ರಾಜ್ಯದಲ್ಲಿ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಲೋಕಸೇವಾ ಆಯೋಗವು ( KPSC) ಇದೀಗ ಪರೀಕ್ಷೆ ದಿನಾಂಕ ಜೊತೆಗೆ ಹಾಲ್ ಟಿಕೆಟ್ ಅನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಕೂಡಲೇ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಡೌನ್ ಲೋಡ್ ಮಾಡಿಕೊಳ್ಳಬೇಕು.
ಪಿಡಿಒ ಪರೀಕ್ಷೆಗೆ ಹಾಲ್ ಟಿಕೆಟ್ ಪ್ರಕಟ! ಡೌನ್ಲೋಡ್ ಹೇಗೆ?
ರಾಜ್ಯದಲ್ಲಿ ಖಾಲಿ ಇರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಲೋಕಸೇವಾ ಆಯೋಗವು ( KPSC) ಇದೀಗ ಪರೀಕ್ಷೆ ದಿನಾಂಕ ಜೊತೆಗೆ ಹಾಲ್ ಟಿಕೆಟ್ ಅನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ಕೂಡಲೇ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಡೌನ್ ಲೋಡ್ ಮಾಡಿಕೊಳ್ಳಬೇಕು.
ಹಾಗಾದರೆ, ಪರೀಕ್ಷೆ ಯಾವಾಗ, ನೇಮಕಾತಿ ಹಂತಗಳು, ಪ್ರಕ್ರಿಯೆಯ ಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕ ಲೋಕಸೇವಾ ಆಯೋಗವು ಒಟ್ಟು 247 PDO ಹುದ್ದೆಗಳಿಗೆ ಇದೇ ವರ್ಷ ಏಪ್ರಿಲ್ ಮಧ್ಯ ಭಾಗದಲ್ಲಿ ಅರ್ಜಿ ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳಿಂದ ಅಪಾರ ಪ್ರಮಾಣದಲ್ಲಿ ಆನ್ಲೈನ್ ಮೂಲಕ ಅರ್ಜಿಗಳು ಸಲ್ಲಿಕೆ ಆದವು. ನೇಮಕಾತಿ ಮುಂದುವರಿದ ಭಾಗವಾಗಿ ಡಿಸೆಂಬರ್ನಲ್ಲಿ ಪರೀಕ್ಷೆಗಳನ್ನು ಹಮ್ಮಿಕೊಂಡಿರುವ ಆಯೋಗವು ಇದೀಗ ಹಾಲ್ ಟಿಕೆಟ್ ಪ್ರಕಟಿಸಿದೆ.
ಪರೀಕ್ಷೆ ಯಾವಾಗ, ಹಾಲ್ ಟಿಕೆಟ್ ಯಾವಾಗ ಬಿಡಲಿದೆ ಎಂದು ಕಾಯುತ್ತಿದ್ದ ಕೆಪಿಎಸ್ಸಿ ಅಭ್ಯರ್ಥಿಗಳಿಗೆ ಕೊನೆಗೂ ಸಿಹಿ ಸುದ್ದಿಸಿಕ್ಕಿದೆ. ಅಭ್ಯರ್ಥಿಗಳು ಕೆಪಿಎಸ್ಸಿ ಅಧಿಕೃತ ವೆಬ್ಸೈಟ್ನಲ್ಲಿ (https://kpsc.kar.nic.in/) ಅಗತ್ಯ ಮಾಹಿತಿಯನ್ನು ನಮೂದಿಸಿ ನಿಮ್ಮ ಹಾಲ್ ಟಿಕೆಟ್ ಪಡೆಯಬೆಕಿದೆ.
ಪಿಡಿಓ ಪರೀಕ್ಷೆ ದಿನಾಂಕಗಳು
2024 ಡಿಸೆಂಬರ್ 07 (ಕನ್ನಡ ಭಾಷಾ ಪರೀಕ್ಷೆ)
2024 ಡಿಸೆಂಬರ್ 08 (ಸ್ಪರ್ಧಾತ್ಮಕ ಪರೀಕ್ಷೆ)
ಪರೀಕ್ಷೆಯ ದಿನಾಂಕಕ್ಕೆ 7 ದಿನಗಳ ಮೊದಲು ಹಾಲ್ ಟಿಕೆಟ್ ಲಭ್ಯ .
