ರಾಜಕೀಯದಲ್ಲಿ ಇಂತಹ ಘಟನೆಗಳು ನಡೆಯುತ್ತವೆ. ಕೆಲವರಿಗೆ ಅನಿರೀಕ್ಷಿತ ಅದೃಷ್ಟ ಖುಲಾಯಿಸುತ್ತದೆ. ಅಂಥಾದ್ದೊಂದು ಅದೃಷ್ಟ ಕಮಲಾ ಹ್ಯಾರಿಸ್ಅವರಿಗೂ ಒಲಿಯುತ್ತದಾ..? ಇಂಥಾದ್ದೊಂದು ಚರ್ಚೆ ಇದೀಗ ಅಮೆರಿಕದಲ್ಲಿ ಶುರುವಾಗಿದೆ. ಹಾಗಾದರೆ ಚುನಾವಣೆ ಗೆದ್ದಿರುವ ಟ್ರಂಪ್ಭವಿಷ್ಯ ಏನು.. ಎಂಬ ಕುತೂಹಲವೂ ಹುಟ್ಟಿಕೊಂಡಿದೆ. ಇಂತಾ ಚರ್ಚೆಗೆಲ್ಲ ಕಾರಣವಾಗಿರುವುದು ಕಮಲಾ ಹ್ಯಾರಿಸ್ಅವರ ಆಪ್ತರೂ ಆಗಿರುವ ಮಾಜಿ ಸಂವಹನ ನಿರ್ದೇಶಕ ಜಮಲ್ಸಿಮನ್ಸ್.
ಇದನ್ನು ಓದಿ:ಟಿಪ್ಪು ಸುಲ್ತಾನ್ ಅಂತಿಮ ಖಡ್ಗ 3.4 ಕೋಟಿಗೆ ಹರಾಜು : ಆತನಿಗೂ ಬೆನ್ನು ಹತ್ತಿತಾ ಬ್ಯಾಡ್ಲಕ್..?
ಹೇಗೆ ಸಾಧ್ಯ ಎನ್ನುವುದಕ್ಕೆ ಅವರು ಕಾರಣವನ್ನೂ ಕೊಟ್ಟಿದ್ದಾರೆ. ಅಧ್ಯಕ್ಷ ಜೋ ಬೈಡೆನ್ಗೆ ನೀವು ರಾಜೀನಾಮೆ ನೀಡಿ ಕಮಲಾ ಹ್ಯಾರಿಸ್ಅವರನ್ನು ಅಮೆರಿಕದ 47ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ಒತ್ತಾಯಿಸಿದ್ದಾರೆ. ಸಿಎನ್ಎನ್ವಾಹಿನಿಯ ಚರ್ಚೆಯಲ್ಲಿ ಭಾಗವಹಿಸಿದ್ದ ಅವರು ಜಮಲ್ಸಿಮನ್ಸ್ಮುಂದಿನ 30 ದಿನಗಳಲ್ಲಿ ಜೋ ಬೈಡೆನ್ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು. ಆ ಮೂಲಕ ಅಮೆರಿಕಕ್ಕೆ ಮೊದಲ ಮಹಿಳಾ ಅಧ್ಯಕ್ಷರ ನೇಮಕವಾಗಬೇಕು ಎಂದು ಹೇಳಿದ್ದಾರೆ.
ಇದೆಲ್ಲ ಹೇಗೆ ಸಾಧ್ಯ ಎಂದರೆ..
ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ಟ್ರಂಪ್ಗೆದ್ದಿದ್ದರೂ ಕೂಡ ಅವರ ಅಧಿಕೃತವಾಗಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಜನವರಿ 6ನೇ ತಾರೀಕು. ಹೀಗಾಗಿಯೂ ಟ್ರಂಪ್ಅವರು ಅಧಿಕಾರ ಸ್ವೀಕಾರ ಮಾಡೋದು ಜನವರಿ 20ನೇ ತಾರೀಕು. ಅಂದರೆ, ಇನ್ನೂ ಎರಡು ತಿಂಗಳ ಕಾಲ ಹಾಲಿ ಅಧ್ಯಕ್ಷ ಜೋ ಬೈಡೆನ್ಅವರೇ ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಅವರೇನಾದ್ರೂ ರಾಜೀನಾಮೆ ನೀಡಿದರೆ ಉಪಾಧ್ಯಕ್ಷೆಯಾಗಿರುವ ಕಮಲಾ ಹ್ಯಾರಿಸ್ಅವರು ಅಧ್ಯಕ್ಷರಾಗಬಹುದು. ಅಧ್ಯಕ್ಷರಾದರು ಕೂಡ ಜನವರಿ 6ರವರೆಗೆ ಮಾತ್ರ ಅವರ ಅಧಿಕಾರಾವಧಿ ಇರುತ್ತದೆ.
ಇಂಥಾದ್ದೊಂದು ಸಾಧ್ಯತೆಗೆ ಅವಕಾಶ ಇದೆ. ಏಕೆಂದರೆ ಉಪಾಧ್ಯಕ್ಷರಾಗಿರುವವರು, ಹಾಲಿ ಅಧ್ಯಕ್ಷರು ರಾಜೀನಾಮೆ ನೀಡಿದರೆ ಅಧಿಕಾರ ವಹಿಸಿಕೊಳ್ಳುವುದಕ್ಕೆ ಅಮೆರಿಕ ಸಂವಿಧಾನದ ಪ್ರಕಾರ ಅವಕಾಶವೂ ಇದೆ. ಆದರೆ, ಇದು ಡೆಮಾಕ್ರಟಿಕ್ಪಕ್ಷದ ಒಳಗೆ ಚರ್ಚೆಯಾಗುತ್ತಿಲ್ಲ. ಕೇವಲ ಜಮಲ್ಸಿಮನ್ಸ್ಹೇಳಿಕೆಯಾಗಷ್ಟೇ ಉಳಿದಿದೆ. ಜನವರಿ ೨೦ರ ನಂತರ ಡೊನಾಲ್ಡ್ಟ್ರಂಪ್ಅವರೇ ಅಧ್ಯಕ್ಷರಾಗಲಿದ್ದಾರೆ.