ಭಾರತ್ ಜೋಡೋ ಯಾತ್ರೆ ಮಾಡಿದ ರಾಹುಲ್ ಗಾಂಧಿ, ಈಗ ವಯನಾಡುನಲ್ಲಿ ಪ್ರಚಾರ ನಡೆಸ್ತಿದ್ದಾರೆ. ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿ ಅವರ ತಂಗಿ ಪ್ರಿಯಾಂಕಾ ವಾದ್ರಾ ಇದೇ ಮೊದಲ ಬಾರಿಗೆ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ. ರಾಹುಲ್ ಗಾಂಧಿ ತೆರವು ಮಾಡಿದ ಕ್ಷೇತ್ರಕ್ಕೀಗ ಪ್ರಿಯಾಂಕಾ ವಾದ್ರಾ ಅವರೇ ಅಭ್ಯರ್ಥಿ. ತಂಗಿಯ ಪರ ಪ್ರಚಾರ ನಡೆಸ್ತಿರೋ ರಾಹುಲ್ ಗಾಂಧಿ ವಯನಾಡಿನಲ್ಲಿ ಪೊಲಿಟಿಕಲ್ ಲವ್ ಸ್ಟೋರಿ ಹೇಳಿದ್ದಾರೆ.
ನಾನು ಭಾರತ್ ಜೋಡೋ ಯಾತ್ರೆ ಶುರು ಮಾಡಿದ್ದು ರಾಜಕೀಯ ಕಾರಣಗಳಿಗಾಗಿ. ಆದರೆ ವಯನಾಡಿನಲ್ಲಿ ಬಂದಾಗ ರಾಜಕೀಯದಲ್ಲಿ ಲವ್ ಕೂಡಾ ಇದೆ ಎಂದು ಗೊತ್ತಾಯ್ತು. ಇಲ್ಲಿನ ಜನ ನನ್ನನ್ನು ಅಪ್ಪಿಕೊಂಡು ಪ್ರೀತಿಯ ಸುರಿಮಳೆ ಸುರಿಸಿದರು. ಐ ಲವ್ ಯೂ ಎಂದು ಹೇಳಿದರು. ನಾನು ರಾಜಕೀಯದಲ್ಲಿ ಲವ್ ಅನ್ನೋ ಪದವನ್ನು ಬಳಸೋಕೆ ಶುರು ಮಾಡಿದ್ದೇ ವಯನಾಡು ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಮೇಲೆ ಎಂದು ಹೇಳಿದ್ದಾರೆ.
ಇದನ್ನು ಓದಿ:ಒಟಿಟಿಗೆ ಲಗ್ಗೆ ಇಡುತ್ತಾ ‘ಅಮರನ್’?
ವಿಮಾನದಲ್ಲಿ ಬರುತ್ತಿದ್ದಾಗ ನಾನು ಯೋಚಿಸಿದೆ. ನಾನು ರಾಜಕೀಯದಲ್ಲಿ ಪ್ರೀತಿ ಅನ್ನೋ ಪದವನ್ನು ಹೇಳಿ ಯಾವ ಕಾಲವಾಗಿತ್ತು ಅಂತಾ ಯೋಚನೆ ಮಾಡಿದೆ. ಅದಕ್ಕೆ ಕಾರಣ, ವಯನಾಡಿನ ಜನ ನನ್ನನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ವಯನಾಡು, ನನ್ನ ರಾಜಕೀಯ ಜೀವನವನ್ನು ಸಂಪೂರ್ಣ ಬದಲಿಸಿತು. ರಾಜಕೀಯದಲ್ಲಿಯೂ ಪ್ರೀತಿ ಅನ್ನೋದು ಯಾವ ರೀತಿ ಬದಲಾವಣೆ ತರಬಲ್ಲದು ಎನ್ನುವುದನ್ನು ನನಗೆ ಕಲಿಸಿಕೊಟ್ಟಿದ್ದೇ ವಯನಾಡು. ಅದಕ್ಕಾಗಿ ನಾನು ಈ ದಿನ ಈ ವೈಟ್ ಟೀಶರ್ಟ್ ಧರಿಸಿ ನಿಮ್ಮ ಮುಂದೆ ನಿಂತಿದ್ದೇನೆ. ಬಿಳಿ ಪ್ರೀತಿಯ ಸಂಕೇತ ಎಂದು ಪ್ರೀತಿಯ ಪ್ರವಾದಿಯಂತೆ ಪ್ರಚಾರ ಮಾಡಿದ್ದಾರೆ.
