ಮಹಾರಾಷ್ಟ್ರ ಚುನಾವಣೆಯ ಮತದಾನ ಇಂದು ಕೊನೆಗೊಳ್ಳುತ್ತಿದೆ. ಫಲೋಡಿ ಸಟ್ಟಾ ಬಜಾರ್ ಮಹಾಯುತಿ ಮತ್ತು ಇಂಡಿಯಾ ಬ್ಲಾಕ್ನ ತನ್ನ ಅಂದಾಜು ಸಮೀಕ್ಷೆಯ ವರದಿಯನ್ನ ಪ್ರಕಟಿಸಿದೆ. ಈ ಸಟ್ಟಾ ಬಜಾರ್ ವರದಿಯ ಪ್ರಕಾರ ಮಹಾಯುತಿ ಸರ್ಕಾರ ರಚಿಸುತ್ತದೆ ಎಂದು ಹೇಳಿದೆ.
ಮಹಾರಾಷ್ಟ್ರ ಒಟ್ಟಾರೆ ಕ್ಷೇತ್ರ : 288
ಸರಳ ಬಹುಮತಕ್ಕೆ : 145
ಮಹಾಯುತಿ : ಬಿಜೆಪಿ, ಶಿವಸೇನೆ (ಶಿಂಧೆ) ಹಾಗೂ ಎನ್ಸಿಪಿ (ಅಜಿತ್ ಪವಾರ್)
ಇಂಡಿಯಾ : ಕಾಂಗ್ರೆಸ್, ಎನ್ಸಿಪಿ (ಶರದ್ ಪವಾರ್) ಮತ್ತು ಶಿವಸೇನೆ (ಉದ್ಧವ್ ಠಾಕ್ರೆ)
ರಾಜಸ್ತಾನದ ಪಲೋಡಿ ಸಟ್ಟಾ ಬಜಾರ್ ಲೆಕ್ಕ
ಮಹಾಯುತಿ : 144-152
ಇಂಡಿಯಾ : 120-132
ಪಲೋಡಿ ಸಟ್ಟಾ ಬಜಾರ್ ನಂಬೋದು ಯಾಕೆ?
- ರಾಜಸ್ತಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವು ಹೇಳಿತ್ತು.
- ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಹೇಳಿತ್ತು.
- ಲೋಕಸಭೆಯಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಲಿದೆ ಎಂದು ಹೇಳಿತ್ತು.
- ಬಿಜೆಪಿ ಏಕಾಂಗಿಯಾಗಿ ಸರ್ಕಾರ ರಚನೆ ಸಾಧ್ಯವಿಲ್ಲ ಎಂದಿತ್ತು.
- ಅಮೆರಿಕದಲ್ಲಿ ಟ್ರಂಪ್ ಗೆಲುವಿನ ಭವಿಷ್ಯ ಖಚಿತವಾಗಿತ್ತು.
- ಬಹುತೇಕ ಸಮೀಕ್ಷೆಗಳಿಗೆ ವ್ಯತಿರಿಕ್ತವಾಗಿತ್ತು ಸಟ್ಟಾ ಬಜಾರ್.
ಸಟ್ಟಾ ಬಜಾರ್, ಇದನ್ನ ಯಾರು ಮಾಡ್ತಾರೆ, ಯಾವ ರೀತಿ ಮಾಡ್ತಾರೆ ಅನ್ನೋದಕ್ಕೆ ದಾಖಲೆಗಳು ಲಭ್ಯ ಇಲ್ಲ. ಯಾಕಂದ್ರೆ ಇದು ನಿಗೂಢ ಲೋಕದಲ್ಲಿ ನಡೆಯೋ ಬೆಟ್ಟಿಂಗ್ ಬಿಸಿನೆಸ್. ಇಲ್ಲಿ ಪ್ರತಿದಿನ ಮುಂಜಾನೆ 7 ಗಂಟೆಗೆ ಬಿಡ್ಡಿಂಗ್ ಆಗುತ್ತೆ. ಅದು ಕೂಡಾ ಬಿಡ್ಡಿಂಗ್ ಮಾಡೋವ್ರಿಗೆ ಗೊತ್ತಿರುತ್ತೆ. ಇದರ ಬಗ್ಗೆ ಮಾಹಿತಿ ಗೊತ್ತಿರೋವ್ರಿಗೆ ಮಾತ್ರವೇ ಮಾಹಿತಿ ಗೊತ್ತು. ಇಲ್ಲಿ ಕೋಟಿ ಕೋಟಿ ಹಣ ಕೈಬದಲಾಗುತ್ತೆ.
ಸಟ್ಟಾ ಬಜಾರ್ ವ್ಯವಹಾರದಲ್ಲಿ ನಂ.1 ಸ್ಥಾನದಲ್ಲಿರೋದು ರಾಜಸ್ತಾನದ ಪಲೋಡಿ ಸಟ್ಟಾ ಬಜಾರ್. ಈ ಗ್ರಾಮ ರಾಜಸ್ತಾನದ ಪುಟ್ಟ ಗ್ರಾಮ. ಈ ಗ್ರಾಮದಿಂದ ಸಟ್ಟಾ ಬಜಾರ್ ರನ್ ಆಗುತ್ತೆ. ಇದನ್ನ ಬಿಟ್ರೆ ಕೊಲ್ಕತ್ತಾ, ಆಂಧ್ರಪ್ರದೇಶದ ವಿಜಯವಾಡ ಸಟ್ಟಾ ಬಜಾರ್ ಲೆಕ್ಕಕ್ಕೂ ಅಷ್ಟೇ ಮಹತ್ವ ಇದೆ.