ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಗೆದ್ದು ಬೀಗಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ಗೆ ಜಂಪ್ ಆದರೂ ಜನತೆ ಯೋಗೇಶ್ವರ್ ಕೈಹಿಡಿದಿದ್ದಾರೆ. ಮೊದಲ 6 ಸುತ್ತಿನಲ್ಲಿ ನಿಖಿಲ್ ಮುನ್ನಡೆಯಲ್ಲಿದ್ದರು. ಆದರೆ ಚನ್ನಪಟ್ಟಣ ನಗರದ ಇವಿಎಂ ಓಪನ್ ಆಗುತ್ತಿದ್ದಂತೆ ಯೋಗೇಶ್ವರ್ ಅವರಿಗೆ ಭರ್ಜರಿ ಮುನ್ನಡೆ ಸಿಕ್ಕಿತ್ತು. ಈ ಮುನ್ನಡೆಯನ್ನು ಯೋಗೇಶ್ವರ್ ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರು. ಹಾಗಾದರೆ ನಿಖಿಲ್ ಸೋಲಿಗೆ ಕಾರಣಗಳೇನು ಎಂಬುದನ್ನ ನೋಡೋಣ..
ಚನ್ನಪಟ್ಟಣದಲ್ಲಿ ನಿಖಿಲ್ ಸೋಲಿಗೆ 10 ಕಾರಣಗಳು
ಕಾರಣ 1 – ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ತೆಕ್ಕೆಗೆ ಜಾರಿದ ಯೋಗೇಶ್ವರ್
ಕಾರಣ 2 – ಡಿಕೆ ಬ್ರದರ್ಸ್ ರಣ ತಂತ್ರಕ್ಕೆ ನಿರುತ್ತರವಾದ ನಿಖಿಲ್ ಕುಮಾರಸ್ವಾಮಿ
ಕಾರಣ 3 – ನಿಖಿಲ್ ಪರವಾಗಿ ಬಿಜೆಪಿ ವತಿಯಿಂದ ದೊಡ್ಡ ಮಟ್ಟದ ಪ್ರಚಾರ ಮಾಡಲಿಲ್ಲ
ಕಾರಣ 4 – ಸತತ 2 ಸೋಲಿನ ನಂತರ ಗೆಲ್ಲುವ ಅತಿ ಆತ್ಮವಿಶ್ವಾದಲ್ಲಿದ್ದ ನಿಖಿಲ್
ಕಾರಣ 5 - ಕಾಂಗ್ರೆಸ್ಗೆ ಮುಸ್ಲಿಂ ಮತಗಳ ಕ್ರೋಢೀಕರಣಕ್ಕೆ ನೆರವಾದ ಜಮೀರ್
ಕಾರಣ 6 – ಕುಮಾರಸ್ವಾಮಿಗೆ ಒಲಿದಷ್ಟು ಒಕ್ಕಲಿಗ ಮತಗಳು ನಿಖಿಲ್ಗೆ ಸಿಗಲಿಲ್ಲ
ಕಾರಣ 7 – ‘ಕೊನೆಯ ಹೋರಾಟʼ, ಕಣ್ಣೀರು ಪಾಲಿಟಿಕ್ಸ್ಗೆ ಕರಗದ ಮತದಾರ
ಕಾರಣ 8 – ನಿಖಿಲ್ರನ್ನು ಬಲವಂತವಾಗಿ ಚನ್ನಪಟ್ಟಣ ಅಖಾಡಕ್ಕೆ ಇಳಿಸಿದ್ರಾ ಎಚ್ಡಿಕೆ
ಕಾರಣ 9 – ಜೆಡಿಎಸ್ ಮುಖಂಡರ ಸಂಘಟಿತ ಪ್ರಚಾರ ಕಾಣದೇ ಇರೋದು
ಕಾರಣ 10 – ಸಿಪಿ ಯೋಗೇಶ್ವರ್ ವೈಯಕ್ತಿಕ ವರ್ಚಸ್ಸು