ಇದನ್ನು ಓದಿ:ಪರಿಹಾರ ಅರಣ್ಯೀಕರಣಕ್ಕಾಗಿ 25 ಸಾವಿರ ಸಸಿಗಳನ್ನು ನೆಟ್ಟ BMRCL..!
ಅಷ್ಟೇ ಅಲ್ಲ, ತಮ್ಮ ತಂಗಿಯನ್ನು ಹೊಗಳಿದ ರಾಹುಲ್ ಗಾಂಧಿ, ದೇಶದಲ್ಲಿಯೇ ಅತ್ಯುತ್ತಮ ಪ್ರವಾಸಿ ತಾಣವಾಗಿ ವಯನಾಡುವನ್ನು ಅಭಿವೃದ್ಧಿಪಡಿಸುವುದು ನಿನಗೆ ನಾನು ಕೊಟ್ಟಿರುವ ಚಾಲೆಂಜ್. ಭಾರತಕ್ಕೆ ಪ್ರವಾಸ ಬರುವ ಯಾವುದೇ ವ್ಯಕ್ತಿಯ ಮೊದಲ ಆಯ್ಕೆ ವಯನಾಡಾಗಿರಬೇಕು ಎಂದು ವೇದಿಕೆಯ ಮೇಲೆಯೇ ಹೇಳಿದ್ದಾರೆ. ಅಲ್ಲದೆ ತಂಗಿ ಪ್ರಿಯಾಂಕಾ ವಾದ್ರಾ ಎಂಪಿಯಾದರೂ, ನಾನು ಕೂಡಾ ಈ ಕ್ಷೇತ್ರದ ಸೇವಕ. ಯಾವುದೇ ಕ್ಷಣದಲ್ಲಿ ವಯನಾಡಿನ ಜನ ನನ್ನನ್ನು ಕಾಂಟ್ಯಾಕ್ಟ್ ಮಾಡಬಹುದು ಎಂದೂ ಕೂಡಾ ಘೋಷಿಸಿದ್ದಾರೆ.
ಇದನ್ನು ಓದಿ:ಮನೆ ಮನೆಗಳಿಂದ ಕಸ ಸಂಗ್ರಹಕ್ಕೆ ಶುಲ್ಕ ವಸೂಲಿ!
ರಾಹುಲ್ ಗಾಂಧಿ ಅವರ ತಂಗಿ ಪ್ರಿಯಾಂಕಾ ವಾದ್ರಾ, ಅಣ್ಣ ಮತ್ತು ತಾಯಿಯ ಕ್ಷೇತ್ರಗಳಿಗಷ್ಟೇ ಆರಂಭದಲ್ಲಿ ಸೀಮಿತವಾಗಿದ್ದರು. ಅದಾದ ನಂತರ ಹಿಮಾಚಲ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್ಘಡಗಳಲ್ಲಿ ಪ್ರಚಾರದ ನೇತೃತ್ವವನ್ನೂ ವಹಿಸಿಕೊಂಡರು. ಗೆಲುವನ್ನೂ ಕಂಡಿದ್ಧಾರೆ. ಸೋಲನ್ನೂ ನೋಡಿದ್ಧಾರೆ. ಆದರೆ ಸ್ಪರ್ಧಾ ರಾಜಕೀಯಕ್ಕೆ ಧುಮುಕಿರಲಿಲ್ಲ. ಇದೇ ಮೊದಲ ಬಾರಿಗೆ ವಯನಾಡು ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ವಯನಾಡುನಲ್ಲೂ ಗೆದ್ದಿದ್ದ ರಾಹುಲ್ ಗಾಂಧಿ, ತಾವು ಗೆದ್ದಿದ್ದ ಉತ್ತರ ಪ್ರದೇಶದ ರಾಯ್ ಬರೇಲಿಯನ್ನು ಉಳಿಸಿಕೊಂಡು, ವಯನಾಡು ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.