ಬಿಗ್ಬಾಸ್ ಮನೆಯಲ್ಲಿ ಕಳಪೆ ಮತ್ತು ಉತ್ತಮ ನೀಡುವ ವಿಚಾರದಲ್ಲಿ ಹೊತ್ತಿ ಉರಿದಿದೆ. ಬಹುತೇಕ ಸ್ಪರ್ಧಿಗಳು ಕಳಪೆಗೆ ರಜತ್ ಕಿಶನ್ ಹೆಸರು ತೆಗೆದುಕೊಂಡಿದ್ದು, ರಜತ್ ಜೈಲು ಸೇರಿದ್ದಾರೆ. ಇಂದು ರಾತ್ರಿ ಪ್ರಸಾರವಾಗುವ ಎಪಿಸೊಡ್ನ ಪ್ರೊಮೋ ಒಂದನ್ನು ಬಿಗ್ಬಾಸ್ ಶೇರ್ ಮಾಡಿದ್ದಾರೆ. ಅದರಲ್ಲಿ ಮೋಕ್ಷಿತಾ, ಹನುಮಂತ, ಗೋಲ್ಡ್ ಸುರೇಶ್, ಶೋಭಾ ಶೆಟ್ಟಿ, ಐಶ್ವರ್ಯ, ಶಿಶೀರ್ ಸೇರಿದಂತೆ ಹಲವರು ಕಳಪೆ ರಜತ್ ಎಂದು ಹೇಳಿದ್ದಾರೆ. ಇದರಿಂದ ರಜತ್ ಕೆರಳಿ ಕೆಂಡವಾಗಿದ್ದಾರೆ.
ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟು ಒಂದು ವಾರ ಕಳೆದಿದೆ. ರಜತ್ ಆಟಕ್ಕೆ ಆಡುವ ಮಾತಿಗೆ ಇಡೀ ಮನೆ ಅವರ ವಿರುದ್ಧ ತಿರುಗಿ ಬಿದ್ದಿದೆ. ಈ ವಾರದ ಉತ್ತಮ ಸ್ಪರ್ಧಿ ಮತ್ತು ಕಳಪೆ ಪ್ರದರ್ಶನ ಆಡಿದವರಿಗೆ ಹೆಸರನ್ನು ಸೂಚಿಸಲು ಎಂದಿನಂತೆ ಬಿಗ್ ಬಾಸ್ ಸೂಚಿಸಿದರು. ಅದರಂತೆ ಇಡೀ ಮನೆ ಮಂದಿ ರಜತ್ ಹೆಸರನ್ನು ಹೇಳಿದ್ದಾರೆ.
ಗೋಲ್ಡ್ ಸುರೇಶ್ಗೆ ಅವಾಚ್ಯ ಪದಗಳಿಂದ ನಿಂದಿಸಿದ ಕಾರಣ ಕೊಟ್ಟು ರಜತ್ಗೆ ಕಳಪೆ ಪಟ್ಟ ನೀಡಿದ್ದಾರೆ. ಇದು ರಜತ್ ಕೋಪಕ್ಕೆ ಕಾರಣವಾಗಿದೆ. ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭವಲ್ಲ. ಬಿಗ್ ಬಾಸ್ ಆಟ ಗೆಲ್ಲೋದು. ಹುಟ್ಟಿದಾಗಿನಿಂದಲೂ ಹೀಗೆ ಇದ್ದೀನಿ. ಇನ್ಮುಂದೆ ಕೂಡ ಹೀಗೆ ಇರುತ್ತೇನೆ. ಇನ್ಮುಂದೆ ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆ. ಇನ್ಮುಂದೆ ನಿಜವಾದ ಆಟ ಶುರು ಎಂದು ರಜತ್ ಮನೆ ಮಂದಿಗೆ ಸವಾಲೆಸೆದಿದ್ದಾರೆ.
ಅಂದ್ಹಾಗೆ ರಜತ್ ಕಳೆವಾರವಷ್ಟೇ ವೈಲ್ಡ್ ಕಾರ್ಡ್ ಮೂಲಕ ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಬರ್ತಿದ್ದಂತೆಯೇ ಕೆಲವು ಸ್ಪರ್ಧಿಗಳನ್ನು ನೇರವಾಗಿ ಟಾರ್ಗೆಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೇ ಅವರು ಬಳಸುತ್ತಿರುವ ಪದಗಳ ಬಗ್ಗೆ ಭಾರೀ ಚರ್ಚೆ ಆಗ್ತಿದೆ. ಸ್ಪರ್ಧಿಗಳಿಗೂ ಅಸಮಾಧಾನ ಇದೆ.