ಆಯ್ಕೆ ಪ್ರಕ್ರಿಯೆ ಹೇಗರಲಿದೆ?
ಕರ್ನಾಟಕ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ನೇಮಕಾತಿಯು ಎರಡು ಹಂತಗಳನ್ನು ಒಳಗೊಂಡಿದೆ. ಮೊದಲ ಹಂತವು ಅಭ್ಯರ್ಥಿಯ ಭಾಷೆಯಲ್ಲಿನ ಪ್ರಾವೀಣ್ಯತೆ ನಿರ್ಧರಿಸುತ್ತದೆ. ಕನ್ನಡ ಭಾಷಾ ಮತ್ತು ಸ್ಪರ್ಧಾತ್ಮಕ ಪರೀಕ್ಷೆ, ನಂತರ ಎರಡನೇ ಹಂತದಲ್ಲಿ ಲಿಖಿತ ಪರೀಕ್ಷೆ ಸಹಿತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಲಿಖಿತ ಪರೀಕ್ಷೆಯುಲ್ಲಿ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ, ಕಂಪ್ಯೂಟರ್ ಕೌಶಲ್ಯ ಮತ್ತು ಭಾಷಾ ಸಾಮರ್ಥ್ಯಗಳನ್ನು ಮೌಲ್ಯಮಾಪನ ಮಾಡಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ. KPSC ಪಿಡಿಓ ಪರಿಕ್ಷೆಯು ಪರೀಕ್ಷೆಯು ಆಫ್ಲೈನ್ ಮೂಲಕ ನಡೆಯುತ್ತದೆ. ಪ್ರತಿ ಪ್ರಶ್ನೆ ಒಂದು ಅಂಕ ಒಳಗೊಂಡಿರುತ್ತದೆ. ಪರೀಕ್ಷೆಯಲ್ಲಿ 1/4 ನಕಾರಾತ್ಮಕ ಅಂಕಗಳು (ಕಟ್ ಆಫ್) ಇರುತ್ತದೆ. ಎರಡು ಭಾಷೆಯಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಹಾಲ್ ಟಿಕೆಟ್ ಕಡ್ಡಾಯವಾಗಿ ತಂದರೆ ಮಾತ್ರವೇ ಒಳಗೆ ಪ್ರವೇಶ ಇರುತ್ತದೆ.
ಹಾಲ್ ಟಿಕೆಟ್ ಡೌನ್ಲೋಡ್ ಮಾಡುವ ವಿಧಾನ
* ಅಭ್ಯರ್ಥಿಗಳು ಮೊದಲು ಅಧಿಕೃತ ಜಾಲತಾಣ https://kpsc.kar.nic.in/ ಗೆ ಭೇಟಿ ನೀಡಬೇಕು.
* ನಂತರ ಮುಖಪುಟದಲ್ಲಿ ಕಾಣುವ KPSC PDO ಹಾಲ್ ಟಿಕೆಟ್ ಎಂಬದರ ಮೇಲೆ ಕ್ಲಿಕ್ ಮಾಡಬೇಕು.
* ಅಗತ್ಯ ವಿವರಗಳಾದ ನಿಮ್ಮ ನೋಂದಣಿ ಸಂಖ್ಯೆ, ಹುಟ್ಟಿದ ದಿನಾಂಕ, ಇತರ ವಿವರ ಮೂದಿಸಬೇಕು.
* ಬಳಿಕ ಸಬ್ಬಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಹಾಲ್ ಟಿಕೆಟ್ ಕಾಣಿಸುತ್ತದೆ. ಮುಂದಿನ ಪ್ರಕ್ರಿಯೆಗಾಗಿ ಅದನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.