ಬಾಗಲಕೋಟೆಯಲ್ಲಿ ಸಾರ್ವಜನಿಕರೇ ಶಾಸಕ ಯತ್ನಾಳ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ್ ಬಗ್ಗೆ ಪ್ರಸ್ತಾಪಿಸಿದ್ದರು ಶಾಸಕ ಯತ್ನಾಳ್. ಅಲ್ಲಮ್ಮಪ್ರಭು ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ವಕ್ಫ್ ಪ್ರಸ್ತಾಪ ಮಾಡುತ್ತಿದ್ದಂತೆ, ಅವರ ಮಾತಿಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಧಾರ್ಮಿಕ ವೇದಿಕೆಯನ್ನ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ, ‘ಇಲ್ಲಿ ಬಂದು ರಾಜಕೀಯ ಮಾತನಾಡಬೇಡಿ’ ದೇವಸ್ಥಾನ ನಿರ್ಮಾಣಕ್ಕೆ ಎಲ್ಲಾ ಸಮಾಜದಿಂದ ದೇಣಿಗೆ ಬಂದಿದೆ. ಮುಸ್ಲಿಂ ಸಮುದಾಯದವರೂ ದೇಣಿಗೆ ಕೊಟ್ಟಿದ್ದಾರೆ. ಮುಸ್ಲಿಮರು 6 ಲಕ್ಷ ದೇಣಿಗೆ ಕೊಟ್ಟಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯರ ಮಾತಿನಿಂದ ಮುಜುಗರಕ್ಕೀಡಾಗಿ ತಮ್ಮ ಭಾಷಣವನ್ನ ಅರ್ಧಕ್ಕೆ ಮುಗಿಸಿ ಶಾಸಕ ಯತ್ನಾಳ್ ಹೊರಟಿದ್ದಾರೆ.