ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮೆಲುಗೈ ಸಾಧಿಸಿದೆ. ಈ ಮೂರು ಕ್ಷೇತ್ರಗಳಲ್ಲಿ ಗೆದ್ದ ಮೂರು ಜನ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲೆಕ್ಷನ್ ಆಗಿದೆ. ಶಿಗ್ಗಾಂವಿಯಲ್ಲಿ ಹಠಕ್ಕೆ ಬಿದ್ದು ಸಿಎಂ ಸಿದ್ದರಾಮಯ್ಯ ಅವರು, ಯಾಸೀರ್ ಪಠಾಣ್ಗೆ ಟಿಕೆಟ್ ಕೊಡಿಸಿದ್ದರು. ಆದರೆ ಸಂಡೂರು ಟಿಕೆಟ್ ತುಕಾರಾಂ ಕುಟುಂಬಕ್ಕೆ ಮೀಸಲು ಎಂದು ಮೊದಲೇ ನಿರ್ಧಾರವಾಗಿತ್ತು. ಸಂಡೂರು ಜವಾಬ್ದಾರಿಯನ್ನು ಸಂತೋಷ್ ಲಾಡ್, ಶಿಗ್ಗಾಂವಿಯಲ್ಲಿ ಜಮೀರ್ ಅಹ್ಮದ್ ಜವಾಬ್ದಾರಿ ಹೊಣೆಯನ್ನು ಹೊತ್ತಿದ್ದರು.
ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದ ಕಾರಣ ಮುಡಾ ಹಗರಣ, ಜಮೀರ್ ಕಾಂಟ್ರವರ್ಸಿಗಳೂ ಈಗ ಹಿನ್ನೆಲೆಗೆ ಬಿದ್ದಿದ್ದು, ಅಹಿಂದ ಮತಗಳು ಸಿದ್ದರಾಮಯ್ಯ ಕಾರಣದಿಂದ ಕಾಂಗ್ರೆಸ್ ಕೈ ತಪ್ಪಲ್ಲ ಎಂಬ ಸಂದೇಶ ರವಾನೆಯಾಗಿದೆ. ಮೂರಕ್ಕೆ ಮೂರು ಕ್ಷೇತ್ರ ‘ಕೈ’ ಗೆದ್ದಿರುವ ಕಾರಣದಿಂದ ಸಿಎಂ ಬದಲಾವಣೆ ವಿಚಾರಕ್ಕೆ ಬ್ರೇಕ್ ಬಿದ್ದಿದೆ. ಇನ್ನು ಎರಡೂವರೆ ವರ್ಷವೂ ನಾನೇ ಸಿಎಂ ಆಗಿರುತ್ತೇನೆ ಎಂದು ಹೈಕಮಾಂಡ್ಗೆ ರವಾನಿಸಿದ್ದು, ನಂಬಿಕಸ್ಥ ಶಿಷ್ಯರನ್ನು ನಂಬಿ ಸಿಎಂ ಸಿದ್ದರಾಮಯ್ಯ ಗೆಲುವು ಸಾಧಿಸಿದ್ದಾರೆ.