ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಪರಸ್ಪರ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಆಗಾಗ್ಗೆ ಹರಿದಾಡುತ್ತಲೇ ಇರುತ್ತದೆ. ತಮ್ಮ ಪ್ರೀತಿಯ ಸುದ್ದಿಯನ್ನು ರಶ್ಮಿಕಾ ಆಗಲಿ ವಿಜಯ್ ಆಗಲಿ ಒಪ್ಪಿಕೊಂಡಿಲ್ಲ ಆದರೆ ಅಲ್ಲಗಳೆದು ಸಹ ಇಲ್ಲ. ಆಗಾಗ್ಗೆ ಈ ಇಬ್ಬರು ಒಟ್ಟಿಗಿರುವ ಚಿತ್ರಗಳು ವೈರಲ್ ಆಗುತ್ತವೆ. ಆಗ ಇಬ್ಬರ ಲವ್ ಲೈಫ್ ಬಗ್ಗೆ ಕೆಲ ಕಾಲ ಚರ್ಚೆ ಆಗುತ್ತದೆ. ಅದಾದ ಬಳಿಕ ಮತ್ತೆ ಈ ಜೋಡಿಯ ಸುದ್ದಿಯೇ ಇರುವುದಿಲ್ಲ. ಇದೀಗ ಈ ಇಬ್ಬರು ಔಟಿಂಗ್ ಹೋಗಿರುವ ಚಿತ್ರ ವೈರಲ್ ಆಗಿದೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ರೆಸ್ಟೊರೆಂಟ್ ಒಂದರಲ್ಲಿ ಊಟ ಮಾಡುತ್ತಿರುವ ಚಿತ್ರ ಇದೀಗ ವೈರಲ್ ಆಗಿದೆ. ಇಬ್ಬರೂ ಸಹ ಕ್ಯಾಶುಲ್ ರೀತಿಯ ಬಟ್ಟೆ ಧರಿಸಿ ರೆಸ್ಟೊರೆಂಟ್ನಲ್ಲಿ ಊಟ ಮಾಡುತ್ತಿದ್ದಾರೆ. ಈ ಚಿತ್ರ ಮುಂಬೈನಲ್ಲಿ ತೆಗೆಯಲಾಗಿದೆ ಎನ್ನಲಾಗುತ್ತಿದೆ. ಇಬ್ಬರೂ ಸಹ ನೀಲಿ ಬಣ್ಣದ ಬಟ್ಟೆ ಧರಿಸಿದ್ದು ಐಶಾರಾಮಿ ರೆಸ್ಟೊರೆಂಟ್ನಲ್ಲಿ ಒಟ್ಟಿಗೆ ಭೋಜನ ಸವಿಯುತ್ತಿದ್ದಾರೆ. ಸ್ವತಃ ರಶ್ಮಿಕಾ ಮಂದಣ್ಣ ಸಹ ತಮ್ಮ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ವಿಜಯ್ರ ಚಿತ್ರವನ್ನು ಹಂಚಿಕೊಂಡಿಲ್ಲ.
ವಿಜಯ್ ಹಾಗೂ ರಶ್ಮಿಕಾ ಹೀಗೆ ಒಟ್ಟಿಗೆ ರೆಸ್ಟೊರೆಂಟ್ಗಳಲ್ಲಿ ಕಾಣಿಸಿಕೊಂಡಿರುವುದು ಇದು ಮೊದಲೇನಲ್ಲ. ಈ ಹಿಂದೆ ಹಲವು ಬಾರಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಈ ಹಿಂದೆ ಇವರಿಬ್ಬರೂ ವಿದೇಶಿ ಪ್ರವಾಸಗಳಿಗೆ ಸಹ ಹೋಗಿದ್ದರು. ಇಬ್ಬರೂ ಒಟ್ಟಿಗೆ ಪ್ರವಾಸಕ್ಕೆ ಹೋಗಿದ್ದರೂ ಸಹ ಪ್ರತ್ಯೇಕವಾಗಿ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದರು. ಇನ್ನು ರಶ್ಮಿಕಾ ಮಂದಣ್ಣ ಎಲ್ಲ ಹಬ್ಬಗಳನ್ನು ಆಚರಣೆ ಮಾಡುವುದು ವಿಜಯ್ ದೇವರಕೊಂಡ ಅವರ ಮನೆಯಲ್ಲಿಯೇ. ಇಬ್ಬರೂ ಪರಸ್ಪರ ಬಹಳ ಆತ್ಮೀಯರಾಗಿದ್ದಾರೆ ಆದರೆ ಈ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿಲ್ಲ.