ಅನುಷಾ ರೈ ಹಾಗೂ ಧರ್ಮ ಕೀರ್ತಿರಾಜ್ ಮಧ್ಯೆ ಒಳ್ಳೆಯ ಗೆಳೆತನ ಇತ್ತು. ಆದರೆ, ಈಗ ಬಿಗ್ ಬಾಸ್ ಮನೆಯಲ್ಲಿ ಕೊಟ್ಟ ಜೋಡಿ ಟಾಸ್ಕ್ ಎಲ್ಲವನ್ನೂ ತಲೆಕೆಳಗೆ ಮಾಡಿದೆ. ಬೆಳ್ಳಂಬೆಳಗ್ಗೆ ಕಲರ್ಸ್ ಕನ್ನಡ ಪ್ರೊಮೋ ರಿಲೀಸ್ ಮಾಡಿದ್ದು ಅದರಲ್ಲಿ ಧರ್ಮ ಮತ್ತು ಅನುಷಾ ನಡುವೆ ಬೆಂಕಿ ಹೊತ್ತಿಕೊಂಡಿದೆ. ಬಿಗ್ಬಾಸ್ ಮನೆಯಲ್ಲಿ ನೇರ ನಾಮಿನೇಷನ್ ಗಲಾಟೆ ಜೋರಾಗಿದೆ.
ಬಿಗ್ಬಾಸ್ ನೀಡಿದ ಟಾಸ್ಕ್ನಂತೆ ಮನೆಯಲ್ಲಿ ನೇರ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಮೊದಲು ಧನರಾಜ್ ಅವರು, ಗೋಲ್ಡ್ ಸುರೇಶ್ ಹಾಗೂ ಅನುಷಾ ಹೆಸರನ್ನು ತೆಗೆದುಕೊಳ್ತಾರೆ. ಅಶ್ವರ್ಯ, ಗೌತಮಿ, ಚೈತ್ರಾ, ಧರ್ಮ, ಮೋಕ್ಷಿತಾ ಸೇರಿದಂತೆ ಬಹುತೇಕ ಸ್ಪರ್ಧಿಗಳು ಅನುಷಾ ಅವರನ್ನು ನಾಮಿನೇಟ್ ಮಾಡ್ತಾರೆ.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅನುಷಾ.. ಪ್ರತಿಯೊಬ್ಬರಿಗೂ ಪ್ರಶ್ನೆಗಳನ್ನು ಕೇಳ್ತಾರೆ. ಮೋಕ್ಷಿತಾ ಅವರೇ ನೀವು ಎಷ್ಟು ಎಂಟರ್ಟೈನಿಂಗ್ ಆಗಿದ್ದೀರಾ? ಎಂದು ತರಾಟೆಗೆ ತೆಗೆದುಕೊಳ್ತಾರೆ. ನಂತರ ಧರ್ಮ ವಿಚಾರಕ್ಕೆ ಬರ್ತಾರೆ. ಅಗ್ರೇಷನ್ ಕಮ್ಮಿ ಆಯ್ತು ಎಂದು ನನಗೆ ಕೇಳ್ತೀರಿ. ನಿಮಗೆ ಎಷ್ಟು ಅಗ್ರೇಷನ್ ಇದೆ? ಧರ್ಮ ನೀವು ಏನೂ ಆಟ ಆಡಿಯೇ ಇಲ್ಲ. ನೀವು ಎಷ್ಟು ಇನ್ವಾಲ್ ಆಗಿದ್ದೀರಾ? ಎಂದು ತೀವ್ರ ವಾದ ಮಾಡ್ತಾರೆ. ಅದಕ್ಕೆ ಸಮರ್ಥನೆ ಮಾಡಿಕೊಳ್ಳಲು ಹೋದ ಧರ್ಮ.. ಆಯ್ತು, ನಾನೇ ಹೇಳ್ತಿದ್ದೀನಲ್ಲ. ಎಲ್ಲರೂ ನಾಲಯಕ್ ಎಂದು ಕ್ಯಾಕರಿಸಿ ಉಗಿದ ಮೇಲೆ ಬೇವರ್ಸಿ ಅಂತಾನೇ ಹೇಳ್ರಲ್ಲ ಎಂದಿದ್ದಾರೆ.
ಇದನ್ನು ಓದಿ: ಸೂಪರ್ ಹೀರೋ ಶಕ್ತಿಮಾನ್ ರಿಟರ್ನ್ಸ್!
ಪ್ರೊಮೋ ನೋಡಿದ ಬಿಗ್ಬಾಸ್ ವೀಕ್ಷಕರು ಅನುಷಾ ಮತ್ತು ಧರ್ಮಗೆ ಆಗಿದ್ದೇನು? ಮನೆಯಲ್ಲಿ ಈ ಜೋಡಿ ಚೆನ್ನಾಗಿಯೇ ಇತ್ತು. ಇದ್ದಕ್ಕಿದ್ದಂತೆ ಇಬ್ಬರ ಮುನಿಸಿಗೆ ಕಾರಣವೇನು ಎಂಬ ಚರ್ಚೆ ಶುರು ಮಾಡಿದ್ದಾರೆ. ಇನ್ನು ಧರ್ಮ ಹಾಗೂ ಐಶ್ವರ್ಯಾ ಜೋಡಿ ಆಗಿದ್ದಾರೆ. ಇವರಿಬ್ಬರು ಸೇರಿ ಅನುಷಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದು ಅನುಷಾ ಕೋಪವನ್ನುಇನ್ನಷ್ಟು ಹೆಚ್ಚಿಸಿದೆ. ಇಬ್ಬರ ಸಂಬಂಧದ ಮಧ್ಯೆ ಹುಳಿ ಹಿಂಡುವ ಕೆಲಸ ನಡೆದು ಹೋಗಿದೆ. ಇವತ್ತಿನ ಎಪಿಸೋಡ್ನಲ್ಲಿ ಏನೆಲ್ಲ ಆಗಬಹುದು ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.