ಬಾಲ್ಯದ ನೆನಪು ಅಂದ್ರೇನೆ ಅದು ವಿಶೇಷ ನೋಡಿ. ನವೆಂಬರ್ 14.. ಮಕ್ಕಳ ದಿನಾಚರಣೆ ಪ್ರಯುಕ್ತ ‘ಬಿಗ್ ಬಾಸ್’ ಮನೆಯಲ್ಲಿ ಸ್ಪರ್ಧಿಗಳ ಬಾಲ್ಯದ ಫೋಟೋಗಳನ್ನ ‘ಬಿಗ್ ಬಾಸ್’ ತೋರಿಸಿದ್ದಾರೆ. ಆಯಾ ಸದಸ್ಯರ ಬಾಲ್ಯದ ಫೋಟೋಗಳನ್ನ ಮನೆಯ ವಿಟಿಯ ಮೇಲೆ ತೋರಿಸಿ ಎಲ್ಲರಿಗೂ ಆಶ್ವರ್ಯ ಮೂಡಿಸಿದ್ದಾರೆ. ಅಚಾನಕ್ಕಾಗಿಯೆ ಎಲ್ಲರೂ ತಮ್ಮ ಫೋಟೋಗಳನ್ನ ನೋಡಿ ಸಂತೋಷಪಟ್ಟಿದ್ದಾರೆ. ಇನ್ನೂ ಕೆಲವರು ತುಂಬಾನೇ ಭಾವುಕರಾಗಿದ್ದಾರೆ.
ಚೈತ್ರಾ ಕುಂದಾಪುರ ತಮ್ಮ ಬಾಲ್ಯದ ಫೋಟೋ ನೋಡಿ ಹಿರಿಹಿರಿ ಹಿಗ್ಗಿದ್ದಾರೆ. ಗೌತಮಿ ಜಾಧವ್ ಸಂತೋಷಪಟ್ಟಿದ್ದಾರೆ. ಶಿಶಿರ್ ಬಾಲ್ಯದಲ್ಲಿ ಹೇಗಿದ್ದರು ಅನ್ನೋದನ್ನ ನೋಡಿ ಎಲ್ಲರೂ ಸಿಕ್ಕಾಪಟ್ಟೆ ನಕ್ಕು ಖುಷಿಪಟ್ಟಿದ್ದಾರೆ. ಇನ್ನು ಹನುಮಂತ ಅವರ ಫೋಟೊ ಬಿಗ್ಬಾಸ್ ತೋರಿಸಲಿಲ್ಲ ಯಾಕಂದ್ರೆ, ಅವರು ಚಿಕ್ಕವರಿದ್ದಾಗ ಯಾವುದು ಫೋಟೋ ಇಲ್ಲ ಅನ್ನಿಸುತ್ತೆ ಎಂದು ಹನುಮಂತ ಅವರೇ ಹೇಳಿಕೊಂಡಿದ್ದಾರೆ.
ಆದರೆ, ದೊಡ್ಮನೆಯ ಗೋಲ್ಡ್ ಸುರೇಶ್ ತುಂಬಾನೆ ಫೀಲ್ ಮಾಡಿಕೊಂಡಿದ್ದಾರೆ. ಕಾರಣ, ಈ ಫೋಟೋದಲ್ಲಿರೋದು ಗೋಲ್ಡ್ ಸುರೇಶ್ ಮಗಳ ಡ್ರೆಸ್ ಆಗಿದೆ. ಮಗಳನ್ನ ನೋಡದೇ ಸುಮಾರು ದಿನಗಳೇ ಕಳೆದು ಹೋಗಿವೆ ಎಂದು ತುಂಬಾ ಎಮೋಷನಲ್ ಆಗಿದ್ದರು.
