ಪ್ರಿಯಕನೋರ್ವ ತನ್ನ ಪ್ರೇಯಸಿಯನ್ನೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರಿನ ಇಂದಿರಾ ನಗರದ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಹತ್ಯೆಗೊಳಗಾದ ಯುವತಿ ಅಸ್ಸಾಂ ಮೂಲದ ಮಾಯ ಗೊಗಾಯ್ ಎಂದು ಗುರುತಿಸಲಾಗಿದ್ದು, ಯುವತಿಯು ಹೆಚ್ಎಸ್ಎಆರ್ ಲೇಔಟ್ನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಯಳನ್ನು ಕೊಂದು ಆರವ್ ಹಾರ್ನಿ ಎನ್ನುವಾತ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಇಂದಿರಾನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.
ಈ ಪ್ರಕರಣದ ಕುರಿತು ಇಂದಿರಾ ನಗರದ ಪೊಲೀಸರಿಂದ ತನಿಖೆ ನಡೆಯುತ್ತಿದ್ದು, ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕೊಲೆಗೆ ಸಂಬಂಧಿಸಿ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ಈಗ ಪೊಲೀಸರ ಕೈ ಸೇರಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಯುವತಿ ಮಾಯ ಗೊಗೋಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಸಿಸಿಟಿವಿ ದೃಶ್ಯ ದೊರೆತಿದ್ದು, ನವೆಂಬರ್ 23 ರಂದು ಮಧ್ಯಾಹ್ನ ಸರ್ವಿಸ್ ಅಪಾರ್ಟ್ಮೆಂಟ್ಗೆ ಮಾಯಾ ಆಗಮಿಸಿದ್ದಾಳೆ. ಅಪಾರ್ಟ್ಮೆಂಟ್ಗೆ ಮಾಯಾ ಗೊಗೋಯ್ ಹಾಗೂ ಆರವ್ ಅರ್ನಿ ಇಬ್ಬರು ಬಂದಿದ್ದಾರೆ. ಇವರಿಬ್ಬರು ಬಂದ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ. ಇನ್ನು ನವೆಂಬರ್ 24 ರಂದೇ ಮಾಯಾ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಮಾಯಾಳ ಕೊಲೆ ಬಳಿಕ ಜಅದೇ ರೂಮ್ನಲ್ಲಿಯೇ ಉಳಿದುಕೊಂಡಿದ್ದ ಆಸಾಮಿ, ಅಲ್ಲೇ ಕೂತು ಸಿಗರೇಟ್ ಸೇದಿದ್ದಾನೆ. ಕೊಲೆ ಮಾಡಿದ ನಂತರ ಮೃತದೇಹ ಜೊತೆಯಲ್ಲೇ ಕಾಲ ಕಳೆದಿದ್ದಾನೆ. ನಂತರ ಇಂದು ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಆರೋಪಿ ತೆರಳಿದ್ದಾನೆ. ಆರೋಪಿಗೆ ಮೃತದೇಹವನ್ನು ಪೀಸ್ ಮಾಡೊ ಪ್ಲಾನ್ ಇತ್ತಾ ಎಂಬ ಅನುಮಾನ ಪೊಲೀಸರಿಗೆ ಅನುಮಾನ ಮೂಡಿದೆ.
ಆರೋಪಿ ಆರವ್ ಅರ್ನಿ ಮಾಯಾ ಕೊಲೆ ಮಾಡಿದ ಬಳಿಕ, ಒಂದು ದಿನ ಮೃತದೇಹದ ಜೊತೆಗೆ ಕಾಲ ಕಳೆದಿದ್ದ. ಹಾಗಾಗಿ ಮೃತದೇಹ ಪೀಸ್ ಪೀಸ್ ಮಾಡುವ ಬಗ್ಗೆ ಪ್ಲಾನ್ ಮಾಡಿದ್ದ ಗೆಂಬ ಶಂಕೆ ಈಗ ಪೊಲೀಸರಿಗೆ ಕಾಡುತ್ತಿದೆ. ಕೊನೆಗೆ ಪ್ಲಾನ್ ಫೇಲ್ ಆಗಿ ಮೃತದೇಹ ಬಿಟ್ಟು ಪಾರಾರಿಯಾಗಿದ್ದಾನೆ ಎಂದು ಇಂದಿರಾನಗರದ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಆರೋಪಿ ಮಾಯಾಳನ್ನು ಉಸಿರುಗಟ್ಟಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ಕೈಗೂ ಕೂಡ ಚಾಕುವಿನಿಂದ ಇರಿದಿದ್ದಾನೆ. ಇವರಿಬ್ಬರು ಕಳೆದ ಎರಡು ದಿನಗಳ ಹಿಂದೆ ರೂಮ್ ಬುಕ್ ಮಾಡಿದ್ದರು. ಪೊಲೀಸರಿಗೆ ಕೊಲೆ ಮಾಡಿರುವ ಶಂಕೆ ಇದ್ದು, ಇಂದು ಬೆಳಗ್ಗೆ ಆರೋಪಿ ಎಸ್ಕೇಪ್ ಆಗಿದ್ದಾನೆ.