ಅಮೆರಿಕ ಪ್ರೆಸಿಡೆಂಟ್ ಆಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾಗಿದ್ದೇ ತಡ, ಪಾಕಿಸ್ತಾನಕ್ಕೆ ಟೆನ್ಷನ್ ಶುರುವಾಗಿದೆ. ಮೊದಲೇ ಟ್ರಂಪ್, ಮೋದಿಗೆ ಕ್ಲೋಸ್ ಫ್ರೆಂಡ್. ಜೊತೆಗೆ ಟ್ರಂಪ್ ಕಟ್ಟಿರೋ ಟೀಂನಲ್ಲೂ ಪಾಕಿಸ್ತಾನದ ಕುತಂತ್ರ, ಷಡ್ಯಂತ್ರ, ಉಗ್ರ ಪ್ರೇಮಗಳು ಕಂಡರೆ ಕಿಡಿಕಾರೋವ್ರೇ ಇದ್ದಾರೆ. ಇದು ಪಾಕಿಸ್ತಾನದ ನಿದ್ದೆ ಗೆಡಿಸಿಬಿಟ್ಟಿದೆ.
ಟ್ರಂಪ್ 2.0 ಟೀಂನ್ನ, ಇಂಡಿಯಾ ಕೂಡಾ ಸೂಕ್ಷ್ಮವಾಗಿ ಗಮನಿಸ್ತಾ ಇದೆ. ಯಾಕಂದ್ರೆ ಟ್ರಂಪ್ ಅವರಿಗೆ ಮೋದಿ ಅಂದ್ರೆ ಸ್ವಲ್ಪ ಜಾಸ್ತಿ ಪ್ರೀತಿನೇ ಇರಬಹುದು. ಆದರೆ ಆತನಿಗೆ ಏನಿದ್ದರೂ ಅಮೆರಿಕಾನೇ ಫಸ್ಟು. ಹಾಗಂತ ಹಿಂದೆ ಇದ್ದೋವ್ರ ಹಾಗೆ ಪಾಕಿಸ್ತಾನಕ್ಕೆ ಮುದ್ದು ಮಾಡಿ, ಭಾರತವನ್ನೂ ಡಾರ್ಲಿಂಗ್ ಅಂತಾ ಹೇಳೋ ಅಧ್ಯಕ್ಷರಂತೂ ಟ್ರಂಪ್ ಅಲ್ಲ. ಪಾಕಿಸ್ತಾನಕ್ಕೆ ಟೆನ್ಷನ್ ಕೊಟ್ಟಿರೋದೇ ಟ್ರಂಪ್ ಅವರು ಪಠಿಸ್ತಾ ಇರೋ ಈ ಮಂತ್ರ. ಪಾಕ್ ವಿಚಾರದಲ್ಲಿ ಟ್ರಂಪ್ ಈ ಹಿಂದೆನೂ ಓಪನ್ನಾಗಿಯೇ ಭಯೋತ್ಪಾದನೆ ಕೈಬಿಡಿ ಅನ್ನೋ ಮೆಸೇಜ್ ಕೊಟ್ಟಿದ್ರು. ಈಗ ಟ್ರಂಪ್ 2.0 ಶುರು ಆಗ್ತಿದೆ.
ಡೊನಾಲ್ಡ್ ಟ್ರಂಪ್ ಈಗಾಗಲೇ ತಮ್ಮ ಬಹುತೇಕ ಟೀಂ ಆಯ್ಕೆ ಮಾಡ್ಕೊಂಡಿದ್ದಾರೆ. ಅದರಲ್ಲೂ ವಿದೇಶಾಂಗ ಕಾರ್ಯದರ್ಶಿ, ರಕ್ಷಣಾ ಕಾರ್ಯದರ್ಶಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಬೇಹುಗಾರಿಕೆ ಇಲಾಖೆ ನಿರ್ದೇಶಕರು ಹಾಗೂ ಸಿಐಎ ಮುಖ್ಯಸ್ಥರನ್ನು ಈಗಾಗಲೇ ನೇಮಕ ಮಾಡಿದ್ದಾರೆ. ಇವರೆಲ್ಲಾ ಪಾಕಿಸ್ತಾನದ ಬಗ್ಗೆ ನೆಗೆಟಿವ್ ಆಲೋಚನೆ ಇರೋವ್ರೇ ಆಗಿದ್ದಾರೆ. ಹೀಗಾಗಿ ಪಾಕಿಸ್ತಾನಕ್ಕೆ ಇನ್ ಮುಂದೆ ಅಮೆರಿಕದ ಫೈನಾನ್ಷಿಯಲ್ ಸಪೋರ್ಟು ಸಿಕ್ಕೋದು ಕಷ್ಟವಾಗಲಿದೆ.
