ಇತ್ತೀಚಿನ ದಿನಗಳಲ್ಲಿ ಎಲ್ಲವೂ ತಂತ್ರಜ್ಞಾನ ಆಧರಿತ ವ್ಯವಸ್ತೆಯಾಗಿದೆ. ಮುಂಜಾನೆಯಿಂದ ರಾತ್ರಿಯವರೆಗೂ ಮನುಷ್ಯನ ಪ್ರತಿ ಕೆಲಸದಲ್ಲೂ ಟೆಕ್ನಾಲಜಿ ನಮ್ಮನ್ನ ಆವರಿಸಿದೆ. ಅದರಂತಯೇ ಇದೀಗ ಹೊಸ ಆವಿಷ್ಕಾರಕ್ಕೆ ಮುಂದಾಗಿದೆ ವಿಷನ್ ಫ್ಯಾಕ್ಸ್ ಕಂಪನಿ. ಹೌದು..ಅಪರಾಧ ಪ್ರಕರಣಗಳಲ್ಲಿ ತೊಡಗಿಸಿ ಕೊಂಡಿರುವ ಕ್ರಿಮಿನಲ್ಗಳ ಪತ್ತೆಗೂ ಒಂದು ಕೃತಕ ಬುದ್ಧಿಮತ್ತೆ ಬಂದಿದೆ. ಸ್ಟಾರ್ಟಪ್ ತಂತ್ರಜ್ಞಾನವೊಂದನ್ನು ವಿಷನ್ ಫ್ಯಾಕ್ಸ್ ಎಐ ಅಭಿವೃದ್ಧಿಪಡಿಸಿದೆ.
ಅದರಲ್ಲಿ ಸೆರೆಯಾಗುವ ವಿಡಿಯೋ ಚಿತ್ರಗಳನ್ನು ಆಧರಿಸಿ, ವಿವಿಧ ಕೃತ್ಯಗಳಲ್ಲಿ ತೊಡಗಿರುವ ಕ್ರಿಮಿನಲ್ಗಳ ಪತ್ತೆಗೆ ಸಹಕಾರಿ ಆಗಲಿದೆ. ಆದರೆ, ಇದಕ್ಕಾಗಿ ಪೊಲೀಸರ ಬಳಿ ಈಗಾಗಲೇ ಇರುವ ಕ್ರಿಮಿನಲ್ಗಳ ಪಟ್ಟಿಯನ್ನು ಅಭಿವೃದ್ಧಿಪಡಿಸಿದ ಡಿವೈಸ್ ಮೂಲಕ ತಾಂತ್ರಿಕವಾಗಿ ವಿಶ್ಲೇಷಣೆ ಮಾಡಬೇಕಾಗುತ್ತದೆ. ‘ಸಾಮಾನ್ಯವಾಗಿ ಪೊಲೀಸರ ಬಳಿ ಕ್ರಿಮಿನಲ್ಗಳ ಪಟ್ಟಿ ಇರುತ್ತದೆ.
ಆ ಕ್ರಿಮಿನಲ್ಗಳ ಫೋಟೋ ಸಹಿತ ಎಲ್ಲ ವಿವರವನ್ನು ವಿಷನ್ ಫ್ಯಾಕ್ಸ್ ಎಐ ಅಭಿವೃದ್ಧಿಪಡಿಸಿದ ಡಿವೈಸ್ನಲ್ಲಿ ಅಳವಡಿಸಿದರೆ ಸಾಕು, ಆ ದತ್ತಾಂಶ ವಿಶ್ಲೇಷಣೆ ಮಾಡುತ್ತದೆ. ಈ ಅಪರಾಧಿಗಳು ಯಾವುದೇ ಘಟನೆ ನಡೆದ ಸ್ಥಳದಲ್ಲಿ ಹಾಜರಿದ್ದರೆ, ಅಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿನ ವಿಡಿಯೋ ತುಣುಕುಗಳಲ್ಲಿ ಸೆರೆಯಾಗಿರುತ್ತಾನೆ. ಅದನ್ನು ಎಐ ಡಿವೈಸ್ನಲ್ಲಿ ಹಾಕಿದರೆ ಮಾಹಿತಿ ಸಿಗಲಿದೆ’ ಎಂದು ಟೆಕ್ ಶೃಂಗದಲ್ಲಿ ವಿಜನ್ ಫ್ಯಾಕ್ಸ್ ಎಐನ ಅರುಣ್ ತಿಳಿಸಿದರು.