ಭಾರತೀಯ ಕ್ರಿಕೆಟ್ ಲೆಜೆಂಡ್ ವಿರಾಟ್ ಕೊಹ್ಲಿ ತಮ್ಮ ಅಚ್ಚರಿಯ ನಡೆಯ ಮೂಲಕ ಟೀಂ ಇಂಡಿಯಾ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಹೌದು.. ಇದೇ ತಿಂಗಳ ಅಂದರೆ ನವೆಂಬರ್ 22 ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಹಾರಿದೆ. ಸದ್ಯದ ಮಾಹಿತಿಯ ಪ್ರಕಾರ, ಎರಡು ಬ್ಯಾಚ್ಗಳಲ್ಲಿ ರೋಹಿತ್ ಪಡೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಅಚ್ಚರಿಯ ವಿಷಯವೆಂದರೆ ವಿರಾಟ್ ಕೊಹ್ಲಿ ಈ ಎರಡು ಬ್ಯಾಚ್ಗಳನ್ನು ಬಿಟ್ಟು ಈಗಾಗಲೇ ಆಸ್ಟ್ರೇಲಿಯಾ ತಲುಪಿದ್ದಾರೆ. ಹೌದು, ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳೊಂದಿಗೆ ಕೊಹ್ಲಿ ಕಾಣಿಸಿಕೊಂಡಿದ್ದರು. ಬಹುಶಃ ಕುಟುಂಬ ಸಮೇತರಾಗಿ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾಕ್ಕೆ ಹಾರಿದ್ದು, ಭಾನುವಾರ ಸಂಜೆಯೇ ಆಸ್ಟ್ರೇಲಿಯಾ ತಲುಪಿದ್ದಾರೆ ಎಂದು ವರದಿಯಾಗಿದೆ.
ಟೀಂ ಇಂಡಿಯಾದ ಒಂದು ಬ್ಯಾಚ್ ಈಗಾಗಲೇ ಆಸ್ಟ್ರೇಲಿಯಾಕ್ಕೆ ತೆರಳಿದ್ದು, ಎರಡನೇ ಬ್ಯಾಚ್ ಇಂದು ಹೊರಡಲಿದೆ. ನವೆಂಬರ್ 10 ರಂದು ಹೊರಟ ಬ್ಯಾಚ್ ಇಂದು ಮಧ್ಯಾಹ್ನ ಆಸ್ಟ್ರೇಲಿಯಾ ತಲುಪಿದೆ. ನವೆಂಬರ್ 11 ರಂದು ಆಸ್ಟ್ರೇಲಿಯಾಕ್ಕೆ ಹಾರಿದ ಎರಡನೇ ಬ್ಯಾಚ್ ಭಾರತೀಯ ಆಟಗಾರರು ಮಂಗಳವಾರ ಆಸ್ಟ್ರೇಲಿಯಾ ತಲುಪಲಿದ್ದಾರೆ. ಮಂಗಳವಾರವೇ ಟೀಂ ಇಂಡಿಯಾದ ಮೊದಲ ಸೆಷನ್ ನಡೆಯಲ್ಲಿದ್ದು, ಸರಣಿಯ ಮೊದಲ ಪಂದ್ಯ ನವೆಂಬರ್ 22 ರಿಂದ ಪರ್ತ್ನಲ್ಲಿ ನಡೆಯಲಿದೆ.
ಬಾರ್ಡರ್-ಗವಾಸ್ಕರ್ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ರವೀಂದ್ರ ಜಡೇಜಾ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ವಿರಾಟ್ ಕೊಹ್ಲಿ, ಪ್ರಸಿದ್ಧ್ ಕೃಷ್ಣ, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್.
ಇದನ್ನೂ ಓದಿ: MSME ಗಳಿಗೆ 100 ಕೋಟಿ ವರೆಗೂ ಅಡಮಾನರಹಿತ ಸಾಲ..!
ಟೆಸ್ಟ್ ಸರಣಿ ವೇಳಾಪಟ್ಟಿ
ಮೊದಲ ಟೆಸ್ಟ್: 22-26 ನವೆಂಬರ್: ಪರ್ತ್
ಎರಡನೇ ಟೆಸ್ಟ್: 6-10 ಡಿಸೆಂಬರ್: ಅಡಿಲೇಡ್
ಮೂರನೇ ಟೆಸ್ಟ್: 14-18 ಡಿಸೆಂಬರ್: ಬ್ರಿಸ್ಬೇನ್
ನಾಲ್ಕನೇ ಟೆಸ್ಟ್: 26-30 ಡಿಸೆಂಬರ್: ಮೆಲ್ಬೋರ್ನ್
ಐದನೇ ಟೆಸ್ಟ್: 3-7 ಜನವರಿ: ಸಿಡಾನ್