ತಹಶಿಲ್ದಾರ್ ಕಚೇರಿಯಲ್ಲಿ ಎಸ್ಡಿಎ ರುದ್ರೇಶ್ ಆತ್ಮಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಸಾವಿನ ತನಿಖೆ ಸಿಬಿಐಗೆ ವಹಿಸುವಂತೆ ಮತ್ತೊಂದು ಅನಾಮಧೇಯ ಪತ್ರವನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಬರೆದಿದ್ದಾರೆ.
ಪತ್ರದಲ್ಲಿ ಏನಿದೆ..?
ರುದ್ರೇಶ್ ಆತ್ಮಹತ್ಯೆಗೆ ಕಾರಣರಾದ ತಹಶಿಲ್ದಾರ್ ಹಾಗೂ ಸಿಬ್ಬಂದಿ ವಿರುದ್ಧ ತನಿಖೆ ನಡೆಸಲು ಹಾಗೂ ಸಿಬಿಐಗೆ ಪ್ರಕರಣ ವಹಿಸಲು ಮನವಿ ಮಾಡಲಾಗಿದೆ. ರುದ್ರೇಶ್ ಸಾವಿನ ಕುರಿತು ಸಾಕಷ್ಟು ಅನುಮಾನಗಳಿವೆ. ಪ್ರಕರಣದ ತನಿಖೆ ದಿಕ್ಕು ತಪ್ಪಿಸಲು ತಹಶಿಲ್ದಾರ್ ಕಚೇರಿ, ಸಿಬ್ಬಂದಿ ಹಾಗೂ ತಹಶಿಲ್ದಾರ್ ಬಸವರಾಜ ಬೆನ್ನೆಲುಬಾಗಿ ನಿಂತಿದ್ದಾರೆ. ಕಚೇರಿ ಸಿಬ್ಬಂದಿಗೆ ಎನೂ ಗೊತ್ತಿಲ್ಲ ಎನ್ನುವಂತೆ ಹೇಳಿಕೆ ನೀಡುವಂತೆ ಕೆಲವರು ಒತ್ತಡ ಹಾಕಿದ್ದಾರೆ. ಗ್ರಾಮ ಆಡಳಿತ ಅಧಿಕಾರಿ ಎಸ್.ಪಿ ಶಿಂಧೆ, ಗ್ರಾಮ ಆಡಳಿತಾಧಿಕಾರಿ ಕಿರಣ್ ತೋರಗಲ್, ದ್ವೀತಿಯ ದರ್ಜೆ ಸಹಾಯಕಿ ಸುರೇಖಾ ನೇರ್ಲಿ, ಗ್ರಾಮ ಆಡಳಿತಾಧಿಕಾರಿ ಬಸನಗೌಡ ಪಾಟೀಲ್ ಒತ್ತಡ ಹಾಕಿದವರು. ಈ ಹಿಂದೆ ತಹಶಿಲ್ದಾರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರದೀಪ್ ಪಾಟೀಲ್ ಆತ್ಮಹತ್ಯೆಗೆ ಸುರೇಖಾ ನೇರ್ಲಿ ಕಾರಣ. ಎಸ್.ಪಿ ಶಿಂಧೆ ಮತ್ತು ತಹಶಿಲ್ದಾರ್ ಡ್ರೈವರ್ ಯಲ್ಲಪ್ಪ ಬಡಸದ ಕೇಸ್ ಮುಚ್ಚಿ ಹಾಕಿದ್ದಾರೆ. ಜವಾನ ಪ್ರದೀಪ್ ಸಾವಿನ ಕುರಿತು ಕೂಡ ತನಿಖೆ ನಡೆಸುವಂತೆ ಒತ್ತಾಯ ಮಾಡಲಾಗಿದೆ.
ತಹಶಿಲ್ದಾರ್ ಗೆ ಜಾಮೀನು ಸಿಕ್ಕ ದಿನ ಶಿಂಧೆ ಕಚೇರಿಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಶಿಂಧೆ ವಿರುದ್ಧ ಮಾತಾಡಿದ ಸಿಬ್ಬಂದಿಗೆ ತಹಶಿಲ್ದಾರ್ ಮೂಲಕ ಕಿರುಕುಳ ಕೊಟ್ಟಿದ್ದಾರೆ. ಕಿರಣ್ ತೋರಗಲ್ ಘಟನೆ ಆದ ದಿನದಿಂದ ಕಚೇರಿಗೆ ಬಂದಿರುವುದಿಲ್ಲ. ಬಸನಗೌಡ ಪಾಟೀಲ್, ಶಿಂಧೆ ತಹಶಿಲ್ದಾರ್ ಬಲಗೈ ಬಂಟರಂತೆ ಇದ್ದಾರೆ. ಜಾಮೀನು ಕೊಡಿಸಲು ಇವರೇ ಹಣವನ್ನ ನೀಡಿದ್ದಾರೆ. ಅಷ್ಟೇ ಗ್ರಾಮದ ರಿ.ಸ.ನಂ 82/ಪಿ1 ಜಮೀನು ಮಾಲೀಕ ಮಹೇಶ್ ಚೌಗುಲೆ ಆತ್ಮಹತ್ಯೆ ಮಾಡಿಕೊಂಡ. ಇದಕ್ಕೆ ಕಾರಣ ಬಸನಗೌಡ ಪಾಟೀಲ್ ಮತ್ತು ಶ್ರೀಕಾಂತ್ ಹೈಗರ್ ಕಾರಣ ಅಂತಾ ದೂರು ಬಂದಿರುತ್ತೆ. ಈ ಕೇಸ್ ವಿಚಾರಣೆ ಮಾಡಿರುವುದಿಲ್ಲ, ಈ ಕೇಸ್ ತನಿಖೆ ಕೂಡ ಆಗಬೇಕು. ಪ್ರಕರಣಗಳಲ್ಲಿ ರಾಜಕೀಯ ಒತ್ತಡ ಇರುವುದರಿಂದ ಸಿಬಿಐಗೆ ಒಪ್ಪಿಸಬೇಕು. ನೊಂದ ಕುಟುಂಬಗಳಿಗೆ ನ್ಯಾಯವನ್ನ ಕೊಡಿಸುವಂತೆ ರಾಷ್ಟ್ರಪತಿಗೆ ಮನವಿ ಮಾಡಲಾಗಿದೆ.
ನೊಂದ ಸಿಬ್ಬಂದಿ ಹೆಸರಲ್ಲಿ ರಾಷ್ಟ್ರಪತಿಗೆ ಬರೆದಿರುವ ಪತ್ರದಲ್ಲಿ ಹಲವು ಸ್ಪೋಟಕ ಅಂಶಗಳು ಬೆಳಕಿಗೆ ಬಂದಿವೆ.