ಸೂಪರ್ ಹಿಟ್ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದಿರುವ ಸ್ಯಾಂಡಲ್ವುಡ್ ನಟ ಡಾಲಿ ಧನಂಜಯ್ ವೈವಾಹಿಕ ಬದುಕಿಗೆ ಕಾಲಿಡಲು ಸಜ್ಜಾಗಿದ್ದಾರೆ. ಡಾಲಿ ಮನಸ್ಸು ಕದ್ದ ಹುಡುಗಿ ಯಾರು ಅನ್ನೋದು ಬಹಿರಂಗವಾಗಿದೆ. ಬಹು ಕಾಲದ ಗೆಳತಿ ಧನ್ಯತಾ ಜೊತೆ ಡಾಲಿ ಧನಂಜಯ್ ಮದುವೆಯಾಗುತ್ತಿದ್ದಾರೆ. ವೈದ್ಯೆಯಾಗಿರುವ ಧನ್ಯತಾ ಮೂಲತಃ ಚಿತ್ರದುರ್ಗದವರು. ಕಳೆದ ಕೆಲ ವರ್ಷಗಳಿಂದ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಅದಕ್ಕೆ ಪೂರಕವಾಗಿ ಒಂದೊಂದೇ ಹೆಜ್ಜೆ ಮುಂದಿಡುತ್ತಿರುವ ಚಂದನವನದ ಚಂದದ ಜೋಡಿಯಾದ ಡಾಲಿ ಧನಂಜಯ ಹಾಗೂ ಧನ್ಯತಾ ಇಂದು ಎಂಗೇಜ್ಮೆಂಟ್ ಆಗಿದ್ದಾರೆ.
ಅರಸೀಕೆರೆಯ ಕಾಳೇನಹಳ್ಳಿಯ ಡಾಲಿ ಮನೆಯಲ್ಲಿಯೇ ಸಂಪ್ರದಾಯದಂತೆ ಶಾಸ್ತ್ರಬದ್ದವಾಗಿ ಉಂಗುರ ಬದಲಾಯಿಸಿಕೊಂಡಿದ್ದಾರೆ ಹಾಗೂ ಲಗ್ನಪತ್ರಿಕೆ ಬರೆಸೋ ಶಾಸ್ತ್ರ ಕೂಡ ನೆರವೇರಿದೆ.
ಫೆಬ್ರವರಿ 16, 2025ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಡಾಲಿ ಹಾಗೂ ಧನ್ಯತಾ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ನಡೆಯಲಿದೆ ಈ ಸೂಪರ್ ಜೋಡಿಯ ಮದುವೆ ಸಂಭ್ರಮ. ಧನಂಜಯ ಹಾಗೂ ಧನ್ಯತಾ ಅವರ ನಿಶ್ಚಿತಾರ್ಥದ ಎಕ್ಸ್ಕ್ಲೂಸೀವ್ ಫೋಟೋಸ್ ಗ್ಯಾರಂಟಿ ನ್ಯೂಸ್ ನಲ್ಲಿ ನೋಡಿ..