ನವದೆಹಲಿ: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್ ಎ ಲಾಗೋ ನಿವಾಸಕ್ಕೆ ಸಿಕ್ಕಿರುವ ಬಿಗಿ ಭದ್ರತೆ ಈಗ ಜನಮನಸೆಳೆದಿದೆ. ಅವರ ಮನೆಯ ಸುತ್ತ ಪಹರೆ ನಡೆಸುತ್ತಿರುವ ರೋಬೋಟ್ ನಾಯಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯ ವಿಷಯವಾಗಿದೆ. ಇದರ ವಿಡಿಯೋ ಸಿಕ್ಕಾಪಟ್ಟ ವೈರಲ್ ಆಗುತ್ತಿದೆ.
ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ಗೆಲುವು ದಾಖಲಿಸಿರುವ ರಿಪಬ್ಲಿಕನ್ ಪಾರ್ಟಿಯ ಅಭ್ಯರ್ಥಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾರ್ ಎ ಲಾಗೋ ಎಸ್ಟೇಟ್ ಭದ್ರತೆ ಹೆಚ್ಚಾಗಿದೆ. ಡೊನಾಲ್ಡ್ ಟ್ರಂಪ್ ಮನೆ ಕಾಯುತ್ತಿರುವುದು ಈಗ ರೋಬೋಟ್ ನಾಯಿ. ಎಸ್ಟೇಟ್ ಸುತ್ತ ಚಲಿಸುತ್ತಿರುವ ರೋಬೋಟ್ ನಾಯಿಯ ಪಹರೆ ಈಗ ಜಗತ್ತಿನ ಗಮನಸೆಳೆದಿದೆ. ಇದರ ವಿಡಿಯೋ ವೈರಲ್ ಆಗಿದ್ದು, ನಾನಾ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಕೊಲಿನ್ ರಗ್ ಎಂಬುವವರು ಈ ವಿಡಿಯೋ ಶೇರ್ ಮಾಡಿದ್ದು, “ಡೊನಾಲ್ಡ್ ಟ್ರಂಪ್ ಅವರು ಮಾರ್-ಎ-ಲಾಗೊದಲ್ಲಿ ತಮ್ಮ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಿದ್ದಾರೆ. ಈಗ ಎಸ್ಟೇಟ್ ಪಹರೆಗೆ ರೋಬೋಟ್ ನಾಯಿಯನ್ನು ಬಿಟ್ಟಿದ್ದಾರೆ ಎಂದು ವರದಿಯಾಗಿದೆ. ರೊಬೊಟಿಕ್ ನಾಯಿಯ ಕಾಲುಗಳ ಮೇಲೆ ”ಡು ನಾಟ್ ಪೆಟ್” ಎಂಬ ಬರಹ ಇದೆ.
“ಬೋಸ್ಟನ್ ಡೈನಾಮಿಕ್ಸ್ ಕಂಪನಿ ಈ ರೋಬೋಟ್ ನಾಯಿಯನ್ನು ನಿರ್ಮಿಸಿದೆ.” ಇದರಲ್ಲಿ ಸರ್ವೇಕ್ಷಣಾ ತಂತ್ರಜ್ಞಾನ ಮತ್ತು ಸವಲತ್ತುಗಳಿವೆ ಎಂದು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ಕೊಲಿನ್ ರಗ್ ಬರೆದುಕೊಂಡಿದ್ದಾರೆ. ರಾಯ್ಟರ್ಸ್ ಪ್ರಕಾರ, ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮನೆಯ ಹೊರಗೆ ಈ ರೋಬೋಟ್ ನಾಯಿ ಪತ್ತೆಯಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ರೋಬೋಟ್ ನಾಯಿ ತನ್ನದೇ ವೇಗದಲ್ಲಿ ಮನೆಯ ಲಾನ್ನಲ್ಲಿ ಅತ್ತಿಂದಿತ್ತ ಓಡಾಡುತ್ತಿರುವ ದೃಶ್ಯವಿದೆ.
ಇನ್ನು ನಿರ್ದಿಷ್ಟ ಸಾಮರ್ಥ್ಯಗಳನ್ನು ಮನುಷ್ಯ ಹೊಂದುವುದು ಸಾಧ್ಯವಾಗದಿದ್ದರೂ, ರೋಬೋಟ್ ನಾಯಿಗಳು ಕಣ್ಗಾವಲು ತಂತ್ರಜ್ಞಾನವನ್ನು ಹೊಂದಿವೆ ಮತ್ತು ನಮ್ಮ ರಕ್ಷಣಾತ್ಮಕ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸುಧಾರಿತ ಸಂವೇದಕಗಳ ಒಂದು ಶ್ರೇಣಿಯನ್ನು ಹೊಂದಿವೆ” ಎಂದು ವರದಿ ಹೇಳಿದೆ.
ಇದನ್ನು ಓದಿ: ಬರ್ತ್ ಡೇಗೆ ಬಾತಿಂಗ್ ವಿಡಿಯೋ ಹಂಚಿಕೊಂಡ ನಿವ್ವಿ!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಎರಡು ಸಲ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಯತ್ನ ನಡೆದಿತ್ತು. ಅದಾದ ಬಳಿಕ ಅವರ ಭದ್ರತೆ ಹೆಚ್ಚಾಗಿದೆ. ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಮಾಡುವುದಕ್ಕೆ ಇರಾನ್ ಮೂಲದವರು ಪ್ರಯತ್ನಿಸುತ್ತಿರುವುದಾಗಿ ಆರೋಪ ವ್ಯಕ್ತವಾಗಿದೆ. ಈಗ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಕಂಡಿರುವ ಕಾರಣ ಅವರ ಭದ್ರತೆ ಈಗ ಅಮೆರಿಕ ಸರ್ಕಾರದ ಹೊಣೆಗಾರಿಕೆಯಾಗಿದೆ.