ಪಾಕ್ ಟೆನ್ಷನ್ ನಂ.1
ವಿದೇಶಾಂಗ ಕಾರ್ಯದರ್ಶಿ ರೋಬಿಯೋ
ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡಿರೋ ಸೆನೆಟರ್ ಮಾರ್ಕೊ ರೂಬಿಯೋ ಪಾಕಿಸ್ತಾನದ ಕಡು ವಿರೋಧಿ. ಈ ಹಿಂದೆಯೇ ಭಾರತಕ್ಕೆ ಪಾಕಿಸ್ತಾನ ಬೆದರಿಕೆಯಾಗಿರುವ ಬಗ್ಗೆ ಒಂದು ಮಸೂದೆ ಮಂಡಿಸಿದ್ದ ರೋಬಿಯೋ, ಭಾರತದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳ ಹಿಂದೆ ಪಾಕಿಸ್ತಾನದ ನೇರ ಕೈವಾಡವಿದೆ. ಆದ್ದರಿಂದ ಪಾಕಿಸ್ತಾನಕ್ಕೆ ಅಮೆರಿಕದಿಂದ ಯಾವುದೇ ರೀತಿಯ ಭದ್ರತಾ ನೆರವನ್ನು ನೀಡಬಾರದು ಎಂದು ಖಂಡತುಂಡವಾಗಿ ಹೇಳಿದ್ದರು. ಈಗ ಅವರೇ ವಿದೇಶಾಂಗ ಕಾರ್ಯದರ್ಶಿ ಆಗಿರೋದ್ರಿಂದ ಪಾಕಿಸ್ತಾನದಲ್ಲಿ ಟೆನ್ಷನ್ ಶುರು ಆಗಿದೆ.
ಪಾಕ್ ಟೆನ್ಷನ್ ನಂ.2
ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕ್ ವಾಲ್ಟ್
ಇನ್ನು, ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಆಯ್ಕೆಯಾಗಿರೋ ಮೈಕ್ ವಾಲ್ಟ್ ಅವರೂ ಪಾಕಿಸ್ತಾನದ, ಪಾಕಿಸ್ತಾನ ನಡೆಸ್ತಾ ಇರೋ ಭಯೋತ್ಪಾದನೆಯ ವಿರೋಧಿ. ಭಯೋತ್ಪಾದನೆ, ವಿದೇಶಾಂಗ ನೀತಿಯ ಸಾಧನವಾಗೋಕೆ ಸಾಧ್ಯವೇ ಇಲ್ಲ. ಪಾಕಿಸ್ತಾನ ಸರ್ಕಾರ, ಪಾಕ್ ಸೇನೆ ಮತ್ತು ಐಎಸ್ಐ, ಲಷ್ಕರ್-ಎ-ತೈಬಾದಂತಹ ಉಗ್ರ ಸಂಘಟನೆಗಳನ್ನು ಬಿಟ್ಟು ಮುಂದೆ ಬರಬೇಕು. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವ ದೇಶ ಪಾಕಿಸ್ತಾನ. ಆ ದೇಶವನ್ನ ಗಡಿಯಾಚೆಗಿನ ಭಯೋತ್ಪಾದನೆಗೆ ಹೊಣೆಗಾರರನ್ನಾಗಿ ಮಾಡಬೇಕು. ಇಲ್ಲದೇ ಇದ್ದರೆ ಭಯೋತ್ಪಾದನೆ ನಿಯಂತ್ರಣ ಹೇರೋದು ಅಸಾಧ್ಯ ಎಂದು ಬಹಿರಂಗವಾಗಿಯೇ ಹೇಳಿದ್ದ ವ್ಯಕ್ತಿ. ಈಗ ಅದೇ ವಾಲ್ಟ್ಜ್ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದಾರೆ.
ಪಾಕ್ ಟೆನ್ಷನ್ ನಂ.3
ಬೇಹುಗಾರಿಕಾ ಇಲಾಖೆ ನಿರ್ದೇಶಕಿ ತುಳಸಿ ಗಬ್ಬಾರ್ಡ್
ಟ್ರಂಪ್ ಆಡಳಿತದಲ್ಲಿ ಅಮೆರಿಕದ ಬೇಹುಗಾರಿಕಾ ಇಲಾಖೆ ನಿರ್ದೇಶಕರಾಗಿ ತುಳಸಿ ಗಬ್ಬಾರ್ಡ್ ಬಂದು ಕೂತ್ಕೊತಿದ್ದಾರೆ. ಗಬ್ಬಾರ್ಡ್ ಕೂಡ ಪಾಕಿಸ್ತಾನ ಅಂದ್ರೇ ಕಣ್ಣು ಕೆಂಪಗೆ ಮಾಡಿಕೊಳ್ತಾರೆ. 2019ರ ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದನ್ನ ಸಮರ್ಥಿಸಿಕೊಂಡಿದ್ದವರು ತುಳಸಿ ಗಬ್ಬಾರ್ಡ್.
ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ಗೆ ಆಶ್ರಯ ಕೊಟ್ಟಿದ್ದಕ್ಕೆ ಪಾಕಿಸ್ತಾನದ ವಿರುದ್ಧ ಕಟುವಾಗಿ ತುಳಸಿ ಟೀಕಿಸಿದ್ದರು. ಈಗ ಅವರು ಅಮೆರಿಕದ ಬೇಹುಗಾರಿಕೆ ಲಾಖೆಯ ನಿರ್ದೇಶಕರಾಗ್ತಿದ್ದಾರೆ. ಅಲ್ದೆ ತುಳಸಿ ಗಬ್ಬಾರ್ಡ್ ಅವರಿಗೆ ಇಡೀ ದಕ್ಷಿಣ ಏಷ್ಯಾದ ಟೆರರ್ ಪಾಲಿಟಿಕ್ಸಿನ ಸಂಪೂರ್ಣ ಪರಿಚಯ ಇದೆ. ಜೊತೆಗೆ ಎಲ್ಲಕ್ಕಿಂತ ಹೆಚ್ಚಾಗಿ ತುಳಸಿ ಗಬ್ಬಾರ್ಡ್, ಹಿಂದೂ ಧರ್ಮ ಹಾಗೂ ಭಗವದ್ಗೀತೆಯನ್ನು ಪಾಲಿಸ್ತಾರೆ.ಇದೆಲ್ಲವೂ ಪಾಕಿಸ್ತಾನಕ್ಕೆ ಟೆನ್ಷನ್ ಕೊಡ್ತಿದೆ.
ಪಾಕ್ ಟೆನ್ಷನ್ ನಂ.4
ಸಿಐಎ ಮುಖ್ಯಸ್ಥ ಜಾನ್ ರಾಟ್ಲಿಫ್
ಈ ವ್ಯಕ್ತಿ ಕೂಡಾ ಪಾಕಿಸ್ತಾನ, ಚೀನಾ ಮೇಲೆ ತಮ್ಮ ಹದ್ದಿನ ಕಣ್ಣಿಟ್ಟಿದ್ದಾರೆ. ಇವರು ಕೂಡ ಪಾಕಿಸ್ತಾನ ಹಾಗೂ ಅದರ ನೀತಿಗಳ ಕಡು ವಿರೋಧಿ. ಡೊನಾಲ್ಡ್ ಟ್ರಂಪ್ ಅವರ ಕ್ಯಾಬಿನೆಟ್ ಹಂತ ಹಂತವಾಗಿ ರಚನೆ ಆಗ್ತಾ ಇದೆ. ಪ್ರತೀ ಸಲ ಅಮೆರಿಕದ ಕ್ಯಾಬಿನೆಟ್ಟಿನಲ್ಲಿ ಪಾಕ್ ಪ್ರೇಮಿಗಳಿಗೆ ಚಾನ್ಸ್ ಸಿಗ್ತಾ ಇತ್ತು. ಈ ಬಾರಿ ಹಾಗಾಗಿಲ್ಲ.
ಅಲ್ದೆ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕು. ಬಹಿರಂಗವಾಗಿ ಮಾತನಾಡಬೇಕು ಅಂತಿರೋ ಅಮೆರಿಕ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಈಗಾಗಲೇ ಒಂದು ಮೆಸೇಜ್ ಕೊಟ್ಟಿದೆ.
ಡೊನಾಲ್ಡ್ ಟ್ರಂಪ್ ಅವರ 2.0ನಲ್ಲಿ ಆಯಕಟ್ಟಿನ ಜಾಗಗಳಲ್ಲಿ ಭಾರತವನ್ನ ಪ್ರೀತಿಸುವವರಿದ್ದಾರೆ. ಅದೇ ವೇಳೆ ಪಾಕಿಸ್ತಾನವನ್ನ, ಆ ದೇಶ ನಡೆಸ್ತಾ ಇರೋ ಭಯೋತ್ಪಾದನೆಯನ್ನ ದ್ವೇಷ ಮಾಡೋವ್ರೂ ಇದ್ದಾರೆ. ಸದ್ಯಕ್ಕೇನೋ ನಡೀತಾ ಇರೋ ಎಲ್ಲ ಬೆಳವಣಿಗೆಗಳೂ ಭಾರತಕ್ಕೆ ಪೂರಕವಾಗಿಯೇ ಇವೆ. ಇದೆಲ್ಲದರ ಲಾಭ ಹೇಗಿರುತ್ತೆ ಅನ್ನೋದನ್ನ ಕಾದು ನೋಡ್ಬೇಕು.