ತೆಲುಗಿನ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ್ ಕಿರಿಯ ಮಗ ಅಖಿಲ್ ಅಕ್ಕಿನೇನಿ ಮಗದೊಮ್ಮೆ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಯೆಸ್.. ಏಳೆಂಟು ಚಿತ್ರಗಳಲ್ಲಿ ನಟನಾಗಿಯೂ ಗುರ್ತಿಸಿಕೊಂಡಿರೋ ನಟ ಅಖಿಲ್, ಝೈನಬ್ ರವದ್ಜೀ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಸ್ವತಃ ಅದನ್ನ ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಪೋಸ್ಟ್ ಹಾಕಿ, ಖುಷಿ ಹಂಚಿಕೊಂಡಿದ್ದಾರೆ. ನನ್ನ ಹುಡುಗಿ ಸಿಕ್ಕಳು.. ಖುಷಿಯಿಂದ ಎಂಗೇಜ್ ಆಗಿದ್ದೇವೆ ಎಂದಿದ್ದಾರೆ. ಅಂದಹಾಗೆ 2016ರಲ್ಲಿ ಉದ್ಯಮಿ ಜಿ. ವಿ. ಕೃಷ್ಣಾರೆಡ್ಡಿ ಮೊಮ್ಮಗಳು ಶ್ರೀಯಾ ಭೂಪಾಲ್ ಜೊತೆ ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥವಾಗಿತ್ತು ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ.
2017ರಲ್ಲಿ ಶ್ರೀಯಾ ಮತ್ತು ಅಖಿಲ್ ಕಲ್ಯಾಣ ನಿಶ್ಚಯವಾಗಿತ್ತು. ಆದ್ರೆ ಕಾರಣ ಹೇಳದೆ ಅವರುಗಳ ಮದುವೆ ರದ್ದುಗೊಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಮತ್ತೊಂದು ಹುಡುಗಿ ಕೈ ಹಿಡಿಯಲು ಮುಂದಾಗಿರೋ ಅಖಿಲ್ ನ ಕಂಡು, ತಂದೆಗೆ ತಕ್ಕ ಮಗ ಅಂತ ನೆಟ್ಟಿಗರು ಕಾಲೆಳೆಯೋಕೆ ಮುಂದಾಗಿದ್ದಾರೆ. ಅತ್ತ ನಾಗ್ ಹಿರಿಯ ಮಗ ನಾಗಚೈತನ್ಯ ಕೂಡ ಸಮಂತಾಗೆ ಡಿವೋರ್ಸ್ ನೀಡಿ, ಎರಡನೇ ಮದ್ವೆಗೆ ಸಜ್ಜಾಗಿದ್ದಾರೆ. ಹೀಗಾಗಿ ತಂದೆಯಂತೆ ಮಕ್ಕಳು ಕೂಡ ಎರಡೆರಡು ಬಾರಿ ಮದ್ವೆಗೆ ಸಜ್ಜಾಗ್ತಿರೋದು ತೀವ್ರ ಚರ್ಚೆಗೆ ಗ್ರಾಸವಾಗಿದೆ.