ಉಡುಪಿ ಪ್ರವಾಸದಲ್ಲಿರುವ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಪೈಲಟ್ ಇಲ್ಲದೇ ಹೆಲಿಕಾಪ್ಟರ್ನಲ್ಲೆ ಕುಳಿತೂ ಪೈಲಟ್ಗೆ ಕಾಯ್ದು ಕಾಯ್ದು ಸುಸ್ತಾದ ಘಟನೆ ನಡೆದಿದೆ.
ಇಂದು ಬೆಂಗಳೂರಿನಿಂದ ಉಡುಪಿಗೆ ಹೆಲಿಕಾಪ್ಟರ್ ಮೂಲಕ ತೆರಳಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಿದ್ರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಕೆ ನಂತರ ಮೀನುಗಾರಿಕೆ ಇಲಾಖೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಬೆಂಗಳೂರಿಗೆ ವಾಪಸ್ ಆಗುವ ವೇಳೆ ಹೆಲಿಪ್ಯಾಡ್ನಲ್ಲಿ ಪೈಲಟ್ ಇಲ್ಲದೇ ಡಿಸಿಎಂ ಡಿ.ಕೆ ಶಿವಕುಮಾರ್ ಹೆಲಿಕಾಪ್ಟರ್ನಲ್ಲೆ ಸುಮಾರು 20 ನಿಮಿಷಗಳ ಕಾಲ ಕಾಯ್ದು ಸುಸ್ತಾಗಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರ ಕಾರ್ಯಕ್ರಮಗಳು ಬೇಗನೇ ಮುಗಿದ ಪರಿಣಾಮ ಡಿಸಿಎಂ ಹೆಲಿಪ್ಯಾಡ್ಗೆ ಬೇಗನೇ ಬಂದ್ರೂ ಪೈಲಟ್ ಇಲ್ಲದ ಕಾರಣ ಸುಮಾರು 20 ನಿಮಿಷ ತಡವಾಗಿ ಕಾಪ್ಟರ್ನಲ್ಲಿ ಪ್ರಯಾಣ ಬೆಳಿಸಿದ್ರು.
ಇಂದು ಬೆಳಗ್ಗೆ ಬೆಂಗಳೂರಿನಿಂದ ಉಡುಪಿಗೆ ಪ್ರಯಾಣ ಬೆಳಿಸಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಮಧ್ಯಾಹ್ನ 1:30ಕ್ಕೆ ಬೈಂದೂರಿನ ಹೆಲಿಪ್ಯಾಡ್ ನಿಂದ ಬೆಂಗಳೂರಿಗೆ ಆಗಮಿಸಬೇಕಾಗಿತ್ತು. ಆದ್ರೆ ಅವಧಿಗಿಂತ ಮುಂಚೇಯೇ ಹೆಲಿಪ್ಯಾಡ್ ಗೆ ಆಗಮಿಸಿದ ಡಿಸಿಎಂ ಅವರು 20 ನಿಮಿಷ ಹೆಲಿಕಾಪ್ಟರ್ ನಲ್ಲಿ ಕುಳಿತುಕೊಳ್ಳಬೇಕಾಗಿತು. ನಂತರ ಆಗಮಿಸಿದ ಪೈಲಟ್ ತರಾತುರಿಯಲ್ಲಿ ಕಾಪ್ಟರ್ ಪರಿಶೀಲನೆ ನಡೆಸಿದರು. ಆದ್ರೆ ವಾಯುಯಾನದ ನಿಮಯಾವಳಿ ಉಲ್ಲಂಘನೆಯಾಗಬಾರದೆಂದು ಪೈಲಟ್ ಸರಿಯಾದ ಸಮಯಕ್ಕೆ ಹೆಲಕಾಪ್ಟರ್ ಟೇಕ್ ಆಫ್ ಮಾಡಿದ ಪರಿಣಾಮ ಡಿಸಿಎಂ ಡಿಕೆ ಶಿವಕುಮಾರ್ ಕಾಪ್ಟರ್ ನಲ್ಲೆ ಸುಮಾರು 20 ನಿಮಿಷ ಕಾಯ್ದು ಕುಳಿತಕೊಂಡಿದ್ದು ಕುತೂಹಲ ಮೂಡಿಸಿತು.