ಭಾರತದಲ್ಲಿ ಇತ್ತೀಚೆಗೆ ಸ್ಪೋರ್ಟ್ಸ್ ಕಾರುಗಳು ಮತ್ತು ಸೂಪರ್ಕಾರ್ ವೀಕ್ಷಣೆಗಳು ಹೆಚ್ಚು ಸಾಮಾನ್ಯವಾಗಿದೆ. ನಾವು ಈ ಕಾರುಗಳನ್ನು ಹೆಚ್ಚಾಗಿ ಶ್ರೀಮಂತ ಉದ್ಯಮಿಗಳು ಅಥವಾ ಸೆಲೆಬ್ರಿಟಿಗಳೊಂದಿಗೆ ಸಂಯೋಜಿಸುತ್ತೇವೆ. ಈ ಕಾರುಗಳನ್ನು ಹೊಂದಿರುವ ಹೆಚ್ಚಿನ ಜನರು ಯುವಕರು, ಶ್ರೀಮಂತರು ಅಥವಾ ಇಬ್ಬರೂ. ಆದರೆ, ಇತ್ತೀಚೆಗೆ ಕೇರಳದ ವೃದ್ಧ ಭಾರತೀಯ ಅಜ್ಜಿಯೊಬ್ಬರು ಸ್ಪೋರ್ಟ್ಸ್ ಕಾರ್ ಓಡಿಸುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅವರ ಹೆಸರು ರಾಧ ಮನಿಯಮ್ಮ.
ಕೇರಳದಲ್ಲಿ ರಾಧ ಮನಿಯಮ್ಮ ಅಂದ್ರೆ ಒಂದು ದೊಡ್ಡ ಹೆಸರೇ ಇದೆ. ಅವರ ಸಾಧನೆಗಳನ್ನ, ವೃತ್ತಿಯ ಬಗ್ಗೆ ಇರುವ ಅವರ ಶ್ರದ್ಧೆಯ ಕಥೆಗಳನ್ನು ಹೇಳುತ್ತದೆ ಕೇರಳದ ಪ್ರತಿ ಬೀದಿ. ಅದರಲ್ಲೂ ರಾಧಮ್ಮ 11 ಡ್ರೈವಿಂಗ್ ಲೈಸನ್ಸ್ ಹೊಂದಿರುವುದು ಇನ್ನೊಂದು ವಿಶೇಷ. ಇವರು ಕಾರ್, ಸ್ಕೂಟರ್, ಹೆವ್ವಿ ಡ್ಯೂಟಿ ಮಷಿನರಿಗಳಾದಂತಹ ಜೆಸಿಬಿ ಹಾಗೂ ಕ್ರೇನ್ಗಳನ್ನು ಕೂಡ ಓಡಿಸುತ್ತಾರೆ.
74 ವರ್ಷದ ರಾಧಾ ಮನಿಯಮ್ಮ ಬದುಕಿನಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಅವರ ಸಮುದಾಯದಲ್ಲಿ ಉಳಿದವರು ಕಂಡ ಶಿಕ್ಷಣ ಹೊಂದುವ ಬದುಕನ್ನು ಬೇರೆ ರೀತಿ ಕಟ್ಟಿಕೊಳ್ಳುವ ಅವಕಾಶದಿಂದ ಆರಂಭದಲ್ಲಿ ಅವರು ವಂಚಿತರಾದವರು. ಆದ್ರೆ ರಾಧಾ ಅವರಿಗೆ ಡ್ರೈವಿಂಗ್ ಬಗ್ಗೆ ಒಂದು ದೊಡ್ಡ ಹುಚ್ಚು ಇತ್ತು. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳೊಂದಿಗೆ ರಾಧಾ ಹೇಳಿಕೊಂಡಿದ್ದಾರೆ. ತಮ್ಮ ಈ ಆಸಕ್ತಿಯನ್ನು ಅವರು ತಮ್ಮ ಪತಿಯ ಜೊತೆಗೆ ಹಂಚಿಕೊಂಡಿದ್ದರು. 1981ರಲ್ಲಿ ರಾಧಾ ಮನಿಯಮ್ಮ ಅವರು ಮೊದಲ ಬಾರಿ ಕಾರ್ ಡ್ರೈವಿಂಗ್ ಲೈಸೆನ್ಸ್ ಪಡೆದರು. ಇದಾದ ಮೇಲೆ 1984ರಲ್ಲಿ ಮೊದಲ ಬಾರಿ ಬೃಹತ್ ವಾಹನಗಳ ಚಾಲನಾ ಪರವಾನಗಿ ಪತ್ರವನ್ನು ಪಡೆದ ದೇಶದ ಮೊದಲ ಮಹಿಳೆಯೆಂಬ ಹೆಗ್ಗಳಿಕೆಯನ್ನು ಕೂಡ ಪಡೆದರು.