ಇನ್ನು ತಂದೆಯ ಜೊತೆ ಬಾಲಕ ತ್ರಿವಿಕ್ರಮ್ ಇರುವ ಫೋಟೋವನ್ನ ‘ಬಿಗ್ ಬಾಸ್’ ಹಾಕಿದರು. ಅದನ್ನ ಕಂಡು ತಮ್ಮ ಜೀವನದ ಕಹಿ ಘಟನೆಯನ್ನ ತ್ರಿವಿಕ್ರಮ್ ಮೆಲುಕು ಹಾಕಿದರು. ‘’ನನ್ನ ಬಾಲ್ಯವನ್ನ ನಾನು ಫ್ರೆಂಡ್ಸ್ ಜೊತೆ ಕಳೆದ ನೆನಪಿಲ್ಲ. ಯಾಕಂದ್ರೆ, ನನಗೆ ಕೈ ಫ್ರ್ಯಾಕ್ಚರ್ ಆಗಿತ್ತು. 10ನೇ ಕ್ಲಾಸ್ ತನಕ ನಾನು ಯಾರ ಜೊತೆಗೂ ಸ್ಪೋರ್ಟ್ಸ್ಗೆ ಹೋದವನಲ್ಲ. ನಾನು 2ನೇ ಕ್ಲಾಸ್ನಲ್ಲಿ ಇದ್ದೆ ಅನಿಸುತ್ತದೆ. ಅಟ್ಟದ ಮನೆಯಲ್ಲಿ ಮೊಟ್ಟೆ ತೆಗೆಯುವಾಗ ನಾನು ಬಿದ್ದೆ. ನಾನು ಬಾರ್ನ್ ಲೆಫ್ಟಿ. ಫುಲ್ ಪ್ರೆಶರ್ ಎಡಗೈ ಮೇಲೆ ಬಿತ್ತು. ಕೈ ಮುರಿಯಿತು. ‘ಮಗನ ಕೈ ತೆಗೆದ್ಯಲ್ಲ ಅಂತ ಅಮ್ಮನಿಗೆ ಹೊಡೆದು ನನ್ನನ್ನ ಅಪ್ಪ ಎತ್ತಿಕೊಂಡರು. ನನ್ನ ಕೈ ಕಟ್ ಆಗಿತ್ತು. ಡಾಕ್ಟರ್ ನೋಡಿ ‘’ಕೈ ಕಟ್ ಮಾಡಬೇಕು, ಏನೂ ಇಲ್ಲ ಅದರಲ್ಲಿ ಬಿಡಿ’’ ಎಂದರು. ಆಗ ಡಾಕ್ಟರ್ ಮುಂದೆ ನನ್ನ ತಂದೆ ಕಾಲಿಗೆ ಬಿದ್ದಿದ್ದು ನನಗೆ ಈಗಲೂ ನೆನಪಿದೆ. ‘‘ಇರೋದು ಒಬ್ಬನೇ ಮಗ. ಅವನ ಕೈ ಉಳಿಸಿಕೊಡಿ’’ ಅಂತ ಅಪ್ಪ ಡಾಕ್ಟರ್ ಕಾಲಿಗೆ ಬಿದ್ದರು’’. ’ಆಪರೇಷನ್ ಮಾಡಿದ್ಮೇಲೂ ನನ್ನ ಕೈ ವರ್ಕ್ ಆಗ್ತಿರ್ಲಿಲ್ಲ. ಯಾಕಂದ್ರೆ, ಒಂದು ಮೇಜರ್ ನರ್ವ್ ಪಂಚರ್ ಆಗಿತ್ತು. ನರ್ವ್ಗೆ ಅಂತ ಮತ್ತೊಂದು ಆಪರೇಷನ್ ಮಾಡಿದರು. ಸ್ಟಿಚ್ ಹಾಕೋವಾಗ ಚಿಕ್ಕ ನೀಡಲ್ ಒಳಗೆ ಸೇರಿತ್ತು. ಮತ್ತಿನ್ನೊಂದು ಆಪರೇಷನ್ ಮಾಡಲಾಯಿತು. ಈ ಮೂರು ಆಪರೇಷನ್ನಿಂದ ಕೈಯಲ್ಲಿ 2 ಬೆರಳುಗಳು ವರ್ಕ್ ಆಗ್ತಿರಲಿಲ್ಲ’’. ನನ್ನ ಕೈಯಲ್ಲಿ ಭಾರ ಎತ್ತೋಕೆ ಆಗಲ್ಲ ಅಂತ ಡಾಕ್ಟರ್ ಹೇಳಿದ್ದರು. ಆದರೆ, ಜಿಮ್ಗೆ ಸೇರಿದೆ. 30 ಕೆಜಿ ವೇಯ್ಟ್ ಎತ್ತಿ ಡಾಕ್ಟರ್ಗೆ ಫೋಟೋ ಕಳುಹಿಸಿದ್ದೆ. ಆನಂತರ ಸ್ಪೋರ್ಟ್ಸ್ಗೆ ಸೇರಿದೆ. ನ್ಯಾಷನಲ್ಸ್ ಆಡಿದೆ. ಬ್ಯಾಡ್ಮಿಂಟನ್, ಕ್ರಿಕೆಟ್ ಆಡಿದೆ. ಅವತ್ತು ಅಪ್ಪ ಕಾಲಿಗೆ ಬೀಳದೆ ಹೋಗಿದ್ದರೆ ಇವತ್ತು ಇಲ್ಲಿ ಇರ್ತಿದ್ನೋ, ಇಲ್ವೋ ಗೊತ್ತಿಲ್ಲ’’ ಅಂತ್ಹೇಳಿ ತಮ್ಮ ಬಾಲ್ಯದ ಕಹಿ ಅಧ್ಯಾಯವನ್ನ ತ್ರಿವಿಕ್ರಮ್ ಬಿಚ್ಚಿಟ್ಟರು. ಹೀಗೆ ಎಲ್ಲರೂ ತಮ್ಮ ಬಾಲ್ಯದ ದಿನಗಳನ್ನ ಮೆಲುಕು ಹಾಕಿದರು.