ಬೆಂಗಳೂರು: ಏಕ್ ಲವ್ ಯಾ ಮೂವಿ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪರಿಚಿತರಾಗಿದ್ದ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಅವರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ರಾಣಾ ಅವರ ಎಂಗೇಜ್ಮೆಂಟ್ ಕಾರ್ಯಕ್ರಮ ಸರಳವಾಗಿ ನೆರವೇರಿದೆ. ಇದೀಗ ಎಂಗೇಜ್ಮೆಂಟ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಲವ್ ಮ್ಯಾರೇಜಾ.. ಅರೆಂಜ್ ಮ್ಯಾರೇಜಾ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಆದರೆ ಪ್ರೇಮ್ ಎಲ್ಲಿ ಅಂತ ನೆಟ್ಟಿಗರು ಪ್ರಶ್ನೆ ಇಡುತ್ತಿದ್ದಾರೆ. ಮೂಲಗಳ ಪ್ರಕಾರ ಪ್ರೇಮ್ ಸದ್ಯ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಪ್ರೇಮ್ ತಮ್ಮ ಕೆ.ಡಿ ಚಿತ್ರದ ಚಿತ್ರೀಕರಣಕ್ಕೆ ಶಿವಮೊಗ್ಗದಲ್ಲಿ ಇದ್ದಾರೆ ಎನ್ನಲಾಗುತ್ತಿದೆ.
ರಾಣಾ ಅವರು ವರಿಸುತ್ತಿರುವ ಯುವತಿಯ ಹೆಸರು ತಿಳಿದು ಬಂದಿಲ್ಲ. ಆದರೆ ಫೋಟೋದಲ್ಲಿ ಇರುವುದನ್ನು ನೋಡಿದರೆ ಇಬ್ಬರ ಜೋಡಿ ಹೇಳಿ ಮಾಡಿಸಿದಂತೆ ಇದೆ. ಈ ನಿಶ್ಚಿತಾರ್ಥ ಎಲ್ಲಿ ನಡೆಯಿತು ಎಂಬುದು ತಿಳಿದು ಬಂದಿಲ್ಲವಾದರೂ ಮನೆಯಲ್ಲಿ ನಡೆದಿರಬಹುದು ಎನ್ನುವುದು ಊಹೆ ಆಗಿದೆ. ಇನ್ನು ರಾಣಾ ಅವರು ಯಾವಾಗ, ಎಲ್ಲಿ ಮದುವೆ ಆಗುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಸುವ ಸಾಧ್ಯತೆ ಇದೆ.
ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ (ಅಭಿಷೇಕ್) ಹೆಸರಿನಲ್ಲಿ ಕನ್ನಡ ಚಿತ್ರರಂಗದ ಮೂಲಕ ತನ್ನ ಸಿನಿ ಕೆರಿಯರ್ ಪ್ರಾರಂಭಿಸಿದ್ದರು. ಮೊದಲ ಸಿನಿಮಾದಲ್ಲಿ ಸಕ್ಸಸ್ ಕಂಡಿದ್ದರು. ಏಕ್ ಲವ್ ಯಾ ಸಿನಿಮಾವನ್ನು ಇವರ ಮಾವ, ಸ್ಟಾರ್ ಡೈರೆಕ್ಟರ್ ಪ್ರೇಮ್ ಅವರು ನಿರ್ದೇಶನ ಮಾಡಿದ್ದರು. ಸುದೀಪ್ ಸೇರಿ ಇತರೆ ನಟರು, ರಾಣಾ ಅವರನ್ನು ಕನ್ನಡ ಸಿನಿಮಾರಂಗಕ್ಕೆ ಸ್ವಾಗತಿಸಿದ್ದರು.