವರ ಮನೆಯಲ್ಲಿ 2 ವರ್ಷಗಳಿಂದ ನೇಪಾಳ ಮೂಲದ ಗಣೇಶ್ ಹಾಗೂ ಗೀತಾ ದಂಪತಿ ಕೆಲಸ ಮಾಡುತ್ತಿದ್ದರು. ಅ.20ರಂದು ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ನಾಗೇಶ್ ಅವರನ್ನು ಹೊರತುಪಡಿಸಿ ಮನೆಯವರೆಲ್ಲರೂ ತೆರಳಿದ್ದರು. ನಾಗೇಶ್ ಒಂಟಿಯಾಗಿದ್ದ ಸಮಯದಲ್ಲಿ ಅವರ ಪ್ರಜ್ಞೆ ತಪ್ಪಿಸಿದ್ದ ಆರೋಪಿ ದಂಪತಿ ಮನೆಯಲ್ಲಿದ್ದ 1 ಕೆ.ಜಿ ಚಿನ್ನಾಭರಣ, 2 ಲಕ್ಷ ರೂಪಾಯಿ ನಗದು ಕದ್ದು ಪರಾರಿಯಾಗಿದ್ದರು.
ಇದನ್ನು ಓದಿ: ನಾನು ಎಲ್ಲರಿಗಿಂತ ಬೆಟರ್ ‘ ಟೀಕೆಗಳಿಗೆ ಭವ್ಯಾ ಗೌಡ ‘ಡೋಂಟ್ ಕೇರ್’!
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್ ನೆಟ್ವರ್ಕ್ ಆಧರಿಸಿ ಮುಂಬೈನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.