ರಾಧಾಮ್ಮ ಹಾಗೂ ಅವರ ಪತಿ 1970ರ್ಲಿ ಎ2ಝೆಡ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು. ಹೆವ್ವೀ ಇಕ್ವಿಪ್ಮೆಂಟ್ಗಳನ್ನು ಮಾರಾಟ ಮಾಡುತ್ತಿರುವ ವೇಳೆಯೇ ಹಲವು ಜನರಿಗೆ ಹೆವ್ವಿ ವೆಹಿಕಲ್ಗಳನ್ನು ಓಡಿಸುವದನ್ನು ಹೇಳಿಕೊಡುವ ಮೂಲಕಲೈಸನ್ಸ್ ಸಿಗುವಂತೆ ಮಾಡಿತ್ತು ಈ ಜೋಡಿ. 2004ರಲ್ಲಿ ರಾಧಾ ಅವರ ಪತ್ನಿ ತೀರಿಕೊಂಡ ಬಳಿಕ ಅವರ ಎದುರು ದೊಡ್ಡ ಸವಾಲೊಂದು ಎದುರಾಗಿತ್ತು. ಪುರುಷ ಪ್ರಾಧಾನ್ಯತೆಯೇ ಹೆಚ್ಚು ಇರುವ ಅವರ ವ್ಯಾಪಾರವನ್ನು ಮಹಿಳಾ ಸಬಲೀಕರಣದತ್ತ ತೆಗೆದುಕೊಂಡು ಹೋಗುವ ಚಾಲೆಂಜ್ ರಾಧಾ ಅವರ ಎದುರು ಇತ್ತು.
ಅವರ ಶ್ರಮ ಹಾಗೂ ಶ್ರದ್ಧೆ ಅವರನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ಮೂಡುವಂತೆ ಮಾಡಿತು. 2022ರಲ್ಲಿ ವರ್ಷದ ಪ್ರೇರಣಾದಾಯಕ ವ್ಯಕ್ತಿತ್ವ ಎಂಬ ಅವಾರ್ಡ್ನ್ನು ಕೂಡ ರಾಧಾ ಮನಿಯಮ್ಮ ಪಡೆದಿದ್ದಾರೆ. ರಾಧಾ ಮನಿಯಮ್ಮ ಸದ್ಯ ಎಷ್ಟು ಜನಪ್ರಿಯವಾಗಿದ್ದಾರೆ ಅಂದ್ರೆ. ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಮಾರು 29 ಲಕ್ಷ ಜನರು ಫಾಲೋವರ್ಸ್ ಹೊಂದಿದ್ದಾರೆ. ಕೇವಲ 11 ಲೈಸೆನ್ಸ್ ಹೊಂದಿರುವುದು ಮಾತ್ರ ರಾಧಾ ಅವರ ಸಾಧನೆಯಲ್ಲ. ಅವರು ಟ್ರಾನ್ಸ್ಪೋರ್ಟ್ ಉದ್ಯದಮದಲ್ಲಿ ತಮ್ಮದೇ ಆದ ಒಂದು ಎತ್ತರಕ್ಕೆ ಬೆಳೆದಿದ್ದಾರೆ. ಭಾರತದಲ್ಲಿ 73 ವರ್ಷದ ಮಹಿಳೆಯೊಬ್ಬರು ಸ್ಪೋರ್ಟ್ಸ್ ಕಾರನ್ನು ಓಡಿಸುವುದನ್ನು ನಾವು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ ಮತ್ತು ರಾಧಾಮ್ಮ ಇನ್ನೂ ಅನೇಕರಿಗೆ ಸ್ಫೂರ್ತಿಯಾಗಲಿ ಎಂದು ನಾವು ಭಾವಿಸುತ್ತೇವೆ.